gulbargametro

ಭಕ್ತಿ ಭಾವದ ಶ್ರೀ ವೀರಭದ್ರೇಶ್ವರ ಉತ್ಸವ ಸಂಪನ್ನ

ಗುರುಮಠಕಲ್: ಪಟ್ಟಣದ ನಾರಾಯಣಪೂರ ಬಡಾವಣೆಯ ಶ್ರೀಭದ್ರಕಾಳಿ ಸಮೇತ  ವೀರಭದ್ರೇಶ್ವರ ಉತ್ಸವವು ಭಕ್ತಿ ಭಾವದಿಂದ ಸಂಪನ್ನ ಗೊಂಡಿತು. ಪ್ರತಿವರ್ಷ ಶ್ರಾವಣಮಾಸ ನಂತರ ಬರುವ ಎರಡನೇ ಮಂಗಳವಾರದಂದು ನಡೆಯುವ ಈ ಉತ್ಸವದ ನಿಮಿತ್ಯ ಬೆಳಗ್ಗೆ ಶ್ರೀ ಭದ್ರಕಾಳಿ ಮತ್ತು ಶ್ರೀ ವೀರಭದ್ರ ಸ್ವಾಮಿಗೆ ವಿಶೇಷ ಅಭಿಷೇಕ,ವಿವಿಧ ಹೂಗಳಿಂದ ವಿಶೇಷ ಅಲಂಕಾರ ನಡೆಯಿತು. ಶ್ರೀ ವೀರಭದ್ರೇಶ್ವರ ಉತ್ಸವ ಮೂರ್ತಿಯ ಪಲ್ಲಕ್ಕಿಸೇವೆಯು ವೀರಭದ್ರನ ಅವತಾರದ ವಡಬುಗಳ ವಚನಗಳನ್ನು ಸಾರುವ ಮೂಲಕ ಶಸ್ತ್ರಗಳ ಸೇವೆ ಸಲ್ಲಿಸುವ ವೀರಗಾಸೆ ಕುಣಿತ ದ ಮೂಲಕ  ಪುರವಂತರಿಂದ ನಡೆಯಿತು….

Read More

ಕ್ರೀಡೆಯಲ್ಲಿ ಸೊಲು ಗೆಲುವು ಮುಖ್ಯವಲ್ಲಾ ಭಾಗವಹಿಸುವಿಕೆ ಮುಖ್ಯ

ಚಿತ್ತಾಪುರ ; ಕ್ರೀಡೆಯಲ್ಲಿ ಸೊಲು ಮತ್ತು ಗೆಲುವು ಮುಖ್ಯವಲ್ಲಾ ಕ್ರೀಡಾಕೂಟಗಳಲ್ಲಿ ಭಾಗವಹಿಸುವಿಕೆ ಮುಖ್ಯವಾಗಿರುತ್ತದೆ ಎಂದು ತಾಪಂ ಇಓ ಮಹ್ಮದ ಅಕ್ರಂ ಪಾಶಾ ಹೇಳಿದರು.  ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ದಸರಾ ಕ್ರೀಡಾಕೂಟವನ್ನು ಉದ್ಘಾಟಸಿ ಮಾತನಾಡಿದ ಅವರು ಕ್ರೀಡೆಗಳಲ್ಲಿ ತೀರ್ಪುಗಾರರ ತೀರ್ಪು ಅಂತಿಮವಾಗಿರುತ್ತದೆ. ಹೀಗಾಗಿ ಯಾರು ಅವರ ತೀರ್ಪಿನ ವಿರುದ್ದ ಅಪಸ್ವರ ಎತ್ತಬಾರದು. ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ವೃದ್ದಿಗೆ ಪೂರಕವಾಗಿದ್ದು ಎಲ್ಲರೂ ಕ್ರೀಡಾಸಕ್ತಿಯನ್ನು ಬೆಳೆಸಿಕೊಳ್ಳಬೇಕು…

Read More

ಸರ್ಕಾರಿ ಅಸ್ಪತ್ರೆಗೆ ಹೆಚ್ಚುವರಿ ವೈದ್ಯರನ್ನು ನೇಮಿಸಲು ಒತ್ತಾಯ

ಚಿತ್ತಾಪುರ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆಯಿಂದ ತಾಲೂಕಿನ ಜನರು ನಿತ್ಯ ನೂರಾರು ಜನರು ತೊಂದರೆಯನ್ನು ಅನುಭವಿಸುತ್ತಿದ್ದು ಹೆಚ್ಚಿನ ತಜ್ಞ ವೈದ್ಯರನ್ನು ನೇಮಿಸಬೇಕು ಎಂದು ತಾಲೂಕು ದೈಹಿಕ ಮತ್ತು ಮಾನಸಿಕ ಅಂಗವಿಕಲರ ವಿವಿದೊದ್ದೇಶ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಮಹ್ಮದ ಇಬ್ರಾಹಿಂ ಒತ್ತಾಯಿಸಿದ್ದಾರೆ. ಕ್ಷೇತ್ರದ ಶಾಸಕರು ಹಾಗೂ ಸಚಿವರಾಗಿರುವ ಪ್ರಿಯಾಂಕ್ ಖರ್ಗೆರವರ ಇಚ್ಚಾಶಕ್ತಿ ಹಾಗೂ ಬಡವರಿಗೆ ಉಚಿತವಾಗಿ ಆರೊಗ್ಯ ಸೇವೆಯನ್ನು ನೀಡುವ ಉದ್ದೇಶದಿಂದ ಅತೀ ವಿಶಾಲವಾದ ೧೦೦ ಹಾಸಿಗೆಯುಳ್ಳ ಸರ್ಕಾರಿ ಆಸ್ಪತ್ರೆ ಇದ್ದು ಇಲ್ಲಿ ಇಸಿಜಿ,…

Read More

ಬಸವ ಸಂಸ್ಕೃತಿ ಅಭಿಯಾನದಲ್ಲಿ ಎಲ್ಲರು ಭಾಗವಹಿಸಿ

ಸುರಪುರ: ಇದೇ ಸಪ್ಟೆಂಬರ್ ೧ ರಿಂದ ಬಸವನಬಾಗೇವಾಡಿಯಲ್ಲಿ ಬಸವ ಸಂಸ್ಕೃತಿ ಅಭಿಯಾನಕ್ಕೆ ಚಾಲನೆ ದೊರೆಯಲಿದ್ದು ಸಪ್ಟೆಂಬರ್ ೪ಕ್ಕೆ ಯಾದಗಿರಿಗೆ ಆಗಮಿಸಲಿದೆ. ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಗುರುಮಠಕಲ್ ಖಾಸಾ ಮಠದ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮೀಜಿ ತಿಳಿಸಿದರು. ನಗರದ ರಂಗAಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿರುವ ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ಸಪ್ಟೆಂಬರ್ ೧ ರಂದು ಬಸವನಬಾಗೇವಾಡಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದ್ದು,೪ ರಂದು ಯಾದಗಿರಿ ನಗರಕ್ಕೆ ಆಗಮಿಸುವ ಅಭಿಯಾನ ಎಸ್.ಎನ್ ಪಾಟೀಲ್ ಕಲ್ಯಾಣ ಮಂಟಾಪದಲ್ಲಿ…

Read More

ತಳವಾರಗೇರಾ : ಕಳ್ಳತನ ಆರೋಪಿ ಬಂಧನ

ಸುರಪುರ: ತಾಲ್ಲೂಕಿನ ತಳವಾರಗೇರಾ ಗ್ರಾಮದಲ್ಲಿ ಪ್ರಕಾಶ ಪತ್ತಾರ ಎನ್ನುವವರ ಮನೆಯಲ್ಲಿ ಫೆಬ್ರವರಿ ೨೨ ರಂದು ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸಿರುವ ಪೊಲೀಸರು,ಕಳ್ಳತನ ಮಾಡಿದ್ದ ಬಂಗಾರ ಆಭರಣಗಳನ್ನು ವಶಪಡಿಸಕೊಂಡಿದ್ದಾರೆ. ಅOದಾಜು ೩.೭೮ ಲಕ್ಷ ಮೌಲ್ಯದÀ ೭೦ ಗ್ರಾಂ ಬಂಗಾರದ ವಿವಿಧ ಆಭರಣಗಳು ಮತ್ತು ೧ ಲಕ್ಷ ರೂಪಾಯಿ ನಗದು ಕಳ್ಳತನವಾಗಿರುವ ಕುರಿತು ಫೆ.೨೨ ರಂದು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು, ವಿಜಯಪುರ ಜಿಲ್ಲೆ,ತಾಲೂಕಿನ ಹೊನ್ನಾಳಿ ಗ್ರಾಮದ ಸಂತೋಷ ನಂದ್ಯಾಳ ಎನ್ನುವ ಚಾಲಕನನ್ನು ವಶಕ್ಕೆ…

Read More

ನೊಂದವರಿಗೆ ನ್ಯಾಯ ಕೊಡಿಸಿ- ಇಕ್ಬಾಲ್ ಕಾಸಿಂ

ವಡಗೇರಾ:-ಕಾನೂನು ಪದವಿ ಓದಲು ಹೆಚ್ಚಿನ ವಿದ್ಯಾರ್ಥಿಗಳು ಬಯಸುತ್ತಿದ್ದಾರೆ. ಆದ್ರೇ ಕಪ್ಪು ಕೋಟು ಧರಿಸಿ ನ್ಯಾಯಾಲದಲ್ಲಿ ಸೂಕ್ತ ಸಾಕ್ಷಿಗಳನ್ನು ಕಲೆ ಹಾಕಿ ಕೇಸ್‌ ವಾದಿಸುವುದು ಇತ್ತೀಚೆಗೆ ತುಂಬಾ ಕಷ್ಟದ ಕೆಲಸವಾಗಿದೆ ಎಂದು ಜವಾಹರ್ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಇಕ್ಬಾಲ್ ಕಾಸಿಂ ಕಳವಳ ವ್ಯಕ್ತಪಡಿಸಿದರು. ವಡಗೇರಾ ತಾಲೂಕಿನ ಕುಮನೂರು ಗ್ರಾಮದಲ್ಲಿ ಪ್ರಥಮ ಬಾರಿಗೆ ಕಾನೂನು ಪದವಿ ಪಡೆದ ಬಾಬು ಎಸ್ ಪೊಲೀಸ್ ಪಟೇಲ್ ಅವರಿಗೆ ಗ್ರಾಮಸ್ಥರಿಂದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅನ್ಯಾಯದ ವಿರುದ್ಧ ವಾದ ಮಾಡಿ ನ್ಯಾಯ ಕೊಡಿಸುವುದು ಕಾನೂನು…

Read More

ವಿಜ್ಞೇಶ್ವರನ ಸ್ಥಾಪನೆಯಿಂದ ಬಾಂದ್ಯವ್ಯ ಇನ್ನು ಗಟ್ಟಿಯಾಗಲು ಸಹಕಾರಿಯಾಗುತ್ತದೆ- ನಾಗರಾಜ ಭಂಕಲಗಾ

ಚಿತ್ತಾಪುರ: ಪ್ರತಿ ವರ್ಷವು ಸಂಪ್ರದಾಯದAತೆ ಪ್ರತಿಷ್ಟಾಪಿಸುವ ವಿಜ್ಞೇಶ್ವರನ ಸ್ಥಾಪನೆಯಿಂದ ಸರ್ವಧರ್ಮಿಯರಲ್ಲಿ ಭಾಂದವ್ಯ ಗಟ್ಟಿಯಾಗಲು ಸಹಕಾರಿಯಾಗುತ್ತದೆ ಮತ್ತು ಮನಸ್ಸಿಗೆ ಶಾಂತಿ, ಸಮಾಧಾನ, ನೆಮ್ಮದಿ ಲಭಿಸಲಿದೆ ಎಂದು ಪುರಸಭೆ  ವಿರೋಧ ಪಕ್ಷದ ನಾಯಕ ನಾಗರಾಜ ಭಂಕಲಗಾ ಅವರು ಹೇಳಿದರು. ಪಟ್ಟಣದ ಸಂತೊಷ ನಗರದಲ್ಲಿ ಶ್ರೀ ವಿನಾಯಕ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳಿಗೆ ಉಚಿತ ಆರೊಗ್ಯ ತಪಾಸಣೆ ಶಿಬಿರ, ರಂಗೊಲಿ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಓಣಿಯ ಎಲ್ಲರೂ ಒಂದಡೇ ಕೂಡಿಕೊಂಡು ವಿವಿಧ ಸ್ಪರ್ಧೇಗಳನ್ನು ಏರ್ಪಡಿಸುವದರಿಂದ…

Read More

ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಅದ್ಯತೆ : ಶರಣಗೌಡ ಕಂದಕೂರ

ಗುರುಮಠಕಲ್: ಗಡಿಭಾಗದ ಕ್ರೀಡಾಪ್ರೇಮಿ ಮತ್ತು ಕ್ರೀಡಾಪಟುಗಳು ಉತ್ತಮ ಸಾಧನೆಗೈಯಲು ಅನುಕೂಲವಾಗುವ ನಿಟ್ಟಿನಲ್ಲಿ ಗುರುಮಠಕಲ್ ವ್ಯಾಪ್ತಿಯಲ್ಲಿ ಐದು ಎಕರೆಯಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು. ಪಟ್ಟಣದ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ತಾಲೂಕಾ ಪಂಚಾಯತ್, ಮತ್ತು ಪುರಸಭೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ  2025-26 ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ಕ್ರೀಡಾಜ್ಯೋತಿ ಉದ್ಘಾಟಿಸಿ ಮಾತನಾಡಿದ ಅವರು, ಗಡಿಭಾಗದ ಈ ನಾಡಿನಲ್ಲಿ ಉತ್ತಮ…

Read More

ಪ್ರಜಾ ಸೌಧ, ಉತ್ಸವ ದಿನಾಚರಣೆ ಯಶಸ್ಸಿಗೆ ಸಿದ್ಧತೆ ಮಾಡಿಕೊಳ್ಳಿ-ನಲಿನ್ ಅತುಲ್

ಕಲ್ಯಾಣ ಕರ್ನಾಟಕ ಉತ್ಸವ ಪೂರ್ವಭಾವಿ ಸಭೆ: ಕಲಬುರಗಿ :  ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಭಾಗವಹಿಸಲು ಮತ್ತು ಪ್ರಜಾ ಸೌಧ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಸೆ.16 ಮತ್ತು 17 ರಂದು ಎರಡು ದಿನಗಳ ಕಾಲ ಕಲಬುರಗಿಗೆ ಆಗಮಿಸಲಿದ್ದು, ಕಾರ್ಯಕ್ರಮ ಯಶಸ್ವಿಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುವಂತೆ ಕೆ.ಕೆ.ಆರ್.ಡಿ.ಬಿ ಮಂಡಳಿ ಕಾರ್ಯದರ್ಶಿ ನಲಿನ್ ಅತುಲ್ ಹೇಳಿದರು. ಮಂಗಳವಾರ ಇಲ್ಲಿನ ಕೆ.ಕೆ.ಆರ್.ಡಿ.ಬಿ. ಸಭಾಂಗಣದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೆ.16 ರಂದು ಯಡ್ರಾಮಿಯಲ್ಲಿ ನಡೆಯುವ…

Read More

ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಮತ್ತು ಅಧಿಕಾರಿಗಳಿಂದ ೨೦ ಜನರ ರಕ್ಷಣೆ

ಕಲಬುರಗಿ: ಚಿತ್ತಾಪುರ ತಾಲೂಕಿನ ಬೆಳವಡಿ ಗ್ರಾಮ ವು ಅತಿಯಾದ ಮಳೆಯಿಂದ ಗ್ರಾಮವು ಸಂಪೂರ್ಣ ವಾಗಿ ಜಲವೃತ್ ವಾದ ಕಾರಣ ಸ್ಥಳಕ್ಕೆ ಕಲಬುರ್ಗಿ ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಅಧಿಕಾರಿ ಗಳು ಸ್ಥಳಕ್ಕೆ ಆಗಮಿಸಿ ೨೦ ಜನರನ್ನು ರಕ್ಷಣೆ ಮಾಡಿರುತ್ತಾರೆ ಹಾಗೂ ಎಲ್ಲ ಜನರಿಗೆ ಸುರಕ್ಷಿತ್ ಸ್ಥಳಕ್ಕೆ ತೆರಳಲು ಮನವಿ ಮಾಡಿದರು. ಕಲಬುರ್ಗಿ ಜಿಲ್ಲಾ ಅಗ್ನಿಶಾಮಕ್ ಅಧಿಕಾರಿ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಎಎಸ್‌ಓ ಆಂಜನೇಯ, ಅಗ್ನಿಶಾಮಕ ಸಿಬ್ಬಂದಿ ಗಳಾದ ಸತೀಶಎಲ್ ಎಫ್, ನೈಮೋದಿನ, ಗಬ್ಬರ್ಸಿಂಗ್, ಶಂಕರಲಿAಗ, ಮಲ್ಲಪ್ಪ, ಅಮಿತ, ಬಸವರಾಜ…

Read More
error: Content is protected !!