ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ರಾಷ್ಟ್ರಧ್ವಜಾರೋಹಣ
ಕಲಬುರಗಿ,ರಾಜ್ಯದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್, ಐ.ಟಿ.ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಶುಕ್ರವಾರ ಕಲಬುರಗಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ನಂತರ ವಿವಿಧ ತುಕಡಿಗಳನ್ನು ಪರಿವೀಕ್ಷಿಸಿದರು. ಪರೇಡ್ ಕಮಾಂಡರ್ ಡಿ.ಎ.ಆರ್ ಆರ್.ಪಿ.ಐ ಮಲ್ಲಯ್ಯ, ಸಹಾಯಕ ಪರೇಡ್ ಕಮಾಂಡರ್ ಡಿ.ಎ.ಆರ್ ಆರ್.ಎಸ್.ಐ ದುರ್ಗಸಿಂಹ ನೇತೃತ್ವದಲ್ಲಿ ಕಲಬುರಗಿ ನಗರ ಸಿ.ಎ.ಆರ್. ಘಟಕ, ಸಿವಿಲ್ ಕಲಬುರಗಿ ಜಿಲ್ಲೆ (ಪುರುಷ), ಸಿವಿಲ್ ಕಲಬುರಗಿ ನಗರ (ಪುರುಷ), ಸಿವಿಲ್ ಕಲಬುರಗಿ…


