gulbargametro

ನೈಸರ್ಗಿಕ ವಿಧಾನಗಳ ಅಳವಡಿಸಿ ಹತ್ತಿ ಕೃಷಿಯಲ್ಲಿ ರಾಸಾಯನಿಕಗಳ ಬಳಕೆ ಕಡಿಮೆ ಮಾಡಲು ಕರೆ

ಯಾದಗಿರಿ, ಸಹಜ ಸಮೃದ್ಧ, ಮತ್ತು ಎಲ್‌ಡಿಸಿ (LDC) ಇವರ ಸಂಯುಕ್ತ ಆಶ್ರಯದಲ್ಲಿ, ಯಾದಗಿರಿ ತಾಲ್ಲೂಕಿನ ಸೈದಾಪುರ ಹೋಬಳಿಯ ಸಂಗವಾರ ಗ್ರಾಮದಲ್ಲಿ ಹತ್ತಿಯಲ್ಲಿ ಗುಲಾಬಿ ಕಾಯಿ ಕೊರಕ ನಿರ್ವಹಣೆ ಕುರಿತು “ಜಾಗೃತಿ” ಕಾರ್ಯಕ್ರಮ ಏರ್ಪಾಡು ಮಾಡಲಾಗಿತ್ತು. ಸುಸ್ಥಿರ ಮತ್ತು ನೈಸರ್ಗಿಕ ವಿಧಾನಗಳ ಮೂಲಕ ರಾಸಾಯನಿಕಗಳ ಬಳಕೆ ಕಡಿಮೆ ಮಾಡುವ ಅರಿವಿನ ಕಾರ್ಯಕ್ರಮದ ಭಾಗವಾಗಿ ತರಬೇತಿ ನೀಡಲಾಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಎಲ್‌ಡಿಸಿ ಸಂಸ್ಥೆಯ ಸಂಶೋಧನಾ ಎನಾಲಿಸ್ಟ್ ಗಿರೀಶ್ ಮಾತನಾಡಿ ” ಎಲ್. ಡಿ. ಸಿ ಸಂಸ್ಥೆ ಹತ್ತಿ ಕೃಷಿಯಲ್ಲಿ…

Read More

ವಿಭಾಗೀಯ ಉಪಾಧ್ಯಕ್ಷರಾಗಿ ನೀಜಲಿಂಗಪ್ಪ ಕೊರಳ್ಳಿ ಆಯ್ಕೆ.

ಕಲಬುರಗಿ; ವಿಭಾಗೀಯ ರಾಜ್ಯ ಸರಕಾರಿ ನೌಕರರ ಸಂಘದ ವಿಭಾಗೀಯ ಉಪಾಧ್ಯಕ್ಷರಾಗಿ ಪಶು ಸಂಗೋಪನೆ ಇಲಾಖೆಯ ನಿಜಲಿಂಗಪ್ಪ ಕೊರಳ್ಳಿ ಅವರನ್ನು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ ಎಸ್ ಷಢಕ್ಷರಿ ಅವರು ಇಂದು ನೇಮಕಗೊಳಿಸಿ ಆದೇಶಿಸಿದ್ದಾರೆ.ರಾಜ್ಯ ಪ್ರಧಾನ ಕಾರ್ಯದರ್ಶಿ ಗಿರಿಗೌಡರ, ರಾಜ್ಯ ಗೌರವಾಧ್ಯಕ್ಷ ಬಸವರಾಜು, ಸಚಿವಾಲಯ ನೌಕರರ ಸಂಘದ ರಾಜ್ಯಾಧ್ಯಕ್ಷ ರಮೇಶ ಸಂಗಾ,ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ಜಿಲ್ಲಾ ಕಾರ್ಯದರ್ಶಿ ಮಹೇಶ ಹೂಗಾರ ರಾಜ್ಯ ಪರಿಷತ್ ಸದಸ್ಯರಾದ ಧರ್ಮರಾಯ ಜವಳಿ, ಕಾರ್ಯಾಧ್ಯಕ್ಷ ಚಂದ್ರಕಾಂತ ಏರಿ, ಹಿರಿಯ ಉಪಾಧ್ಯಕ್ಷ…

Read More

ಸುರಪುರ : ಪ್ರಥಮ ಬಾರಿಗೆ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ

ಸುರಪುರ: ನಗರದಲ್ಲಿ ಇದೇ ಮೊದಲ ಬಾರಿಗೆ 11 ದಿನಗಳ ಹಿಂದೂ ಮಹಾಗಣಪತಿ ಪ್ರತಿಷ್ಠಾಪಿಸಲಾಗುವುದು ಎಂದು ಹಿಂದೂ ಮಹಾ ಗಣಪತಿ ಉತ್ಸವ ಸಮಿತಿ ಮುಖಂಡರು ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ತಹಸೀಲ್ದಾರ್ ಕಛೇರಿಗೆ ಹೋಗುವ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಪಕ್ಕದಲ್ಲಿನ ಸ್ಥಳದಲ್ಲಿ ಆಗಸ್ಟ್ 27 ರಂದು ಹಿಂದೂ ಮಹಾ ಗಣಪತಿ ಪ್ರತಿಷ್ಠಾಪಿಸಲಾಗುತ್ತಿದೆ ಎಂದು ತಿಳಿಸಿದರು. ಅಲ್ಲದೆ, ಎಲ್ಲಾ ಜಾತಿ,ಮತ, ಧರ್ಮಿಯರು ಹಾಗೂ ಸಾಮೂಹಿಕ ಸಂಘಟನೆಗಳು ಸೇರಿದಂತೆ ಎಲ್ಲರೂ ಆಚರಣೆಗೆ ಸಹಕರಿಸಬೇಕೆಂದು ಮನವಿ ಮಾಡಿದರು. ಇತ್ತೀಚಿನ ದಿನಗಳಲ್ಲಿ…

Read More

ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ನೇಮಕಾತಿ ಹಾಗೂ ಬಡ್ತಿ ಯಲ್ಲಿ ಆಗುತ್ತಿರುವ ಅನ್ಯಾಯ ತಡೆಯಲು ಆಗ್ರಹ : ಶಶೀಲ್ ನಮೋಶಿ

ಕಲಬುರ್ಗಿ : ರಾಜ್ಯದಲ್ಲಿ ನೇಮಕಾತಿ ಪ್ರಾಧಿಕಾರಗಳು ವಿಭಿನ್ನ ನಿಯಮಗಳ ಮುಖಾಂತರ ನೇಮಕಾತಿ ಮಾಡುತ್ತಿರುವುದರಿಂದ ಕಲ್ಯಾಣ ಕರ್ನಾಟಕದ ಭಾಗದ 371 ಜೇ ಅಭ್ಯರ್ಥಿಗಳಿಗೆ ನೇಮಕಾತಿ ಹಾಗೂ ಬಡ್ತಿ ಯಲ್ಲಿ ಭಾರಿ ಪ್ರಮಾಣದಲ್ಲಿ ಅನ್ಯಾಯವಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಇಂದು ಸದನದಲ್ಲಿ ಪ್ರಸ್ತಾಪಿಸಿದರು. ಕಲ್ಯಾಣ ಕರ್ನಾಟಕದ ಭಾಗದಲ್ಲಿ ಸಂವಿಧಾನ ವಿಶೇಷ ವಿಧಿ 371 ಜೇ ಬಂದನಂತರ ಈ ಭಾಗದ ನೇಮಕಾತಿ ಹಾಗೂ ಬಡ್ತಿ ವಿಷಯಕ್ಕೆ ಸಂಬಂಧಿಸಿದಂತೆ 2016 ರಿಂದ 2025 ರ ವರೆಗೆ ಅನೇಕ…

Read More

48 ಗಂಟೆಯಲ್ಲಿ ವಾರಸುದಾರರಿಗೆ ಮರಳಿ ಸೇರಿದ 4 ಲಕ್ಷ ರೂ ಚಿನ್ನದ ಆಭರಣ

ಕಲಬುರಗಿ : 70 ವರ್ಷದ‌ ಹಿರಿಯವೃದ್ದರೊಬ್ಬರು ಚಿಕಿತ್ಸೆಗೆಂದು ಆಟೋ ಹತ್ತಿ ಜವಳಿ ಕಾಂಪ್ಲೇಕ್ಸ್ ಹತ್ತಿರ Haridas Heart Specialist ಆಸ್ಪತ್ರೆಗೆ ಬಂದಿರುತ್ತಾರೆ. ಚಿಕಿತ್ಸೆಯ X-ray ಯ ಸಲುವಾಗಿ ತಮ್ಮ ಮೈಮೇಲಿನ ಆಭರಣಗಳನ್ನು ತೆಗೆದು ಚೀಲದಲ್ಲಿ ಹಾಕಿ ಆಟೋದಲ್ಲಿ ಇಡುತ್ತಾರೆ. ಇದೇ ಸಂದರ್ಭದಲ್ಲಿ ರತ್ನಾಬಾಯಿ ರವರ ಮಗಳಾದ Dr. Sharadha ರವರು ತಮ್ಮ ತಂದೆಯನ್ನು ಮನೆಯಿಂದ ಕರೆದುಕೊಂಡು ಬರಲು ಅದೇ ಆಟೋದಲ್ಲಿ ವಿದ್ಯಾನಗರ ವಾಟರ್ ಟ್ಯಾಂಕ್ ಹತ್ತಿರ ಮರಳಿ ಮನೆಗೆ ತೆರಳುತ್ತಾರೆ. ಆಟೋದಲ್ಲಿಟ್ಟಿದ್ದ ಬ್ಯಾಗ್‌ನ್ನು ಮರೆತು ಮನೆಗೆ ತೆರಳುತ್ತಾರೆ….

Read More

ತೊಗರಿ ನಾಡುಗೆ ವಿಶೇಷ ಪ್ಯಾಕೇಜ್‌ ಘೋಷಿಸಿ

ಜಿಲ್ಲಾಧಿಕಾರಿ ಕಚೇರಿ ಮುಂದೆ ರಸ್ತೆ ತಡೆದು ಕರ್ನಾಟಕ ಪ್ರಾಂತ ರೈತ ಸಂಘ ಮಿಂಚಿನ ಪ್ರತಿಭಟನೆ ಕಲಬುರಗಿ : ಅತಿವೃಷ್ಟಿ ಮಳೆಯಿಂದ ಹಾನಿಯಾದ  ಹೆಸರು ಉದ್ದು ಸೋಯಾ ಬೆಳೆ, ನಷ್ಟ ಆದ ಬಗ್ಗೆ ಕೇಂದ್ರ ಸರ್ಕಾರ ಬೆಳೆ ಸಮೀಕ್ಷೆ ನಡೆಸಲು  ಮುಂದಾಗಲಿ ಎಂದು ಕರ್ನಾಟಕ ಪ್ರಾಂತ ರೈತ ಸಂಘ  ಆಗ್ರಹಿಸಿದೆ. ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಕೆಲ ಕಾಲ ರಸ್ತೆ ತಡೆದು ಮಿಂಚಿನ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ಪ್ರತಿಭಟನಾಕಾರರು ವ್ಯಕ್ತಪಡಿಸಿದರು.  ಶರಣಬಸಪ್ಪ…

Read More

ಬೈಕ್ ಕಳ್ಳನ ಬಂಧನ | ವಿವಿಧ ಕಂಪನಿಯ 6 ಮೋಟರ ಸೈಕಲ್ ಜಪ್ತಿ

ಕಲಬುರಗಿ : ವಿವಿಧ ಕಂಪನಿಯ 6 ಮೋಟರ ಸೈಕಲ್ ಜಪ್ತಿ ಮಾಡಿ ಬೈಕ್ ಕಳ್ಳತನ ಮಾಡುತ್ತಿರುವ  ಒಬ್ಬ ಆರೋಪಿಯನ್ನು ರಾಘವೇಂದ್ರ ನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ ನಗರ ಪೊಲೀಸ್ ಆಯುಕ್ತ,ಡಾ ಶರಣಪ್ಪಾ ಎಸ.ಡಿ ಡಿಸಿಪಿ ಕನಿಕಾ ಸಿಕ್ರಿವಾಲ್, ಡಿಸಿಪಿ ಪ್ರವೀಣ ನಾಯಕ,ಎಸಿಪಿ ಶರಣಬಸಪ್ಪ ಸುಬೇದಾರ ಅವರ ಮಾರ್ಗದರ್ಶನದಲ್ಲಿ  ಸಿಪಿಐ ದಿಲೀಪಕುಮಾರ ಬಿ ಸಾಗರ ನೇತೃತ್ವದ ತಂಡ, ಗುಲಾಮ ಅಲಿ ಫಾರುದ್ದೀನ ಹುಸೇನಿ ಕಾಲೋನಿ ಚಿದ್ರಿ ರೋಡ ಬೀದರ ಈತನನ್ನು ವಶಕ್ಕೆ ಪಡೆದುಕೊಂಡು ಸದರಿ ಆರೋಪಿತನಿಂದ…

Read More

ದೇವರಾಜ್ ಅರಸು ಜಯಂತಿ ಆಚರಣೆ

ಜೇವರ್ಗಿ ೨೦ : ತಾಲ್ಲೂಕಾ ಆಡಳಿತ ವತಿಯಿಂದ. ಹಾಗೂ ತಾಲ್ಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮಿನಿ ವಿಧಾನ ಸೌಧದಲ್ಲಿ ಇಂದು ಡಿ. ದೇವರಾಜ ಅರಸು ಅವರ ೧೧೦ ನೇ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನುದ್ದೇಶಿಸಿ ತಹಶೀಲ್ದಾರ ಮಲ್ಲಣ್ಣ ಯಲಗೋಡ ಅವರು ಮಾತನಾಡಿ ಉಳುವವನೇ ಭೂ ಒಡೆಯ ಎಂಬ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದು ದಲಿತರಿಗೆ ಹಿಂದುಳಿದವರ್ಗದವರಿಗೆ ಭೂಹೀನರಿಗೆ ಬಡವರಿಗೆ ಭೂಮಿಯನ್ನು ನೀಡಿ ಭೂ ಕ್ರಾಂತಿಯನ್ನೇ ಮಾಡಿದ ಹೆಮ್ಮೆಯ ನಾಯಕ ಮತ್ತು ಹಿಂದುಳಿದವರ್ಗದ ಕಣ್ಣಾಗಿ ರಾಜ್ಯದ…

Read More

ದೇವರಾಜ್ ಅರಸ್ ನಾಡು ಕಂಡ ಅಪರೂಪದ ರಾಜಕಾರಣಿ: ಹೊನ್ನಯ್ಯ ಕೊಂಕಲ್

ವಡಗೇರಾ: ಮಾಜಿ ಮುಖ್ಯಮಂತ್ರಿ ಡಿ ದೇವರಾಜ್ ಅರಸ್ ರವರು ನಾಡುಕಂಡ ಅಪರೂಪದ ರಾಜಕಾರಣಿ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ ಎಂದು ಪ್ರಾಂಶುಪಾಲ ಹೊನ್ನಯ್ಯ ಕೊಂಕಲ್ ಹೆಳಿದರು. ಪಟ್ಟಣದ ಡಿಡಿಯು ಸಿಬಿಎಸ್ ಸಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ಡಿ.ಡಿ.ಯು ಸ್ವತಂತ್ರ ಪದವಿ ಪೂರ್ವ ಕಾಲೇಜು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಿ ದೇವರಾಜ್ ಅರಸ್ ರವರ 110ನೇ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.ಡಿ ದೇವರಾಜ ಅರಸರು ದೀನ ದಲಿತರ ಆಶಾ ಕಿರಣ್…

Read More

ಕಲಾ ತಂಡಗಳ ಭವ್ಯ ಮೆರವಣಿಗೆ

ಕಲಬುರಗಿ ನಗರದ ನಗರೇಶ್ವರ ಶಾಲೆಯಿಂದ  ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜ್ ಅರಸ ಅವರ ಭಾವಚಿತ್ರದ ಮೆರವಣಿಗೆಗೆ  ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್.ಅವರು ಮಾಲಾರ್ಪಣೆ ಮಾಡಿ ಚಾಲನೆ ನೀಡಿದರು. ಸಿ.ಇ.ಓ.ಭಂವರ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಅವರು ಇದ್ದರು. ಬಳಿಕ ನಗರೇಶ್ವರ ಶಾಲೆಯಿಂದ ಕಲಾ ತಂಡಗಳ ಭವ್ಯ ಮೆರವಣಿಗೆ ಮೂಲಕ ಹೊರಟು ವೀರಶೈವ ಕಲ್ಯಾಣ ಮಂಟಪಕ್ಕೆ ಬಂದು ತಲುಪಿತು.

Read More
error: Content is protected !!