ವಾಕ್ ಥಾನ್ ಗೆ ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಚಾಲನೆ

ಕಲಬುರಗಿ :  ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಮಂಗಳವಾರ ಕೆ.ಕೆ.ಅರ್.ಡಿ.ಬಿ ಮತ್ತು ಕಲಬುರಗಿ ಮಹಾನಗರ ಪಾಲಿಕೆ ಜಂಟಿಯಾಗಿ ಆಯೋಜಿಸಿದ ವಾಕ್ ಥಾನ್ ಗೆ ಕೆ.ಕೆ.ಅರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್ ಚಾಲನೆ ನೀಡಿದರು. ಜಗತ್ ವೃತ್ತದಿಂದ ಅರಂಭಗೊಂಡ ವಾಕ್ ಥಾನ್ ಡಿ.ಸಿ. ಕಚೇರಿ-ಕೆ.ಕೆ.ಆರ್.ಡಿ.ಬಿ ಕಚೇರಿ ಮಾರ್ಗವಾಗಿ ಪಿ.ಡಿ.ಎ. ಕಾಲೇಜಿಗೆ ಬಂದು ಸಂಪನ್ನಗೊಂಡಿತ್ತು. ವಾಕ್ ಥಾನ್ ನಲ್ಲಿ ನೂರಾರು ಸಂಖ್ಯೆಯಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಅಧಿಕಾರಿಗಳು ಭಾಗವಹಿಸಿದ್ದರು. ವಾಕ್ ಥಾನ್ ಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಡಾ.ಅಜಯ್ ಸಿಂಗ್…

Read More

ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ‌ ಮಹಾನ್ ಪುರುಷರಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಒಬ್ಬರು

ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಲಬುರಗಿ,  ಜಾತಿ ರಹಿತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ 19 ಮತ್ತು 20ನೇ ಶತಮಾನದಲ್ಲಿ ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ ಮಹಾನ್ ಪುರುಷರಲ್ಲಿ ಒಬ್ಬರಾಗಿದ್ದಾರೆ ಎಂದು ವಿಧಾನ ಪರಿಷತ್‍ನ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು. ಬುಧವಾರ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಲಬುರಗಿಯಲ್ಲಿ ನಾರಾಯಣ ಗುರುಗಳ…

Read More

ಹಿಂದುಳಿದ ವರ್ಗದ ನಾಯಕ ಶಿವಶರಣಪ್ಪ ಕೋಬಾಳವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲು ಒತ್ತಾಯ

ಕಲಬುರಗಿ: ಕೋಲಿ ಸಮಾಜದ ಹಿರಿಯ ಮುಖಂಡ  ಶಿವಶರಣಪ್ಪ ಕೋಬಾಳ ಅವರು ಜಿಲ್ಲೆಯಲ್ಲಿ ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯರಾಗಿ, ಪಕ್ಷದ ಸಂಘಟನೆಯಲ್ಲಿ ನಿಷ್ಠಾವಂತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯದ ಯಾವುದಾದರೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಾಮ ನಿರ್ದೇಶನ ಮಾಡುವಂತೆ ಕೋಲಿ ಸಮಾಜದ ಮುಖಂಡ ತಾಲೂಕ ಪಂಚಾಯತ್ ಮಾಜಿ ಸದಸ್ಯರಾದ ಮೈಲಾರಿ ಬಣಮಿ, ದಶರಥ ಕೂಡಲಗಿ ಜಗನ್ಮಾಥ ಕೋಬಾಳ್, ದೇವಿಂದ್ರ ನಿಂಗಬೋ ಕೂಡಿ, ಕಾಂಗ್ರೆಸ್ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ. ಕಳೆದ ೧೯೭೨ ರಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ…

Read More

ಮಳೆಯಿಂದ ಬೆಳೆ ಹಾನಿ ; ಒಂದು ಎಕರೆ ಪ್ರದೇಶಕ್ಕೆ ₹25 ಸಾವಿರ ಪರಿಹಾರಕ್ಕೆ ಒತ್ತಾಯ | ನಿಖಿಲ್ ಕುಮಾರಸ್ವಾಮಿ

* ಈ ಸರ್ಕಾರ ಬರೀ ಘೋಷಣೆಗೆ ಮಾತ್ರ ಸೀಮಿತವಾಗಿದೆ, ಅಭಿವೃದ್ಧಿ ಶೂನ್ಯ * ರೈತರ ಪಕ್ಷ ಜೆಡಿಎಸ್, ರೈತರ ಜೊತೆಯಲ್ಲಿ ನಿಂತು ಹೋರಾಟ ಮಾಡುತ್ತೆವೆ ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಮಳೆಯಿಂದಾಗಿ ರೈತರ ಬೆಳೆಗಳು ಸಂಪೂರ್ಣ ನೆಲ ಕಚ್ಚಿವೆ. ಸರ್ಕಾರ ಈ ಕೂಡಲೇ ಮಧ್ಯ ಪ್ರವೇಶಿಸಿ ಒಂದು ಎಕರೆ ಪ್ರದೇಶ ಬೆಳೆ ನಾಶಕ್ಕೆ ₹25000 ಪರಿಹಾರ ಘೋಷಿಸಬೇಕೆಂದು ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದರು. ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ…

Read More

ಬೆಂಗಳೂರಿನ ಎಲ್ಸಿಟಾ (ELCITA) ಗೆ ಭೇಟಿ | ಕಲಬುರಗಿ ಮಹಾನಗರಪಾಲಿಕೆ ಸದಸ್ಯರಿಂದ ನಗರ ಯೋಜನೆ ಮತ್ತು ನಾಗರಿಕ ನಿರ್ವಹಣೆ ಅಧ್ಯಯನ

ಬೆಂಗಳೂರು, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಕಾರ್ಪೊರೇಟರ್ಗಳ ನಿಯೋಗವು ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್ಶಿಪ್ ಪ್ರಾಧಿಕಾರ (ELCITA)ಕ್ಕೆ ಅಧ್ಯಯನ ಭೇಟಿ ನೀಡಿತ್ತು ನಗರ ಯೋಜನೆ, ತ್ಯಾಜ್ಯ ನಿರ್ವಹಣೆ, ನೀರು ಸಂಸ್ಕರಣೆ ಮತ್ತು ಕಲಬುರಗಿ ನಗರ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸಬಹುದಾದ ಸಮಗ್ರ ಆಡಳಿತ ಮಾದರಿಗಳಲ್ಲಿನ ಅತ್ಯುತ್ತಮ ಅಭ್ಯಾಸಗಳ ಬಗ್ಗೆ ಕಾರ್ಪೊರೇಟರ್ಗಳಿಗೆ ಪ್ರಾಥಮಿಕ ನೋಟವನ್ನು ನೀಡಲು ಈ ಭೇಟಿಯನ್ನು…

Read More

ದಕ್ಷಿಣ ತಾಲೂಕಿನ ೨೦೨೫- ೨೬ನೇ ಸಾಲಿನ ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ

ಕಲಬುರಗಿ: ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳುಮತ್ತು ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯ ಕಲಬುರಗಿ ದಕ್ಷಿಣ ವಲಯ ಹಾಗೂ ಪ್ರಾಥಮಿಕ ಪ್ರೌಢ ಶಾಲಾ ಶಿಕ್ಷಕರ ಸಂಘಟನೆಗಳು ಇವರ ಸಹಯೋಜನೆಯಲ್ಲಿ ಕಲಬುರ್ಗಿ ದಕ್ಷಿಣ ತಾಲೂಕಿನ ೨೦೨೫- ೨೬ನೇ ಸಾಲಿನ ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭವು ನಗರದ ಸಿದ್ದಶ್ರೀ ಡಿವೈನ್ ಪ್ಯಾಲೇಸ್, ಕೋಟನೂರ್ ಡಿಯಲ್ಲಿ ಜರುಗಿತು. ಕಾರ್ಯಕ್ರಮವನ್ನು ದಕ್ಷಿಣ ಮತ ಕ್ಷೇತ್ರದ ಶಾಸಕರಾದ ಅಲ್ಲಂಪ್ರಭು ಪಾಟೀಲ್ ಅವರು ಉದ್ಘಾಟಿಸಿ ಮಾತನಾಡಿ ಈ ದೇಶದಲ್ಲಿ…

Read More

ಉದನೂರ ಗ್ರಾಮಸ್ಥರಿಂದ ಶಾಸಕ ಹಾಗೂ ಆಯುಕ್ತರಿಗೆ ಎಚ್ಚರಿಕೆ

ಕಲಬುರಗಿ: ಉದನೂರ ಗ್ರಾಮದಲ್ಲಿ ಬೀದಿ ನಾಯಿಗಳ ಗೋದಾಮು ನಿರ್ಮಾಣ ಕಾಮಗಾರಿ ವಿರೋದಿಸಿ ನಡೆಸಿದ ಪ್ರತಿಭಟನಾ ನಿರತ ಸ್ಥಳಕ್ಕೆ ಭೇಟಿ ನೀಡಿದ ಶಾಸಕರಾದ ಅಲ್ಲಮ ಪ್ರಭು ಪಾಟೀಲ್ ಹಾಗೂ ಪಾಲಿಕೆ ಆಯುಕ್ತರಿಗೆ ಗ್ರಾಮಸ್ಥರಿಂದ ಎಚ್ಚರಿಕೆ ನೀಡಲಾಯಿತು. ಗ್ರಾಮಸ್ಥರ ಬೃಹತ್ ಪ್ರತಿಭಟನೆ ಹಾಗೂ ಎಚ್ಚರಿಕೆಯಿಂದ ಎಚ್ಚೆತ್ತುಕೊಂಡ ಶಾಸಕ ಅಲ್ಲಮ ಪ್ರಭು ಪಾಟೀಲ್ ಅವರು ಈ ಸ್ಥಳದಲ್ಲಿ ಯಾವದೇ ಕಾರಣಕ್ಕೂ ನಾಯಿಗಳ ಗೋದಾಮು ನಿರ್ಮಾಣ ಕಾಮಗಾರಿ ಮಾಡುವದಿಲ್ಲ ಎಂದು ಭರವಸೆ ನೀಡಿದ್ದ ಪ್ರಯುಕ್ತ ಗ್ರಾಮಸ್ಥರು ಪ್ರತಿಭಟನೆ ಕೈ ಬಿಡಲಾಯಿತು. ಸುಮಾರು ೧೮…

Read More

ಮಾತೃಭಾಷೆಯಲ್ಲಿ ಶಿಕ್ಷಣ ಅಗತ್ಯೆ ಪ್ರೋ ದಯಾನಂದ ಅಗಸರ ಅಭಿಮತ

ಕಲಬುರಗಿ: ಪ್ರತಿಯೋಬ್ಬರು ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದು ಇಂದಿನ ತುರ್ತು ಅವಶ್ಯವಾಗಿದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೋ ದಯಾನಂದ ಅಗಸರ ಹೆಳಿದರು. ನಗರದ ಕನ್ನಡಬವನದಲ್ಲಿ ಶಾಂತಪ್ಪಾ ಪಾಟೀಲ ನರಿಬೋಳ ಪ್ರತಿಷ್ಠಾನದಿಂದ ದಿ.ಶಾಂತಪ್ಪ ಪಾಟೀಲ ಅವರ ೧೨ನೆ ಪೂಣ್ಯಸ್ಮರಣೆ ಹಾಗು ಶಾಂತಶ್ರೀ ಪ್ರಶಸ್ತಿ ಸಮಾರಂಭ ಉಧ್ಘಾಟಿಸಿ ಮಾತನಾಡಿದ ಅವರು ಕನ್ನಡ ಬಾಷೆ ಮಾನ ಬೆಳೆಸಿಕೋಳ್ಳಬೆಕು ಪೋಷಕರು ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಕೋಡಿಸಬೆಕು ಕನ್ನಡ ನಾಡು ಕಟ್ಟುವಲ್ಲಿ ದಿ.ಶಾಂತಪ್ಪ ಪಾಟೀಲ ನರಿಬೋಳ ಕೋಡುಗೆ ನಿಡಿದ್ದಾರೆ ಸಮಾಜ ಮುಖಿ…

Read More

೨೦೨೪-೨೫ ನೇ ಸಾಲಿನ ೪೪ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ

ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ವಿಶ್ವರಾಧ್ಯ ಕಲ್ಯಾಣ ಮಂಟಪದಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆ (ನಿ) ಆಳಂದ ಸನ್ ೨೦೨೪-೨೫ ನೇ ಸಾಲಿನ ೪೪ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯನ್ನು ಹಿರಿಯ ರೈತರಾದ ಶರಣು ಪಾಟೀಲ ಭೂಸನೂರ, ಅಣ್ಣಾರಾವ ಸಣ್ಣಮನಿ, ಮಹಾಂತಗೌಡ ಪಾಟೀಲ, ಮೈನೋದ್ದಿನ ಜವಳಿ, ಪುಂಡಲಿಕ ಗುತ್ತೇದಾರ ಇವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅತಿ ಹೆಚ್ಚು ಕಬ್ಬು ಸರಬರಾಜು ಮಾಡಿದ ರೈತರಾದ ಅಶೋಕ ಗುತ್ತೇದಾರ, ಖಾಜಿ ಸೈಯದ್ ಖಾಲಿ, ಸಿದ್ದು ಅಮೃತಪ್ಪಾ ಪಾಟೀಲ ಅವರನ್ನು ಸನ್ಮಾನಿಸಲಾಯಿತು.ಸಹಕಾರಿ ಸಕ್ಕರೆ…

Read More

ನಮ್ಮ ನಡೆ ಫಲಿತಾಂಶದ ಕಡೆ” ಆರ್. ಜೆ ಕಾಲೇಜಿನಲ್ಲಿ ವಿಷಯಾಧಾರಿತ ಪುನಃಶ್ಚೇತನ ಕಾರ್ಯಾಗಾರ

ಕಲಬುರಗಿ: ಶಾಲಾ ಶಿಕ್ಷಣ ಇಲಾಖೆಯು (ಪದವಿ ಪೂರ್ವ) ಕಲಬುರಗಿ, ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ (ರಿ) ಶಾಖೆ ಕಲಬುರಗಿ, ಉಪನ್ಯಾಸಕರ ಸಂಘ (ರಿ) ಶಾಖೆ ಕಲಬುರಗಿ ಹಾಗೂ ರಮಾಬಾಯಿ ಜಹಾಗೀರದಾರ ಸ್ವತಂತ್ರ ಪದವಿ ಪೂರ್ವ ಕಾಲೇಜು (ಆರ್.ಜೆ) ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಷಯಾಧಾರಿತ ಪುನಃಶ್ಚೇತನ ಕಾರ್ಯಾಗಾರ ಆಯೋಜಿಸಲಾಗಿತ್ತು. ಜೀವಶಾಸ್ತ್ರ ಮತ್ತು ವಾಣಿಜ್ಯಶಾಸ್ತ್ರ ವಿಷಯಗಳ ಫಲಿತಾಂಶ ಸುಧಾರಣೆಗಾಗಿ ನಡೆಸಿದ ಕಾರ್ಯಗಾರಕ್ಕೆ ಉಧ್ಘಾಟಕರಾಗಿ ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪನಿರ್ದೇಶಕರಾದ ಸುರೇಶ ಅಕ್ಕಣ್ಣ ಅವರು…

Read More
error: Content is protected !!