ಸುರಪುರ: ದೇಶದ ಪ್ರಧಾನಿ ನರೇಂದ್ರ ಮೋದಿಯವರ ೭೫ನೇ ದಿನವನ್ನು ಸುರಪುರ ಮತ್ತು ಹುಣಸಗಿ ತಾಲೂಕು ಬಿಜೆಪಿ ಮಂಡಲ ಘಟಕಗಳಿಂದ ವಿಶೇಷವಾಗಿ ಜನುಮ ದಿನ ಆಚರಿಸಿ ಪ್ರಧಾನಮಂತ್ರಿಗೆ ಶುಭ ಕೋರಲಾಗಿದೆ.
ನಗರದ ಬಿಜೆಪಿ ಕಚೇರಿ ಆವರಣದಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿದ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜುಗೌಡ ರಕ್ತದಾನ ಮಾಡಿ ಮಾತನಾಡಿ,ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದಣಿವರಿಯದ ನಾಯಕರಾಗಿದ್ದಾರೆ.ಅವರ ಜನುಮ ದಿನವನ್ನು ನಾವೆಲ್ಲರು ಇಂದು ರಕ್ತದಾನ ಮಾಡಿ ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಿರುವುದು ತುಂಬಾ ಸಂತೋಷ ತಂದಿದೆ ಎಂದರು.
ಇದೇ ಸಂದರ್ಭದಲ್ಲಿ ಸುಮಾರ ನೂರಕ್ಕೂ ಹೆಚ್ಚು ಜನ ಕಾರ್ಯಕರ್ತರು ರಕ್ತದಾನ ಮಾಡಿದರು.ಕಲಬುರ್ಗಿಯ ನವಜೀವನ ರಕ್ತ ನಿಧಿ ಕೇಂದ್ರದ ಸಿಬ್ಬಂದಿಗಳು ಭಾಗವಹಿಸಿ ರಕ್ತ ಸಂಗ್ರಹಣೆ ಮಾಡಿಕೊಂಡರು.ಕಾರ್ಯಕ್ರಮದಲ್ಲಿ ಮಾಜಿ ಜಿ.ಪಂ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ,ಬಿಜೆಪಿ ಮಂಡಲ ಅಧ್ಯಕ್ಷರಾದ ವೇಣುಮಾಧವ ನಾಯಕ, ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.
ಸುರಪುರ:ಪ್ರಧಾನಿ ನರೇಂದ್ರ ಮೋದಿ ಜನುಮ ದಿನಕ್ಕೆ ರಕ್ತದಾನದ ಶುಭಾಷಯ


