ಯಾದಗಿರಿ: ಜಿಲ್ಲೆಯ ಹುಣಸಗಿ ತಾಲೂಕಿನ ತೆಗ್ಗೆಳ್ಳಿ ಗ್ರಾಮದಲ್ಲಿ ನಡೆದ ತೆಗ್ಗೆಳ್ಳಿ ಪ್ರಿಮಿಯರ್ ಲೀಗ್ ಅಂತ್ಯಗೊಂಡಿದೆ. ರಣರೋಚಕ ಪಂದ್ಯಗಳು ನಡೆದಿದ್ದು IPL ಮಾದರಿಯಲ್ಲಿಯೇ ಗ್ರಾಮೀಣ ಪ್ರದೇಶಗಳಲ್ಲಿ ಕ್ರಿಕೆಟ್ ಟೂರ್ನಮೆಂಟ್ ಗ್ರಾಮೀಣ ಜನರಿಗೆ ಮನರಂಜನೆ ನೀಡಿದವು.
ತೆಗ್ಗೆಳ್ಳಿ ಗ್ರಾಮದಲ್ಲಿ ಊರ ಜನರು ಆಯೋಜನೆ ಮಾಡಿದ್ದ ಈ ಲೀಗ್ ನಲ್ಲಿ ಒಟ್ಟು 4 ತಂಡಗಳು ಭಾಗಿಯಾಗಿದ್ದವು. ನಿನ್ನೆ ಫೈನಲ್ ಪಂದ್ಯದಲ್ಲಿ ಕೊನೆಗೂ ಶ್ರೀರಾಮ ಲಕ್ಕಿ ಬಾಯ್ಸ್ ತಂಡ ಭರ್ಜರಿ ಗೆಲುವು ದಾಖಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಇನ್ನೂ ಲಕ್ಕಿ ಬಾಯ್ಸ್ ತಂಡ ರನ್ನರ್ ಅಪ್ ಆಗಿ ಖುಷಿ ಪಟ್ಟಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಕ್ಕಿ ಬಾಯ್ಸ್ ತಂಡ ನಿಗದಿತ 10 ಓವರ್ ಗಳಲ್ಲಿ 93 ರನ್ ಗಳಿಸಿತು. ಈ ಮೊತ್ತವನ್ನು ಜೈ ಶ್ರೀರಾಮ ತಂಡ 8. 4 ಓವರ್ ಗಳಲ್ಲಿ 94 ರನ್ ಬಾರಿಸಿ ಗೆಲುವು ಸಾಧಿಸಿದರು. ಇನ್ನೂ ಪ್ರತಿ ವರ್ಷದಂತೆ ಈ ಬಾರಿಯೂ ಅದ್ದೂರಿಯಾಗಿ ಈ ಟೂರ್ನಮೆಂಟ್ ನಡೆಯಿತು. ವಿನ್ನರ್ ತಂಡಕ್ಕೆ ಮಾಳಿಂಗರಾಯ ಪೂಜಾರಿ 10 ಸಾವಿರ ನೀಡಿದರು.
ಇನ್ನೂ ರನ್ನರ್ ಅಪ್ ತಂಡಕ್ಕೆ ಗಿರೀಶ್ ಪೋಲಿಸ್ ಪಾಟೀಲ್ 5 ಸಾವಿರ ರೂ. ನೀಡಿ ಗೌರವಿಸಿದರು. ಗ್ರಾಮದ ಹಲವು ಮುಖಂಡರು ಈ ಗ್ರಾಮೀಣ ಟೂರ್ನಮೆಂಟ್ ಗೆ ಸಾಥ್ ನೀಡಿ ಹುರಿದುಂಬಿಸಿದರು. ಈ ಸಂದರ್ಭದಲ್ಲಿ ಅಂಬ್ರಣ್ಣ ಮುಕ್ಕಣ್ಣನವರ್, ಗೀರಿಶ್ ಪೋಲಿಸ್ ಪಾಟೀಲ್, ಬಸ್ಸು, ಹಳ್ಳೆಪ್ಪ, ಸೇರಿದಂತೆ ತೆಗ್ಗೆಳ್ಳಿ ಗ್ರಾಮದ ಪ್ರಮುಖರು ಟ್ರೋಫಿ ನೀಡಿ ಗೆದ್ದ ತಂಡಕ್ಕೆ ಶುಭಾಶಯ ಕೋರಿದರು. ಜೈ ಶ್ರೀರಾಮ ತಂಡ ಚಾಂಪಿಯನ್ ಆಗುತ್ತಿದ್ದಂತೆ ತಂಡ ದ ನಾಯಕ ಮಂಜುನಾಥ ಪೂಜಾರಿ ತಂಡದವರು ಕುಣಿದು ಕುಪ್ಪಳಿಸಿದ್ರು. ಲಕ್ಕಿ ಬಾಯ್ಸ್ ತಂಡ ಸಹ ಒಳ್ಳೆಯ ಆಟ ಪ್ರದರ್ಶಿಸಿ ಪೈಪೋಟಿ ನೀಡಿದ್ರು. ಇನ್ನೂ ತೆಗ್ಗೆಳ್ಳಿ ಗ್ರಾಮದಲ್ಲಿ ಇಂತಹ ಟೂರ್ನಮೆಂಟ್ ಪ್ರತಿವರ್ಷವೂ ಆಯೋಜನೆ ಮಾಡ್ತಿವಿ ಅಂತಾ ಗ್ರಾಮಸ್ಥರು ತಿಳಿಸಿದ್ರು.


