gulbargametro

ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 29 ಖರೀದಿ ಕೇಂದ್ರ ಆರಂಭ

ಯಾದಗಿರಿ : 2025-26ನೇ ಸಾಲಿನ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಯಾದಗಿರಿ ಜಿಲ್ಲೆಯ ರೈತರಿಂದ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಹತ್ತಿ ಮದ್ಯಮ ಎಳೆ ಪ್ರತಿ ಕ್ವಿಂಟಾಲಗೆ 7,710 ರೂ.ಗಳ ಹಾಗೂ ಉದ್ದನೆ ಎಳ 8110 ರೂ.ಗಳಂತೆ ಪ್ರತಿ ಎಕರೆಗೆ 8.5 ಕ್ವಿಂಟಾಲ ಖರೀದಿಸಲು ಭಾರತೀಯ ಹತ್ತಿ ನಿಗಮ ಹುಬ್ಬಳ್ಳಿ ಖರೀದಿ ಏಜೇನ್ಸಿಯಾಗಿ ಯಾದಗಿರಿ ಜಿಲ್ಲೆಗೆ ನೇಮಿಸಲಾಗಿದೆ ಎಂದು ಯಾದಗಿರಿ ಜಿಲ್ಲಾ ಟಾಸ್ಕ್ ಫೋರ್ಸ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಶ್ರೀ…

Read More

ಸಿಂಧಗಿ ಶಾಸಕ  ಕಾರು ಅಫಘಾತ

ವಿಜಯಪುರ : ಸಿಂಧಗಿ ಶಾಸಕ ಆಶೋಕ ಮನಗೂಳಿ ಕಾರು ವಿಜಯಪುರ ಜಿಲ್ಲೆಯ ಸಿಂಧಗಿ ಬೈಪಾಸ ಬಳಿ ಅಫಘಾತವಾಗಿದೆ. ಶಾಸಕರ ಇನ್ನೊವಾ ಕಾರು ಮತ್ತು ಸ್ವಿಫ್ಟ ಕಾರಿನ ನಡುವೆ ಅಪಘಾತ ಸಂಭವಿಸಿದೆ.ಕಾರಿನಲ್ಲಿ ಶಾಸಕ ಮನಗೂಳಿ ಪುತ್ರಿ, ಸಹೋದರನ ಮಗ ಕಾರಿನಲ್ಲಿ ದ್ದರು. ಎರಡು ಕಾರಿನಲ್ಲಿದವರಿಗೆ ಸಣ್ಣಪುಟ್ಟ ಗಾಯಗೊಂಡಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ತಿಳಿದುಬಂದಿದ್ದೆ.

Read More

ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಇಂದಿನಿಂದ ಎಸ್ಕಾಟ್೯ ನೀಡಿರುವ ಗೃಹ ಇಲಾಖೆ

ಬೆಂಗಳೂರು : ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದು,ರಾಜ್ಯ ಸರ್ಕಾರ ಬೆಂಗಾವಲು ಪಡೆ ವಾಹನ ನೀಡಲಾಗಿದೆ. ಇಂದಿನಿಂದ ಎಸ್ಕಾಟ್೯ ನೀಡಿರುವ ಗೃಹ ಇಲಾಖೆ, ಗುಪ್ತಚರ ಇಲಾಖೆ ಮಾಹಿತಿಯಂತೆ ಬೆಂಗಾವಲು ವಾಹನ ನೀಡಿದೆ. ಬೆದರಿಕೆ‌ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಡಿಜಿ ಅವರಿಗೆ ದೂರ ನೀಡಿದರು. ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್ ಎಸ್ ಎಸ್ ವಿರುದ್ದ ಕೀಡಿಕಾರಿದರು ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದರು. ಆರ್ ಎಸ್ ಎಸ್…

Read More

ಸಮಾಜದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪೋಲಿಸ್ ಇಲಾಖೆಯ ಪಾತ್ರ ಬಹಳಷ್ಟು ಪ್ರಮುಖವಾದದ್ದು : ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್

ಕಲಬುರಗಿ : ಸಮಾಜದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪೋಲಿಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಪಾತ್ರ ಬಹಳಷ್ಟು ಪರಿಣಾಮಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನಮ್ ಅವರು ಹೇಳಿದರು. ಮಂಗಳವಾರದಂದು ಪೊಲೀಸ್ ಹುತಾತ್ಮರ ಸ್ಮಾರಕ ಡಿ.ಎ.ಆರ್ ಮೈದಾನದಲ್ಲಿ ಕಲಬುರಗಿ ನಗರ ಮತ್ತು ಕಲಬುರಗಿ ಜಿಲ್ಲಾ ಪೊಲೀಸ್ ವತಿಯಿಂದ ಕರ್ತವ್ಯ ಪಾಲನೆಯಲ್ಲಿ ಪ್ರಾಣವನ್ನು ಸಮರ್ಪಿಸಿದ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಚ ಅರ್ಪಿಸಿ ಮಾತನಾಡಿದರು. ಪ್ರತಿಯೊಂದು ಸರ್ಕಾರದ ಕೆಲಸ ಪೊಲೀಸ್ ಇಲಾಖೆ, ಜಿಲ್ಲಾಡಳಿತ ಸಮನ್ವಯತೆಯಿಂದ ಕೆಲಸ ಮಾಡುತ್ತೇವೆ…

Read More

ವಡಗೇರಾ ತಾಲೂಕಿನ ಗ್ರಾಮೀಣ ಭಾಗದ ರಸ್ತೆಗಳ ದುರಸ್ತಿಗೆ:ಒತ್ತಾಯ

ವಡಗೇರಾ: ಸತತವಾಗಿ ಸುರಿದ ಬಾರಿ ಮಳೆಯಿಂದ ತಾಲೂಕಿನ ಕೊನಹಳ್ಳಿ – ಕಂದಳ್ಳಿ ತುಮಕೂರು-ವಡಗೇರಾ ಮತ್ತು ಮಾಚನೂರ -ಬೆಂಡೆಬೆಂಬಳಿ ವಡಗೇರಾ- ಕುರುಕುಂದ-ನಾಯ್ಕಲ್ ಕುರುಕುಂದ ಹಾಗೂ ತಾಲೂಕಿನ ವಿವಿಧ ಗ್ರಾಮಗಳ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತೀವ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ..ಕೂಡಲೆ ಜಿಲ್ಲಾಡಳಿತ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ್ ಸಾಹುಕಾರ ಒತ್ತಾಯಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಗ್ರಾಮೀಣ ಭಾಗದ ಹಲವು ಪ್ರಮುಖ ರಸ್ತೆಗಳು ಮಳೆಯಿಂದ ಸಂಪೂರ್ಣವಾಗಿ ಹದಗೆಟ್ಟಿದ್ದು ಜನಪ್ರತಿನಿಧಿಗಳು…

Read More

ಗಾಂಧಿ ಸ್ಮೃತಿ ~ ಜನ ಜಾಗೃತಿ ಸಮಾವೇಶ: ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಹೇಳಿಕೆ

ರಾಜ್ಯದಲ್ಲಿ ಒಂದು ಲಕ್ಷ 40 ಸಾವಿರ ಜನರನ್ನು ಮದ್ಯಮುಕ್ತ ಮಾಡಿದ ಧರ್ಮಸ್ಥಳದ ಸಾಧನೆ ಪ್ರಶಂಸನೀಯ ಕಲಬುರಗಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಸಹಯೋಗದಲ್ಲಿ ಮದ್ಯ ವರ್ಜನ ಶಿಬಿರ ಹಮ್ಮಿಕೊಂಡು ರಾಜ್ಯದಲ್ಲಿ 1 ಲಕ್ಷ 40ಸಾವಿರ ಜನರನ್ನು ಮದ್ಯ ವ್ಯಸನದಿಂದ ಮುಕ್ತಗೊಳಿಸಿರುವುದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ದೊಡ್ಡ ಸಾಧನೆಯಾಗಿದ್ದು ಅಭಿನಂದನೆಯ ಕಾರ್ಯಕ್ರಮ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರಾದ ಶರಣಪ್ಪ ಸಲದಾಪುರ ಅಭಿಪ್ರಾಯಪಟ್ಟರು. ಕಲಬುರಗಿಯ ರಾಮತೀರ್ಥದ…

Read More

ಅಕ್ಟೋಬರ್ 27 ಮತ್ತು 30 ಹಾಗೂ ನವೆಂಬರ್ 3ಕ್ಕೆ ಮಿಂಚಿನ‌ ನೋಂದಣಿ ಅಭಿಯಾನ -ಜಹೀರಾ ನಸೀಮ್

ಕಲಬುರಗಿ, ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಭಾಗವಾಗಿ ಇದೇ ಅಕ್ಟೋಬರ್ 27 ಮತ್ತು 30 ಹಾಗೂ ನವೆಂಬರ್ 3ಕ್ಕೆ ಬೆಳಿಗ್ಗೆ 10 ರಿಂದ‌‌ ಸಂಜೆ‌ 5.30 ಗಂಟೆ ವರೆಗೆ ವಿಶೇಷ ಮಿಂಚಿನ‌ ನೋಂದಣಿ ಅಭಿಯಾನ ಕ್ಷೇತ್ರದಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಎಂದು ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್ ತಿಳಿಸಿದ್ದಾರೆ.01.11.2025 ಅರ್ಹತಾ ದಿನಾಂಕಕ್ಕೆ ಅನ್ವಯಸುವಂತೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆದಿದ್ದು, ಅರ್ಹ ಮತದಾರರು ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ನವೆಂಬರ್ 6 ಕೊನೆಯ ದಿನವಾಗಿದ್ದು,…

Read More

ಮುತ್ತಗಿ ಗ್ರಾಮದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿ ಭಗ್ನಗೊಳಿಸಿದ ಆರೋಪಿಗಳಿಗೆ ಬಂಧಿಸಿ ಕಠಿಣ ಶಿಕ್ಷೆಗೆ ಆಗ್ರಹ: ಲಚ್ಚಪ್ಪ ಜಮಾದಾರ

ಜಗತ್ ವೃತ್ತದಿಂದ ಎಸ್ಪಿ ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ಕಲಬುರಗಿ: ಜಿಲ್ಲೆಯ ಶಹಾಬಾದ ತಾಲೂಕಿನ ಮುತ್ತಗಿ ಗ್ರಾಮದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಅಗ್ರಹಿಸಿ ಎಸ್.ಪಿ ಕಛೇರಿ ಎದುರುಗಡೆ ಕೋಲಿ ಸಮಾಜ ಮುಖಂಡರು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಕರ್ನಾಟಕ ರಾಜ್ಯ ಕೋಲಿ ಕಬ್ಬಲಿಗ ಎಸ್.ಟಿ. ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ ಅವರು ಮಾತನಾಡಿ, ಕಲಬುರಗಿ ಜಿಲ್ಲೆಯ ಶಹಾಬಾದ ತಾಲೂಕಿನ ಮುತ್ತಗಿ ಗ್ರಾಮದಲ್ಲಿ ಅ 9 ರಂದು ಗುರುವಾರ ತಡರಾತ್ರಿಯಲ್ಲಿ ಶ್ರೀ…

Read More

ದೋರನಹಳ್ಳಿಯಲ್ಲಿ ಕಾಲೇಜು ಕನ್ಯಾ ಪ್ರೌಢಶಾಲೆ ಮಂಜೂರಿಗೆ ಸಚಿವರಿಗೆ ಮನವಿ

ಯಾದಗಿರಿ:ದೊರನಹಳ್ಳಿ ಗ್ರಾಮಕ್ಕೆ ಕನ್ಯಾ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜ್ ಮಂಜೂರು ಮಾಡುವಂತೆ ಒತ್ತಾಯಿಸಿ ಕಾಂಗ್ರೆಸ್ ಯುವ ಮುಖಂಡ ನಿಜಗುಣ ದೊರನಹಳ್ಳಿ ನೇತೃತ್ವದಲ್ಲಿ ಬೆಂಗಳೂರಿನ ಸದಾಶಿವ ನಗರದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಮದು ಬಂಗಾರಪ್ಪ ನವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸಲ್ಲಿಸಿ ಮಾತನಾಡಿದ ಅವರು ಯಾದಗಿರಿ ಜಿಲ್ಲೆ ಶಹಾಪೂರ ತಾಲೂಕಿನ ದೋರನಹಳ್ಳಿ ಗ್ರಾಮವು ಹೋಬಳಿ ಕೇಂದ್ರ ವಾಗಿದ್ದು ದೋರನಹಳ್ಳಿ ಗ್ರಾಮದಲ್ಲಿ ಐದು ಸರ್ಕಾರಿ ಪ್ರಾಥಮಿಕ ಶಾಲೆ ಒಂದು ಸರ್ಕಾರಿ ಪ್ರೌಢ ಶಾಲೆ ಇದ್ದು…

Read More

ಸಿದ್ಧರಾಮ ಶಿವಯೋಗಿಗಳ ೭೫ ನೇ ಪುಣ್ಯಾರಾಧನೆ

ಜೇವರ್ಗಿ : ತಾಲೂಕಿನ ಶಖಾಪುರ ಎಸ್.ಎ ಗ್ರಾಮದ ಸದ್ಗುರು ವಿಶ್ವಾರಾಧ್ಯ ತಪೋವನ ಮಠದ ಲಿಂ. ಸಿದ್ಧರಾಮ ಶಿವಯೋಗಿಗಳ ೭೫ ನೇ ಪುಣ್ಯಾರಾಧನೆ ಹಾಗೂ ಧಾರ್ಮಿಕ ಸಭೆಯನ್ನು ೧೨ ಭಾನುವಾರದಂದು ಶ್ರೀಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಪೀಠಾಧಿಪತಿ ಡಾ. ಸಿದ್ಧರಾಮ ಶಿವಾಚಾರ್ಯರು ತಿಳಿಸಿದ್ದಾರೆ. ಪುಣ್ಯಾರಾಧನೆ ನಿಮಿತ್ತ ಶ್ರೀಮಠದಲ್ಲಿ ನಡೆಯುತ್ತಿರುವ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ೧೦ ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸಲಿದ್ದಾರೆ. ಪ್ರಸಾದಕ್ಕೆ ೩೫ ಕ್ವಿಂಟಲ್ ಜೋಳ ಮತ್ತು ಸಜ್ಜಿ ರೊಟ್ಟಿಗಳನ್ನು…

Read More
error: Content is protected !!