ವಿ ಜಿ ಕಾಲೇಜಿಗೆ ದ್ವಿತೀಯ ಸ್ಥಾನ
ಕಲಬುರಗಿ: ಕನ್ನಡ ಸಾಹಿತ್ಯ ಚರಿತೆಯ ರನ್ನನ ನಾಡಾದ ಮುಧೋಳನಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಆಯೋಜಿಸಿರುವ ೨೦ನೆ ಶಕ್ತಿ ಸಂಭ್ರಮ ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವನದಲ್ಲಿ ಜರುಗಿದ ಮೆರವಣಿಗೆಯಲ್ಲಿ ಕಲಬುರಗಿ ನಗರದ ಪ್ರತಿಷ್ಠಿತ ಮಹಿಳಾ ಮಹಾವಿದ್ಯಾಲಯವಾದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ ವಿದ್ಯಾರ್ಥಿನಿಯರು ಇಂದು ಜರುಗಿದ ಮೆರವಣಿಗೆಯಲ್ಲಿ ಭಾಗವಹಿಸಿ ವಿಶ್ವವಿದ್ಯಾಲಯ ಮಟ್ಟದ ಮೆರವಣಿಗೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದರು. ವಿದ್ಯಾರ್ಥಿನಿಯರ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಶಶಿಲ್ ಜಿ. ನಮೋಶಿ, ಉಪಾಧ್ಯಕ್ಷರಾದ ರಾಜಾ ಬಿ. ಭೀಮಳ್ಳಿ,…
ಎಸ್.ಎಸ್.ಎಲ್.ಸಿ ತರಗತಿ ಹಾಗೂ ಪಿ.ಯು.ಸಿ ತರಗತಿ ವಿಧ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ…
ಜ. 11 ರಂದು ಪ್ರಥಮ ವಾರ್ಷಿಕೋತ್ಸವ ಸಭೆ ಕಲಬುರಗಿ : ಜ.11 ರವಿವಾರ ರಂದು ನಗರದ ಕನ್ನಡ ಭವನದಲ್ಲಿ ಪ್ರಥಮ ವಾರ್ಷಿಕೋತ್ಸವ ಸಭೆ ನಿಮಿತ್ಯ, ಕೆಕೆ ಟೈಗರ್ಸ ಬ್ರಿಗೇಡ್, ವತಿಯಿಂದ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿಯ ವಿಧ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೋಳ್ಳಲಾಗಿದೆ ಎಂದು ಸತೀಯಕುಮಾರ ಸೂಗುರ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆ ವಿಶ್ವ ಸೇವಾ ಶಂಕರ್ ಸಂಸ್ಥಾಪಕರು ಹಾಗೂ ಅಧ್ಯಕ್ಷರು, ಶ್ರೀ ವಿಶ್ವನಾಥ ಗುರುಜೀ ಮಾಡಲಿದ್ದು, ಕಾರ್ಯಕ್ರಮದಲ್ಲಿ…
ಬೆಂಗಳೂರಿನಲ್ಲಿ 55.88 ಕೋಟಿ ಮೌಲ್ಯದ ಡ್ರಗ್ಸ್ ಸೀಜ್
ಬೆಂಗಳೂರು : ಬೆಂಗಳೂರಿನಲ್ಲಿ ಮಹಾರಾಷ್ಟ್ರದ ANTF ತಂಡದಿಂದ ದಾಳಿ ಮಾಡಿ ಡ್ರಗ್ಸ್ ಸೀಜ್ ಮಾಡಲಾಗಿದೆ. ಮಹಾರಾಷ್ಟ್ರ ಮಾದಕ ವಸ್ತು ನಿಗ್ರಹ ದಳ 55.88 ಕೋಟಿ ರೂ. ಮೌಲ್ಯದ ಎಂಜಿ ಸಿಂಥೆಟಿಕ್ ಡ್ರಗ್ಸ್ ವನ್ನು ಜಪ್ತಿ ಮಾಡಿ, ಕೋಟಿ ಕೋಟಿ ಮೌಲ್ಯದ ಡ್ರಗ್ಸ್ ಜೊತೆಗೆ ನಾಲ್ವರನ್ನ ಬಂಧಿಸಲಾಗಿದೆ. ಬೆಂಗಳೂರಿನ ಮೂರು ಕಡೆ ಇದ್ದಂತಹ ಡ್ರಗ್ಸ್ ಸೀಜ್ ಮಾಡಲಾಗಿದ್ದು, ದೇಶದ ಅನೇಕ ರಾಜ್ಯಗಳಿಗೆ ಡ್ರಗ್ಸ್ ಸಪ್ಲೈ ಆಗ್ತಾ ಇರುವಂತಹ ಶಂಕೆ, ಬಂಧಿತರನ್ನ ವಿಚಾರಣೆ ಮಾಡುತ್ತಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೇ ಇಷ್ಟು…
ಪಂಚ ಗ್ಯಾರಂಟಿಗಳಂತೆ ಸರ್ಕಾರ ಮಧ್ಯ ನಿಷೇದ ಗ್ಯಾರಂಟಿ ಜಾರಿಗೆ ತರಲು ರೈತ ಸಂಘ ಒತ್ತಾಯ
ಯಾದಗಿರಿ:ಮದ್ಯಪಾನ ಮುಕ್ತ ರಾಜ್ಯ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿ ಮದ್ಯ ನಿಷೇಧ ಕಾಯ್ದೆ ಜಾರಿಗೆ ತರುವಂತೆ ರಾಜ್ಯ ರೈತ ಸಂಘ ಹಸಿರು ಸೇನೆ (ಕೂಡಿಹಳ್ಳಿ ಚಂದ್ರಶೇಖರ್ ಬಣದ) ರಾಜ್ಯ ಉಪಾಧ್ಯಕ್ಷೆ ಮಹಾದೇವಿ ಬೇವಿನಾಳ ಮಠ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಮಧ್ಯಪಾನದಿಂದ ಸಮಾಜ ಅವನತಿಯತ್ತ ಸಾಗುತ್ತಿದೆ ಯುವಕರೇ ಅತಿ ಹೆಚ್ಚು ಮಧ್ಯಪಾನ ಸೇವಿಸುತ್ತಿರುವುದರಿಂದ ಅದೆಷ್ಟೋ ಕುಟುಂಬಗಳು ಬೀದಿಪಾಲು ಆಗುವುದರ ಜೊತೆಗೆ ಕುಡಿತದಿಂದ ತಮ್ಮ ಆರೋಗ್ಯ ಹಾಳಾಗಿ ಯುವಕರ ಸಾವಿನ ಸಂಖ್ಯೆ ಹೆಚ್ಚಾಗುತ್ತಿವೆ ಎಂದಿದ್ದಾರೆ.ಈಗಾಗಲೇ…
ಜಾನಪದ ಕಲಾವಿದರ ಸಂಭ್ರಮ : ಜಾನಪದ ಕಲೆಗಳನ್ನು ಉಳಿಸಿ
ಕೆಂಭಾವಿ : ನಮ್ಮ ಪೂರ್ವಜರು ತಲೆಮಾರುಗಳಿಂದ ಉಳಿಸಿಕೊಂಡು ಬಂದಿರುವ ಜಾನಪದ ಕಲೆಗಳನ್ನು, ಹಾಡುಗಳನ್ನು, ನೃತ್ಯಗಳನ್ನು ಮತ್ತು ಕಥೆಗಳನ್ನು ಸಂರಕ್ಷಿಸುವುದು ನಮ್ಮ ಮೊದಲ ಉದ್ದೇಶವಾಗಿರಬೇಕು. ಈ ಕಲೆಗಳು ನಮ್ಮ ನಾಡಿನ ಇತಿಹಾಸ ಮತ್ತು ಬದುಕಿನ ಮೌಲ್ಯಗಳನ್ನು ಪ್ರತಿಬಿಂಬಿಸುತ್ತವೆ. ಗ್ರಾಮೀಣ ಭಾಗದಲ್ಲಿ ಯಾವುದೇ ಪ್ರಚಾರವಿಲ್ಲದೆ, ಕೇವಲ ಕಲೆಯ ಮೇಲಿನ ಪ್ರೀತಿಯಿಂದಲೇ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ನಮ್ಮ ಕಲಾವಿದರನ್ನು ಗುರುತಿಸಿ, ಅವರಿಗೆ ಗೌರವ ಮತ್ತು ಪ್ರೋತ್ಸಾಹ ನೀಡಬೇಕು ಎಂದು ಶ್ರೀ ವೆಂಕಟೇಶ್ವರ ಶಿಕ್ಷಣ ಮತ್ತು ಗ್ರಾಮೀಣಾಭಿರುದ್ಧಿ ಸಂಸ್ಥೆ, (ಬೈಚಬಾಳ) ಅಧ್ಯಕ್ಷ ಗುರುನಾಥ…
ಎಸ್‌ಸಿಪಿ/ಟಿಎಸ್‌ಪಿ ಹಣ ದುರ್ಬಳಕ್ಕೆ ಆಗದಂತೆ ಕ್ರಮವಹಿಸಬೇಕು | ಪ್ರಭಾಕರ್ ಹದನೂರ
ಸರ್ಕಾರ ಒಳ ಮೀಸಲಾತಿ ವರ್ಗೀಕರಣ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಮಾದಿಗ ದಂಡೋರಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಕಲಬುರಗಿ : ಪ್ರಸ್ತುತ ನಡೆಯುತ್ತಿರುವ ಬೆಳಗಾವಿ ಅಧಿವೇಶನದಲ್ಲಿಯೆ ರಾಜ್ಯ ಸರಕಾರವು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದಂತೆ ಸಂಪೂರ್ಣ ಒಳ ಮೀಸಲಾತಿ ವರ್ಗೀಕರಣ ಅನುಷ್ಠಾನಗೊಳಿಸಿ, ಹಾಗೂ ಎಸ್‌ಸಿಪಿ/ಟಿಎಸ್‌ಪಿ ಹಣ ದುರ್ಬಳಕ್ಕೆ ಆಗದಂತೆ ಕ್ರಮವಹಿಸಬೇಕೆಂದು, ಮಾದಿಗ ದಂಡೋರಾ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಪ್ರಭಾಕರ ಹದನೂರ ಅವರು ಆಗ್ರಹಿಸಿದರು. ಜಿಲ್ಲಾಧಿಕಾರಿ ಕಚೇರಿ ಮುಂದೆ ಒಂದು ದಿನದ…
ಕೂಡಲೇ ಕಲಬುರಗಿ ದಿಂದ ವಿಮಾನ ಸೇವೆಯನ್ನು ಅರಂಭಿಸಿ | ಕನ್ನಡಪರ ಸಂಘನೆಗಳ ಒಕ್ಕೂಟ ಒತ್ತಾಯ
ಕಲ್ಯಾಣ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಸುದ್ದಿಗೋಷ್ಠಿ ಬೆಳಗಾವಿ : ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳು ಚರ್ಚೆ ಮಾಡದೇ ನಿರ್ಲಕ್ಷಿಸುತ್ತಿದ್ದಾರೆ ಎಂದು ಕಲ್ಯಾಣ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದೆ. ನಗರದ ಪತ್ರಿಕಾ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಸಚಿನ ಫರತಬಾದ ಅವರು ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಅತೀ ದೊಡ್ಡ ಜಿಲ್ಲೆಯಾದ ಕಲಬುರಗಿಯಲ್ಲಿ ಈಗಾಗಲೇ ಕಲಬುರಗಿ ವಿಮಾನ ನಿಲ್ದಾಣ ಇತ್ತೀಚೆಗೆ ಪ್ರಾರಂಭವಾಗಿದ್ದು, ನಂತರ ಸುಮಾರು ದಿನಗಳಿಂದ ವಿಮಾನ ಸೇವೆಯನ್ನು ಈ ಭಾಗದ ಜನರು…
ಫೆ 2 ರಂದು ಕಲಬುರಗಿಯಲ್ಲಿ 10 ನೇ ವಧು-ವರರ ಸಮಾವೇಶ
ಕಲಬುರಗಿ : ಪ್ರತಿ ವರ್ಷದಂತೆ ಶ್ರೀ ಮಾತಾಮಾಣಿಕೇಶ್ವರಿ ಕೋಲಿ, ಕಬ್ಬಲಿಗ (ಗಂಗಾಮತ) ಸಮಾಜದ ವಧು-ವರರ ಮಾಹಿತಿ ಸೇವಾ ಸಂಘ ಗಂಗಾ ನಗರ, ನ್ಯೂ ರಾಘವೇಂದ್ರ ಕಾಲೋನಿ, ಬ್ರಹ್ಮಪೂರ ಕಲಬುರಗಿ ವತಿಯಿಂದ ಕಲಬುರಗಿಯಲ್ಲಿ 10 ನೇ ವಧು-ವರರ ಸಮಾವೇಶವನ್ನು ಫೆ 2 ರಂದು ರವಿವಾರ ಹಮ್ಮಿಕೊಳ್ಳಲಾಗಿದೆ. ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಧು-ವರರ ಸಮಾವೇಶಕ್ಕೆ ಸಮಾಜದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮಿಗಳು ಪೀಠಾಧ್ಯಕ್ಷರು ಶ್ರೀ ನಿಜಶರಣ…
ಸಿದ್ದರಾಮಯ್ಯನವರು ಸಿಎಂ ಆಗಿ ಮುಂದುವರೆಯಲಿ ಎಂದು ದೇವರ ಮೋರೆ ಹೋದ ಅಭಿಮಾನಿಗಳು
ಕಲಬುರಗಿ: ರಾಜ್ಯದ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯನವರು ಮುಂದುವರೆಯಲಿ ಅಂತಾ ಕಲಬುರಗಿಯ ಸುಪ್ರಸಿದ್ಧ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ 101 ತೆಂಗಿನಾ ಕಾಯಿ ಒಡೆದು ಅಭಿಮಾನಿಗಳಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಐದು ವರ್ಷ ಸಿಎಂ ಆಗಿ ಮುಂದುವರೆಯಬೇಕು ಅಂತಾ ಸಿದ್ದರಾಮಯ್ಯನವರ ಅಭಿಮಾನಿ ಬಳಗದಿಂದ ಡೊಳ್ಳು ಬಾರಿಸಿ ತೆಂಗಿನಕಾಯಿ ಒಡೆದು ಹೊಡೆದು ವಿಶೇಷ ಪೂಜೆ ಸಲ್ಲಿಸಿದರು. ಸಿಎಂ ಸಿದ್ದರಾಮಯ್ಯನವರು ರಾಜ್ಯದ ಜನರಿಗೆ ಸಾಕಷ್ಟು ಜನಪರ ಯೋಜನೆ ನೀಡಿದ್ದಾರೆ ಅವರೆ ಸಿಎಂ ಆಗಿ ಮುಂದುವರೆಯಬೇಕು. ಎಂದು ಅಭಿಮಾನಿಗಳು ಅವರ…
ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ಸುನೀಲಕುಮಾರ್ ದೊಡ್ಡಮನಿ ಅವರಿಗೆ ಸನ್ಮಾನ
ಚಿತ್ತಾಪುರ; ಪಟ್ಟಣದಲ್ಲಿ ಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕರಾಗಿ ಆಯ್ಕೆಯಾದ ಸುನೀಲಕುಮಾರ್ ದೊಡ್ಡಮನಿ ಹಾಗೂ ಪಿಎಲ್’ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ ಅವರಿಗೆ ಮುಸ್ಲಿಂ ಸಮಾಜದ ಯುವ ಮುಖಂಡರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಯುವ ಮುಖಂಡರಾದ ಶೇಖ ಬಬ್ಲು, ಮಹ್ಮದ್ ಖಾಸೀಂ, ಮಹ್ಮದ್ ರಫೀಕ್, ಎಂ.ಎ ನಯೀಮ್, ಮಹ್ಮದ್ ಸೀರಾಜ್, ಮುಜೀಬ್ ಸೇಠ ಸೇರಿದಂತೆ ಇತರರು ಇದ್ದರು.


