ಜಾನಪದ ಕಲಾವಿದರ ಸಂಭ್ರಮ : ಜಾನಪದ ಕಲೆಗಳನ್ನು ಉಳಿಸಿ

ಕೆಂಭಾವಿ : ನಮ್ಮ ಪೂರ್ವಜರು ತಲೆಮಾರುಗಳಿಂದ ಉಳಿಸಿಕೊಂಡು ಬಂದಿರುವ ಜಾನಪದ ಕಲೆಗಳನ್ನು, ಹಾಡುಗಳನ್ನು, ನೃತ್ಯಗಳನ್ನು ಮತ್ತು ಕಥೆಗಳನ್ನು ಸಂರಕ್ಷಿಸುವುದು ನಮ್ಮ ಮೊದಲ ಉದ್ದೇಶವಾಗಿರಬೇಕು. ಈ ಕಲೆಗಳು ನಮ್ಮ ನಾಡಿನ ಇತಿಹಾಸ ಮತ್ತು ಬದುಕಿನ ಮೌಲ್ಯಗಳನ್ನು ಪ್ರತಿಬಿಂಬಿಸುತ್ತವೆ.​ ಗ್ರಾಮೀಣ ಭಾಗದಲ್ಲಿ ಯಾವುದೇ ಪ್ರಚಾರವಿಲ್ಲದೆ, ಕೇವಲ ಕಲೆಯ ಮೇಲಿನ ಪ್ರೀತಿಯಿಂದಲೇ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ನಮ್ಮ ಕಲಾವಿದರನ್ನು ಗುರುತಿಸಿ, ಅವರಿಗೆ ಗೌರವ ಮತ್ತು ಪ್ರೋತ್ಸಾಹ ನೀಡಬೇಕು ಎಂದು ಶ್ರೀ ವೆಂಕಟೇಶ್ವರ ಶಿಕ್ಷಣ ಮತ್ತು ಗ್ರಾಮೀಣಾಭಿರುದ್ಧಿ ಸಂಸ್ಥೆ, (ಬೈಚಬಾಳ) ಅಧ್ಯಕ್ಷ ಗುರುನಾಥ…

Read More

ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ಸುನೀಲಕುಮಾರ್ ದೊಡ್ಡಮನಿ ಅವರಿಗೆ ಸನ್ಮಾನ

ಚಿತ್ತಾಪುರ; ಪಟ್ಟಣದಲ್ಲಿ ಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕರಾಗಿ ಆಯ್ಕೆಯಾದ ಸುನೀಲಕುಮಾರ್ ದೊಡ್ಡಮನಿ ಹಾಗೂ ಪಿಎಲ್’ಡಿ‌ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ ಅವರಿಗೆ ಮುಸ್ಲಿಂ ಸಮಾಜದ ಯುವ ಮುಖಂಡರು ‌ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಯುವ ಮುಖಂಡರಾದ ಶೇಖ ಬಬ್ಲು, ಮಹ್ಮದ್ ಖಾಸೀಂ, ಮಹ್ಮದ್ ರಫೀಕ್, ಎಂ.ಎ ನಯೀಮ್, ಮಹ್ಮದ್ ಸೀರಾಜ್, ಮುಜೀಬ್ ಸೇಠ ಸೇರಿದಂತೆ ಇತರರು ಇದ್ದರು.

Read More

ಚಿತ್ತಾಪುರ ಬೆಥನಿ ಪ್ರೌಢಶಾಲೆಯ ವಿದ್ಯಾಥಿ೯ನಿಯರ ಸಾಧನೆ

ಕಲಬುರಗಿ :  ರಾಯಚೂರ ಜಿಲ್ಲೆಯಲ್ಲಿ ನಡೆದ ವಿಭಾಗ ಮಟ್ಟದ ಕ್ರಿಕೆಟ್ ಕ್ರೀಡಾಕೂಟದಲ್ಲಿ  ಚಿತ್ತಾಪುರ ಪಟ್ಟಣದ ಬೆಥನಿ ಪ್ರೌಢಶಾಲೆಯ ಅಲೋಕಿ ಅವಾನಿ ಅಂಬಿಕಾ ಭೂಮಿಕಾ ನಂದಿನಿ ವಿದ್ಯಾಥಿ೯ನಿಯರು ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅದೇ ರೀತಿಯಾಗಿ ಭೂಮಿಕಾ ಎಂಬ ವಿದ್ಯಾಥಿ೯ನಿ ಎತ್ತರ ಜಿಗಿತದಲ್ಲಿ  ಪ್ರಥಮ ಸ್ಥಾನ ಪಡೆದು, ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ . ಬೆಥನಿ ಪ್ರೌಢಶಾಲೆಯ ವಿದ್ಯಾಥಿ೯ನಿಯರ ಸಾಧನೆ ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ವಿಷಯಕ್ಕೆ . ವಿದ್ಯಾಥಿ೯ನಿಯರ…

Read More

ಶಿವಯೋಗಿ ರುಸ್ತಂಪೂರ,ರಾಜ ಮಟ್ಟದ ಕರುನಾಡ ರತ್ನ ಪ್ರಶಸ್ತಿ

ಚಿಂಚೋಳಿ ತಾಲೂಕಿನ ಚಿಮ್ಮಇದಲಾಯಿ ಗ್ರಾಮದ ಶಿವಯೋಗಿ ರುಸ್ತಂಪೂರ, ಅವರಿಗೆ ಸಮಾಜ ಸೇವಕ ಎಂದು ಗುರುತಿಸಿ ಬೆಂಗಳೂರಿನ ಕರ್ನಾಟಕ ಸಂಸ್ಕೃತಿಕ ಅಕಾಡೆಮಿ ವತಿಯಿಂದ ರಾಜ್ಯಮಟ್ಟದ ಶ್ರೇಷ್ಠ ನಾಗರಿಕ ಸೇವಾ ಪ್ರಶಸ್ತಿ ಕರುನಾಡು ರತ್ನ ಪ್ರಶಸ್ತಿ ನವಂಬರ್ 13ನೇ ತಾರೀಖರಂದು ಬೆಂಗಳೂರಿನ ಕಲಾಗ್ರಾಮ ಎನ್.ಜಿ.ಇ. ಎಫ್. ಲೇಔಟ್ ಜ್ಞಾನಭಾರತಿ, ಫಂಕ್ಷನ್ ಹಾಲ ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಡಿವಿ ಸದಾನಂದ ಗೌಡ, ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗ ಕಲ್ಯಾಣ ಸಚಿವರು ಹಾಗೂ ಕನ್ನಡ ಮತ್ತು ಸಂಸ್ಕೃತಿ…

Read More

ಪ್ರದೀಪ್ ದೇಶಮುಖಗೆ ರಾಜ ಮಟ್ಟದ ಕರುನಾಡ ರತ್ನ ಪ್ರಶಸ್ತಿ

ಚಿಂಚೋಳಿ ತಾಲೂಕಿನ ಪೋಲಕಪಳ್ಳಿ ಗ್ರಾಮದ ಪ್ರದೀಪ್ ದೇಶಮುಖಗೆ ಅವರಿಗೆ ಪ್ರಗತಿಪರ ರೈತ ಮತ್ತು ಉದ್ಯಮಿದಾರರು ಎಂದು ಗುರುತಿಸಿ ಬೆಂಗಳೂರಿನ ಕರ್ನಾಟಕ ಸಂಸ್ಕೃತಿಕ ಅಕಾಡೆಮಿ ವತಿಯಿಂದ ರಾಜ್ಯಮಟ್ಟದ ಶ್ರೇಷ್ಠ ನಾಗರಿಕ ಸೇವಾ ಪ್ರಶಸ್ತಿ ಕರುನಾಡು ರತ್ನ ಪ್ರಶಸ್ತಿ ನವಂಬರ್ 13ನೇ ತಾರೀಖರಂದು ಬೆಂಗಳೂರಿನ ಕಲಾಗ್ರಾಮ ಎನ್.ಜಿ.ಇ. ಎಫ್. ಲೇಔಟ್ ಜ್ಞಾನಭಾರತಿ, ಫಂಕ್ಷನ್ ಹಾಲ ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಡಿವಿ ಸದಾನಂದ ಗೌಡ, ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗ ಕಲ್ಯಾಣ ಸಚಿವರು ಹಾಗೂ ಕನ್ನಡ…

Read More

ದೋರನಹಳ್ಳಿಯಲ್ಲಿ ಕಾಲೇಜು ಕನ್ಯಾ ಪ್ರೌಢಶಾಲೆ ಮಂಜೂರಿಗೆ ಸಚಿವರಿಗೆ ಮನವಿ

ಯಾದಗಿರಿ:ದೊರನಹಳ್ಳಿ ಗ್ರಾಮಕ್ಕೆ ಕನ್ಯಾ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜ್ ಮಂಜೂರು ಮಾಡುವಂತೆ ಒತ್ತಾಯಿಸಿ ಕಾಂಗ್ರೆಸ್ ಯುವ ಮುಖಂಡ ನಿಜಗುಣ ದೊರನಹಳ್ಳಿ ನೇತೃತ್ವದಲ್ಲಿ ಬೆಂಗಳೂರಿನ ಸದಾಶಿವ ನಗರದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಮದು ಬಂಗಾರಪ್ಪ ನವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸಲ್ಲಿಸಿ ಮಾತನಾಡಿದ ಅವರು ಯಾದಗಿರಿ ಜಿಲ್ಲೆ ಶಹಾಪೂರ ತಾಲೂಕಿನ ದೋರನಹಳ್ಳಿ ಗ್ರಾಮವು ಹೋಬಳಿ ಕೇಂದ್ರ ವಾಗಿದ್ದು ದೋರನಹಳ್ಳಿ ಗ್ರಾಮದಲ್ಲಿ ಐದು ಸರ್ಕಾರಿ ಪ್ರಾಥಮಿಕ ಶಾಲೆ ಒಂದು ಸರ್ಕಾರಿ ಪ್ರೌಢ ಶಾಲೆ ಇದ್ದು…

Read More

ಜನ್ಮ ದಿನಾಚರಣೆ;ರೋಗಿಗಳಿಗೆ ಹಣ್ಣು ಹಾಲು ವಿತರಣೆ

ಸುರಪುರ: ಜಯ ಕರ್ನಾಟಕ ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಕೆ.ಸಿ. ರಾಜಪ್ಪ (ಟೈಗರ್) ಅವರ 52ನೇ ಜನ್ಮದಿನದ ಅಂಗವಾಗಿ ಸುರಪುರ ತಾಲೂಕಾ ಘಟಕದ ವತಿಯಿಂದ ನಗರದ ತಾಲೂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು ಹಣ್ಣು ವಿತರಣೆ ಮಾಡಿ ಆಚರಿಸಲಾಯಿತು.. ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಮಲ್ಲಪ್ಪ ನಾಯಕ ಕಬಾಡಗೇರ ಮಾತನಾಡಿ, ಜಯಕರ್ನಾಟಕ ರಕ್ಷಣಾ ಸೇನೆ ಕೇವಲ ಹೋರಾಟ ಮಾತ್ರವಲ್ಲದೆ ಜನರಿಗೆ ಉಪಯೋಗವಾಗುವ ಸಾಮಾಜಿಕ ಕಾರ್ಯಗಳನ್ನೂ ಮಾಡುತ್ತದೆ ಎಂದರು. ಈ ಸಂದರ್ಭದಲ್ಲಿ ‌ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶರಣು ಬೈರಿಮಡ್ಡಿ, ತಾ.ಕಾರ್ಯಾಧ್ಯಕ್ಷ…

Read More

ವಿದ್ಯುತ್ ಶಾಕ್‍ಗೆ ಮೃತಪಟ್ಟ ರೈತ ಕುಟುಂಬಕ್ಕೆ ಶಾಸಕ ಆರ್.ವಿ.ಎನ್ ಪರಿಹಾರದ ಚೆಕ್ ವಿತರಣೆ

ಸುರಪುರ: ಹೊಲದಲ್ಲಿ ಕೆಲಸ ಮಾಡುವಾಗ ವಿದ್ಯುತ್ ತಂತಿ ತಗುಲಿ ಶಾಕ್‌ ನಿಂದ ಸಾವನಪ್ಪಿದ್ದ ರಂಗಂಪೇಟೆಯ ರೈತ ಸೋಮನಾಥ ಕುಟುಂಬಕ್ಕೆ ಸರಕಾರದ 5 ಲಕ್ಷ ರೂಪಾಯಿಗಳ ಪರಿಹಾರ ಧನದ ಚೆಕ್ ಶಾಸಕ ರಾಜಾ ವೇಣುಗೋಪಾಲ ನಾಯಕ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ವಿಠಲ್ ಯಾದವ್, ಮಲ್ಲಣ್ಣ ಸಾಹುಕಾರ ಮುಧೋಳ ,ದೊಡ್ಡ ದೇಸಾಯಿ , , ರಮೇಶ್ ಯಾದವ್, ವಾಸುದೇವ ಮಂಗಳೂರು,ನಾಗಪ್ಪ ದೇವರಗೋನಾಲ ಸೇರಿದಂತೆ ಮೃತ ರೈತನ ಕುಟುಂಬದವರಿದ್ದರು.

Read More

ಜಲಾವೃತ್ತ ನಾಯ್ಕಲ್ ಗ್ರಾಮದ ಮನೆಗಳಿಗೆ ಜಮಾದಾರ ಭೇಟಿ: ಸಾಂತ್ವನ, ಭರವಸೆ

ಯಾದಗಿರಿ: ನಿರಂತರ ಮಳೆಯಿಂದಾಗಿ ಅಪಾರ ಹಾನಿ ಉಂಟಾಗಿರುವ ವಡಗೇರಿ ತಾಲ್ಲೂಕಿನ ನಾಯ್ಕಲ್ ಗ್ರಾಮದ ಜಲಾವೃತ್ತ ಪ್ರದೇಶಗಳಿಗೆ ಕೆಪಿಸಿಸಿ ರಾಜ್ಯ ಸಂಯೋಜಕ ಮತ್ತು ಕಿಸಾನ್ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಮೈನುದ್ದಿನ್ ಎಂ. ಜಮಾದಾರ ದೋರನಳ್ಳಿ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಪಾರ ಮಳೆಯಿಂದಾಗಿ ಭೀಮಾನದಿ ನೀರು ಹೊಲ ಗದ್ದೆಗಳಿಗೆ ಅಲ್ಲದೇ ಮನೆಗಳಿಗೆ ನುಗ್ಗಿದ್ದು, ಅಪಾರ ನಷ್ಟವಾಗಿದೆ,  ಸತತ ಮಳೆಯ ಕಾರಣ ವಡಗೇರಿ ತಾಲ್ಲೂಕಿನಲ್ಲಿ ಹೆಚ್ಚು ಹಾನಿಯಾಗಿದ್ದು, ಅದರಲ್ಲೂ ನಾಯ್ಕಲ್…

Read More

ಕೃಷ್ಣಾ ನದಿಗೆ 1, ಲಕ್ಷ 34,ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಯಾದಗಿರಿ : ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಿರುವ ಹಿನ್ನೆಲೆಯಲ್ಲಿ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಬಂದಿದ್ದೆ ಬಸವಸಾಗರ ಜಲಾಶಯದಿಂದ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದ್ದು, ಕೃಷ್ಣಾ ನದಿಗೆ ಸೋಮವಾರ  1, ಲಕ್ಷ 34,ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು ಕೃಷ್ಣಾ ನದಿ ದಡಕ್ಕೆ ಯಾರು ತೆರಳದಂತೆ ಜಲಾಶಯದ ಅಧಿಕಾರಿಗಳಿಂದ ಎಚ್ಚರಿಕೆ ನೀಡಿದ್ದಾರೆ

Read More
error: Content is protected !!