gulbargametro

೨೦೨೪-೨೫ ನೇ ಸಾಲಿನ ೪೪ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ

ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ವಿಶ್ವರಾಧ್ಯ ಕಲ್ಯಾಣ ಮಂಟಪದಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆ (ನಿ) ಆಳಂದ ಸನ್ ೨೦೨೪-೨೫ ನೇ ಸಾಲಿನ ೪೪ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯನ್ನು ಹಿರಿಯ ರೈತರಾದ ಶರಣು ಪಾಟೀಲ ಭೂಸನೂರ, ಅಣ್ಣಾರಾವ ಸಣ್ಣಮನಿ, ಮಹಾಂತಗೌಡ ಪಾಟೀಲ, ಮೈನೋದ್ದಿನ ಜವಳಿ, ಪುಂಡಲಿಕ ಗುತ್ತೇದಾರ ಇವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅತಿ ಹೆಚ್ಚು ಕಬ್ಬು ಸರಬರಾಜು ಮಾಡಿದ ರೈತರಾದ ಅಶೋಕ ಗುತ್ತೇದಾರ, ಖಾಜಿ ಸೈಯದ್ ಖಾಲಿ, ಸಿದ್ದು ಅಮೃತಪ್ಪಾ ಪಾಟೀಲ ಅವರನ್ನು ಸನ್ಮಾನಿಸಲಾಯಿತು.ಸಹಕಾರಿ ಸಕ್ಕರೆ…

Read More

ನಮ್ಮ ನಡೆ ಫಲಿತಾಂಶದ ಕಡೆ” ಆರ್. ಜೆ ಕಾಲೇಜಿನಲ್ಲಿ ವಿಷಯಾಧಾರಿತ ಪುನಃಶ್ಚೇತನ ಕಾರ್ಯಾಗಾರ

ಕಲಬುರಗಿ: ಶಾಲಾ ಶಿಕ್ಷಣ ಇಲಾಖೆಯು (ಪದವಿ ಪೂರ್ವ) ಕಲಬುರಗಿ, ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ (ರಿ) ಶಾಖೆ ಕಲಬುರಗಿ, ಉಪನ್ಯಾಸಕರ ಸಂಘ (ರಿ) ಶಾಖೆ ಕಲಬುರಗಿ ಹಾಗೂ ರಮಾಬಾಯಿ ಜಹಾಗೀರದಾರ ಸ್ವತಂತ್ರ ಪದವಿ ಪೂರ್ವ ಕಾಲೇಜು (ಆರ್.ಜೆ) ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಷಯಾಧಾರಿತ ಪುನಃಶ್ಚೇತನ ಕಾರ್ಯಾಗಾರ ಆಯೋಜಿಸಲಾಗಿತ್ತು. ಜೀವಶಾಸ್ತ್ರ ಮತ್ತು ವಾಣಿಜ್ಯಶಾಸ್ತ್ರ ವಿಷಯಗಳ ಫಲಿತಾಂಶ ಸುಧಾರಣೆಗಾಗಿ ನಡೆಸಿದ ಕಾರ್ಯಗಾರಕ್ಕೆ ಉಧ್ಘಾಟಕರಾಗಿ ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪನಿರ್ದೇಶಕರಾದ ಸುರೇಶ ಅಕ್ಕಣ್ಣ ಅವರು…

Read More

ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ, ಶಾಂತಿ: ಹಾರಕೂಡ ಶ್ರೀ

ಯಲಕಪಳ್ಳಿಯಲ್ಲಿ ರಾಮಲಿಂಗೇಶ್ವರ ದೇವಸ್ಥಾನ ಉದ್ಘಾಟನೆ, ಕಳಸಾರೋಹಣ ಕಾರ್ಯಕ್ರಮ ಕಲಬುರಗಿ:ಒತ್ತಡದ ಜೀವನದಿಂದ ಮನುಷ್ಯ ಮನಸ್ಸಿನ ನೆಮ್ಮದಿ ಕಳೆದುಕೊಳ್ಳುತ್ತಿದ್ದು, ಮನಸ್ಸಿನ ನೆಮ್ಮದಿಗಾಗಿ ಪ್ರತಿಯೊಬ್ಬರೂ ಧಾರ್ಮಿಕ ಕಾರ್ಯದಲ್ಲಿ ತೊಡಗಬೇಕು‌.ಮಠ – ಮಂದಿರಗಳು ಧಾರ್ಮಿಕ ಭಾವನೆಗಳ ಬಗ್ಗೆ ಅರಿವು ಮೂಡಿಸುತ್ತಿದ್ದು, ಜನರಿಗೆ ನೆಮ್ಮದಿ ತರುವ ನೆಮ್ಮದಿ ತಾಣವಾಗಿವೆ ಎಂದು ಸುಕ್ಷೇತ್ರ ಹಾರಕೂಡದ‌ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ತಿಳಿಸಿದರು. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಯಲಕಪಳ್ಳಿ ಗ್ರಾಮದಲ್ಲಿ‌ ಗುರುವಾರ ಹಮ್ಮಿಕೊಂಡ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಉದ್ಘಾಟನೆ ಹಾಗೂ ಕಳಸಾರೋಹಣ ಕಾರ್ಯಕ್ರಮ…

Read More

ಮಳೆ ನೀರು ರೈತರ ಹೊಲಗಳಿಗೆ ನುಗ್ಗಿವೆ ಕಂಗಾಲಾದ  ಅನ್ನದಾತ

ಕಲಬುರಗಿ: ಮಹಾರಾಷ್ಟ್ರದ ಅಕ್ಕಲಕೋಟ ತಾಲೂಕಿನ ಕುರನೂರ ಡ್ಯಾಮನಿಂದ ಗುರುವಾರ ರಾತ್ರಿ  ನೀರು ಹರಿಬಿಟ್ಟಿದ್ದರಿಂದ ಅಫಜಲಪುರ ತಾಲೂಕಿನ ಜೇವರಗಿ ತೆಲ್ಲೂಣಗಿ ಹಿರೆ ಜೇವರಗಿ ನಂದರಗಿ ಗೌರ ಬಂಕಲಗಿ ದಿಕ್ಸಂಗಾ ಈ ಎಲ್ಲಾ ಗ್ರಾಮಗಳ ರೈತರ ಜಮೀನಿಗೆ ನೀರು ನುಗ್ಗಿದ್ದು ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಸುಮಾರು ನೂರಾರು ಎಕರೆ ಮೇಲಪಟ್ಟು ಬೆಳೆದ ಬೆಳೆ ಹಾನಿಯಾಗಿದೆ. ಸಾಲ ಸೋಲ ಮಾಡಿ ಬಿತ್ತಿದ ರೈತರ ಹೊಲ ಗದ್ದೆಯಲ್ಲಿದ್ದ ರೈತರ ವಾಣಿಜ್ಯ ಬೆಳೆಗಳಾದ ಹತ್ತಿ ತೊಗರಿ ಉದ್ದು ಕಬ್ಬು ಸೋಯಾಬಿನ…

Read More

ಅಫಜಲಪುರ : ಮಳೆದಿಂದ ಹಾನಿಯಾದ ಮನೆಗಳಿಗೆ ಜಿಪಂ ಸಿಇಒ ಭೇಟಿ

ಕಲಬುರಗಿ: ಮಹಾರಾಷ್ಟ್ರದ ಅಕ್ಕಲಕೋಟ ತಾಲೂಕಿನ ಕುರನೂರ ಡ್ಯಾಮನಿಂದ ಗುರುವಾರ ರಾತ್ರಿ ನೀರು ಹರಿಬಿಟ್ಟಿದ್ದರಿಂದ ಅಫಜಲಪುರ ತಾಲೂಕಿನ ನಂದರಗಿ ತೆಲ್ಲೂಣಗಿ ಜೇವರ್ಗಿ ಬಿ ಜೇವರ್ಗಿ ಕೆ ಗೌರ ಬಂಕಲಗಾ ದಿಕ್ಸಂಗಾ ಈ ಎಲ್ಲಾ ಗ್ರಾಮಗಳು ಪ್ರವಾಹದ ಆತಂಕದಲ್ಲಿದ್ದು ನಂದರಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜೇವರ್ಗಿ ಬಿ, ಗ್ರಾಮಕ್ಕೆ ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭವಂರ ಸಿಂಗ್ ಮೀನಾ ಅವರು ಭೇಟಿ ನೀಡಿದರು. ಬೋರಿ ಹಳ್ಳ ನೀರಿಂದ ಹಾನಿಯಾದ ಮನೆಗಳಿಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ  ಧೈಯ೯ ತುಂಬಿದರು….

Read More

ಅಫಜಲಪುರದ ಜಾಹಗಿರದಾರ ಕಾಪ್ಲೇಕ್ಸನಲ್ಲಿ ಎನ್ ಎಸ್ ಎಲ್ ಶುಗರ್ಸ್ ಲಿ ಭುಸನೂರ ಕಾರ್ಖಾನೆಯಿಂದ ಸಕ್ಕರೆ ವಿತರಣೆ

ಕಲಬುರಗಿ: ರೈತರು ತಾವು ಪೂರೈಸಿದ ಪ್ರತಿ ಟನ್‌ ಕಬ್ಬಿಗೆ 250 ಗ್ರಾಂ (ಪ್ರತಿ ಕೆ.ಜಿಗೆ ₹20 ದರದಲ್ಲಿ) ಸಕ್ಕರೆಯನ್ನು ಸೇ 10ರಿಂದ 20 ರವರೆಗೆ ಎನ್ ಎಸ್ ಎಲ್ ಶುಗರ್ಸ್ ಲಿ ಭುಸನೂರ ಕಾರ್ಖಾನೆಯಿಂದ ಅಫಜಲಪುರ ಪಟ್ಟಣದ ಜಾಹಗಿರದಾರ ಕಾಪ್ಲೇಕ್ಸದಲ್ಲಿ ವಿತರಿಸಲಾಗುವುದು. ಸೂಕ್ತ ದಾಖಲೆ ತಮ್ಮ ಆಧಾರ ಕಾರ್ಡ ತೋರಿಸಿ, ರೈತರು ಖುದ್ದಾಗಿ ಅಥವಾ ತಮ್ಮ ಪ್ರತಿನಿಧಿ ಮೂಲಕ ಸಕ್ಕರೆ ಪಡೆಯಬಹುದು ಎಂದು ಕಾರ್ಖಾನೆಯ ಉಪಾಧ್ಯಕ್ಷ ಬಾಸ್ಕರ ನಾಯ್ಡು ತಿಳಿಸಿದ್ದಾರೆ. ರೈತರಿಗೆ ಅನುಕೂಲವಾಗುವಂತೆ ಅಫಜಲ್ಪುರ ಪಟ್ಟಣ ಹಾಗೂ…

Read More

ಆದರ್ಶ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಮಂಜು ಬಿರಾದಾರವರಿಗೆ ಸನ್ಮಾನ

 ಶಹಾಪುರ : ಯಾದಗಿರಿ ಜಿಲ್ಲಾ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಪುರಸ್ಕೃತ ಕನ್ನಡ ಪ್ರಭ ಪತ್ರಿಕೆಯ ಜಿಲ್ಲಾ ಛಾಯಾಗ್ರಾಹಕ ಮಂಜು ಬಿರಾದಾರ್ ಅವರಿಗೆ ನಗರದ ಆದರ್ಶ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಮಂಜು ಬಿರಾದಾರವರಿಗೆ ಸನ್ಮಾನ ಮಾಡಲಾಯಿತು.   ಆಡಳಿತ ಮಂಡಳಿಯ ಆಡಳಿತಾಧಿಕಾರಿ ಸಿ ಎಂ ಕಟ್ಟಿಮನಿ ಅವರು ಸನ್ಮಾನಿತರನ್ನು ಉದ್ದೇಶಿಸಿ ಮಾತನಾಡಿ  ಒಂದು ಚಿತ್ರ ನೂರು ಕಥೆ ಹೇಳುವುದು ಚಿತ್ರಗಳಿಲ್ಲದೆ ಯಾವುದೇ ಸುದ್ದಿ ಬಿತ್ತರಿಸಲು ಕಷ್ಟ ಸಾಧ್ಯ ಅಂತಹ ಮಹತ್ವದ ಕಾರ್ಯ ನಿಭಾಸುವ ಮಂಜು ಅವರು ನಮ್ಮ…

Read More

ಕನ್ನಡ ಜಾಗೃತಿ ಸಮಿತಿಗೆ ಬಸವರಾಜ ಶಿಣ್ಣೂರ ನೇಮಕ

ಶಹಾಪುರ : ಕರ್ನಾಟಕ ರಾಜ್ಯದಲ್ಲಿ ಕನ್ನಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ,ಕನ್ನಡ ಜಾಗೃತಿ ಸಮಿತಿ ಸದಸ್ಯರನ್ನಾಗಿ ಬಸವರಾಜ ಶಿಣ್ಣೂರ ಅವರನ್ನು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ,ಸರಕಾರದ ಅಧೀನ ಕಾರ್ಯದರ್ಶಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೆ.ಆರ್.ರಮೇಶ್ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಯಾದಗಿರಿ ಜಿಲ್ಲೆಯ ಆಯಾ ವಿಧಾನಸಭಾ ಮತಕ್ಷೇತ್ರಗಳಿಗೆ ಕನ್ನಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಕನ್ನಡ ಜಾಗೃತಿ ಸಮಿತಿಗೆ ಅಧಿಕಾರೇತರ ಸದಸ್ಯರನ್ನಾಗಿ ಸಾಹಿತಿ – ಪತ್ರಕರ್ತ ಬಸವರಾಜ ಶಿಣ್ಣೂರ ಅವರನ್ನು  ನಾಮನಿರ್ದೇಶನ ಮಾಡಿ ಆದೇಶಿಸಲಾಗಿದೆ….

Read More

ಸುರಪುರ:ಹಾನಗಲ್ಲ ಕುಮಾರ ಶಿವಯೋಗಿ ಜಯಂತಿ ಆಚರಣೆ

ಸುರಪುರ: ನಗರದ ಬಸವ ಭವನದಲ್ಲಿನ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕಾರ್ಯಾಲಯದಲ್ಲಿ ಹಾನಗಲ್ಲ ಕುಮಾರ ಶಿವಯೋಗಿಗಳ ಜಯಂತಿ ಆಚರಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಾಸಭಾದ ತಾಲೂಕ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ, ಹಾನಗಲ್ಲ ಕುಮಾರ ಶಿವಯೋಗಿಗಳು ಸಮಾಜ ಸಂಜೀವಿನಿ ಎಂದು ಪ್ರಖ್ಯಾತರಾದವರು ಅವರ ಆದರ್ಶಗಳನ್ನು ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ನೀಡಿದ್ದಾರೆ.ಅವರ ತತ್ವ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಹಾನಗಲ್ಲ ಕುಮಾರ ಶಿವಯೋಗಿಗಳ ಜೀವನ ಮತ್ತು ಸಾಧನೆಗಳ ಕುರಿತು ಅನೇಕ ಬರಹಗಳು, ಪುಸ್ತಕಗಳು ಪ್ರಕಟಗೊಂಡಿವೆ ಅವುಗಳನ್ನು…

Read More

2 ಕಳ್ಳತನ ಪ್ರಕರಣದಲ್ಲಿ ಇಬ್ಬರು ಆರೋಪಿ‌ ಬಂಧನ

  ಕಲಬುರಗಿ : ರೇವೂರ್ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 2 ಕಳ್ಳತನ ಪ್ರಕರಣಗಳಲ್ಲಿ ಇಬ್ಬರು ಆರೋಪಿತರನ್ನು ಬಂಧಿಸಿ, ಬಂಧಿತರಿಂದ 1 ಲಕ್ಷ ನಗದು ಹಣ, 40 ಗ್ರಾಂ ಬಂಗಾರದ ಆಭರಣಗಳು & ಕೃತ್ಯಕ್ಕೆ ಬಳಸಿದ ಮೋಟಾರ್‌ ಸೈಕಲ್‌ ಹೀಗೆ ಒಟ್ಟು 5 ಲಕ್ಷ 50 ಸಾವಿರ ರೂಪಾಯಿ ಮೌಲ್ಯದ ಮುದ್ದೆ ಮಾಲನ್ನು ವಶಕ್ಕೆ ಪಡೆದು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಿಕೊಡಲಾಯಿತು.

Read More
error: Content is protected !!