gulbargametro

ಜಿಲ್ಲಾ ಮಟ್ಟಕ್ಕೆ ಗೋಗಿ ಪಿಯುಸಿ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆ : ರಾಮಚಂದ್ರ ಗೋಡೆನವರ್ ಹರ್ಷ

ಗೋಗಿ: ಶಿಕ್ಷಣ ಇಲಾಖೆ(ಪದವಿ ಪೂರ್ವ)ಯಿಂದ ಶಹಾಪೂರ  ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ತೋರಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕಿಯರ ಕಬಡ್ಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ,ಬಾಲಕಿಯರ ಥ್ರೋ ಬಾಲ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಬಾಲಕರ ಖೋ ಖೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಬಾಲಕರ ಥ್ರೋ ಬಾಲನಲ್ಲಿ ದ್ವೀತಿಯ ಸ್ಥಾನ, ಗುಂಡು,ಚಕ್ರ,ಭರ್ಚಿ ಎಸೆತದಲ್ಲಿ ಪ್ರಥಮ ಸ್ಥಾನ, 200 ಮೀಟರ್ ಓಟದಲ್ಲಿ ಪ್ರಥಮ, 400 ಮೀಟರ್ ರೀಲೆ ಪ್ರಥಮ,…

Read More

ಬೈಕ ಕಳ್ಕತನ : ಕಳ್ಳರ ಕೃತ್ಯ ಸಿಸಿ ಟಿವಿಯಲ್ಲಿ ಸೆರೆ

ಕಲಬುರಗಿ : ಕಲಬುರಗಿ ನಗರದಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ನಿಲ್ಲಿಸ್ತಿದ್ದ ಬೈಕ್‌ಗಳು ಹೆಚ್ಚೆಚ್ಚು ಕಳ್ಳತನವಾಗ್ತಿದ್ದವು. ಇದೀಗ ಮನೆ ಮುಂದೆ ನಿಲ್ತಿಸ್ತಿರೋ ಬೈಕ್‌ಗಳಿಗೂ ಸೆಫ್ಟಿ ಇಲ್ಲದಂತಾಗಿದೆ. ನಗರದ ಮಹಾಂತೇಶ್ವರ ಕಾಲೋನಿಯಲ್ಲಿ ಗೇಟ್ ಓಪನ್ ಮಾಡಿ ಬೈಕ್ ಇಬ್ಬರು ಕಳ್ಳರು ಬೈಕ್ ಕಳ್ಳತನ ಮಾಡಿ ಬಳಿಕ ಪಕ್ಕದ ಮನೆಯನ್ನ ಸಹ ದೋಚಿಕೊಂಡು ಹೋಗಿದ್ದಾರೆ. ಕಳ್ಳರ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ‌. ಸೆ21 ರಂದು ಬೆಳಗ್ಗೆ 9.30 ಕ್ಕೆ ಮಾಹಿತಿ ಲಭ್ಯವಾಗಿದೆ. ಅಶೋಕ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..

Read More

ಬಸವೇಶ್ವರ ಕಾಲೋನಿಯ ಚರಂಡಿಯಲ್ಲಿ ಶವ ಪತ್ತೆ

ಕಲಬುರಗಿ : ಕಳೆದ ಹಲವು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರೋ ಮಳೆಯಿಂದಾಗಿ ಕಲಬುರಗಿ ನಗರದಲ್ಲಿ ಚರಂಡಿಗಳು ಸಹ ಉಕ್ಕಿ ಹರಿಯುತ್ತಿವೆ.‌ ನಗರದ ಯಾದುಲ್ಲಾ ಕಾಲೋನಿ ನಿವಾಸಿ 18 ವರ್ಷದ ಮುಝಾಮಿಲ್‌ನ ಶವ ಬಸವೇಶ್ವರ ಕಾಲೋನಿಯ ಚರಂಡಿಯಲ್ಲಿ ಪತ್ತೆಯಾಗಿದೆ ‌. ಕಳೆದ ರಾತ್ರಿ ಮನೆಗೆ ಹೋಗ್ತಿರೋವಾಗ ಮುಝಾಮಿಲ್ ನಾಪತ್ತೆಯಾಗಿದ್ದನು. ರಾತ್ರಿವಿಡಿ ಹುಡುಕಾಡಿದರು ಸಿಗದ ಹಿನ್ನಲೆಯಲ್ಲಿ ಪೋಷಕರು ಮಿಸ್ಸಿಂಗ್ ಕೆಸ್ ದಾಖಲಿಸಿದ್ದರು. ಇದೀಗ ಮುಝಾಮಿಲ್‌ನ ಶವ ಚರಂಡಿಯಲ್ಲಿ ಪತ್ತೆಯಾಗಿದೆ.. ಎಂಬಿ ನಗರ ಪೊಲೀಸ್ ಠಾಣೆಯಲ್ಲಿ ವ್ಯಾಪಿಯಲ್ಲಿ ಪ್ರಕರಣ ನಡೆದಿದ್ದೆ

Read More

ಭೀಮಾ ನದಿಯಲ್ಲಿ ಯುವಕ ನೀರು ಪಾಲು.

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಮಣ್ಣೂರು ಗ್ರಾಮದ ಭೀಮಾ ನದಿಯಲ್ಲಿ ಭಾಗೇಶ್ ರೇವಣಪ್ಪ (20) ವರ್ಷದ ಯುವಕ ಕಾಲು ಜಾರಿ ಭೀಮ ನದಿಯ ಪಾಲಾದ ಘಟನೆ ಸಂಭವಿಸಿದೆ, ಭಾಗೇಶ,ಭೀಮಾ ನದಿ ತಟದಲ್ಲಿ ಬಟ್ಟೆ ತೊಳೆಯುತ್ತಿದ್ದ ವೇಳೆ ಕಾಲು ಜಾರಿ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ, ಅಫಜಲಪುರ ಠಾಣೆ ಪೊಲೀಸರು ದೌಡಯಿಸಿ ಕಾರ್ಯಚರಣೆ ಮುಂದುವರೆಸಿದ್ದು, ಅಫಜಲಪುರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Read More

ಭ್ರಷ್ಟಾಚಾರ ರಹಿತ ಸಮಾಜ ಕಟ್ಟಲು ಯುವಕರ ಪಾತ್ರ ಮುಖ್ಯ : ಬಾಲರಾಜ್ ಗುತ್ತೇದಾರ್

ಕಲಬುರಗಿ: ಯುವಕರು ದೇಶವನ್ನು ಕಟ್ಟುವಲ್ಲಿ ಮುಖ್ಯ ವಾಹಿನಿಗೆ ಬರಬೇಕು, ಪ್ರಪಂಚದಲ್ಲಿ ಯಾವುದಾದರೂ ಪ್ರಮುಖ ಪರಿವರ್ತನೆಗಳಾಗಿವೆ ಎಂದರೆ ಯುವಕರ ತೊಡೆತಟ್ಟಿ ನಿಂತಾಗ ಮಾತ್ರ ಸಾಧ್ಯವಾಗಿವೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ  ಬಾಲರಾಜ್ ಗುತ್ತೇದಾರ್ ಅವರು ಯುವಕರಿಗೆ ಭ್ರಷ್ಟಾಚಾರ ರಹಿತ ಸಮಾಜ ಕಟ್ಟುವಂತೆ ಕರೆ ನೀಡಿದರು. ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ನಡೆದ ಜಿಲ್ಲಾ ಯುವ ಜನತಾದಳದ ಸಭೆಯಲ್ಲಿ ಮಾತನಾಡಿದ  ಈ ದೇಶದ ಭವಿಷ್ಯ ರೂಪಿಸಿವಲ್ಲಿ  ಯುವಕರ  ಪಾತ್ರ ಪ್ರಮುಖ ಎಂದು ಹೇಳಿದರು. ಇದೆ ಸಂದರ್ಭದಲ್ಲಿ ರಾಜ್ಯ ವಕ್ತಾರ ದೇವೇಗೌಡ…

Read More

ಶ್ರೀ ಸಿದ್ಧಬಸವೇಶ್ವರ ಪರ್ವ ಸಂಭ್ರಮದಿಂದ ಜರುಗಿತು.

ಜೀವರ್ಗಿ  : ತಾಲೂಕಿನ ಕೋಳಕೂರ ಗ್ರಾಮದ ಆರಾಧ್ಯ ದೈವ ಘಾಣದಕಲ್ಲ ಶ್ರೀ ಸಿದ್ಧಬಸವೇಶ್ವರರ ಪರ್ವ ಕಾರ್ಯಕ್ರಮ ಗುರುವಾರ ವೈಭವದಿಂದ ಜರುಗಿತು. ಪರ್ವ ನಿಮಿತ್ತ ಕೋಳಕೂರ ಗ್ರಾಮದ ಶ್ರೀ ಸಿದ್ಧಬಸವೇಶ್ವರ ದೇವಸ್ಥಾನ ಫಾಣದಕಲ್ಲ ಸಿದ್ದಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಲಂಕಾರ, ರುದ್ರಾಭಿಷೇಕ ನಡೆಯಿತು. ಈ ಭಾಗದ ವಿಷೇಶ ಭಜ್ಜಿ ಪಲ್ಯ, ರೊಟ್ಟಿ ಸವಿಯಲು ಕೂಳಕೂರ ಗ್ರಾಮ ಸೇರಿದಂತೆ ಜೇವರ್ಗಿ ಹಾಗೂ ಸುತ್ತಮುತಲಿನ ಗ್ರಾಮದ ಭಕರು ಆಗಿಮಿಸಿದರು . ಉತ್ಸವದಲ್ಲಿ ಸರಿ ಸುಮಾರು ೨೦ ಕ್ವಿಂಟಲ್ ಜೋಳದ ರೊಟ್ಟಿ ೨೦…

Read More

ಎಲ್ಹೇರಿ ಮತ್ತು ಚಿನ್ನಕಾರ ಗ್ರಾಮ ಪಂಚಾಯಿತಿಗೆ ಸಿಇಒ ಭೇಟಿ 

ಗುರುಮಠಕಲ್: ತಾಲೂಕಿನ ಏಲೇರಿ ಮತ್ತು ಚಿನ್ನಕಾರ ಗ್ರಾಮ ಪಂಚಾಯಿತಿಗೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಓರಾಡಿಯಾ ಮತ್ತು ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕ ಸಿ ಬಿ ದೇವರಮನಿ ಭೇಟಿ ನೀಡಿದರು. ಎಲ್ಹೇರಿ ಗ್ರಾಮದಲ್ಲಿ ಸಂಚರಿಸಿ ಇಂಗು ಗುಂಡಿ ಕಾಮಗಾರಿಗಳು, ಶೌಚಾಲಯ, ಜೆಜೆಎಮ್ ಕಾಮಗಾರಿ, ಅಂಗನವಾಡಿ ಕೇಂದ್ರ ವೀಕ್ಷಿಸಿದರು. ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲು ಪಿಡಿಒ ಅವರಿಗೆ ಸೂಚಿಸಿದರು. ನಂತರ 12ನೇ ಶತಮಾನದ ಪುರಾತನ ಎಲೆಕೇತೇಶ್ವರ ದೇವಾಲಯ ವೀಕ್ಷಿಸಿದರು.  ಚಿನ್ನಕಾರ ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ಸರ್ಕಾರಿ ಹಿರಿಯ…

Read More

ಕಂದಕೂರನಲ್ಲಿ ಸ್ವಸ್ಥನಾರಿ ಸಶಕ್ತ ಪರಿವಾರ ಅಭಿಯಾನ

ಗುರುಮಠಕಲ್: ಭಾರತ ಸಕಾ೯ರದ ಬಹುಮುಖ್ಯವಾದ ಮತ್ತು ವಿಶೇಷವಾದ ಮಹಿಳೆಯರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿರವರು ಹೇಳಿದರು. ಪ್ರಾಥಮಿಕ ಆರೋಗ್ಯ ಕೇಂದ್ರ ಕಂದಕೂರ ನಲ್ಲಿ ಹಮ್ಮಿಕೊಂಡಿರುವ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನದ ಉದ್ಘಾಟನೆ ಕರ‍್ಯಕ್ರಮ ಅಂಗವಾಗಿ ಮಾತನಾಡಿದ ಶ್ರೀಮತಿ ಶಂಕರಮ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷರು ಈ ಅಭಿಯಾನವು ಮಹಿಳಾ ಸಂಕುಲನಕ್ಕೆ ವರದಾನ ಆಗಿದೆ ಎಂದು ಸಾವ೯ಜನಿಕರು ಮಹಿಳೆಯರು ಇದರ ಸದುಪಯೋಗ ಪಡೆಯಬೇಕು ಎಂದು…

Read More

ಹಿಂದೂಗಳ ರಕ್ಷಣೆಗೆ ಶಿವಸೇನಾ ಸದಾ ಸಿದ್ದ : ಆಂದೋಲ ಶ್ರೀ

ಜೇವರ್ಗಿ  : ದೇಶದಲ್ಲಿ ಹಿಂದೂಗಳ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಇದ್ದರೆ ರಾಜ್ಯದಲ್ಲಿ ಹಿಂದೂಗಳ ರಕ್ಷಣೆಗೆ ಶಿವಸೇನಾ ಇದೆ ಎಂದು ಶಿವಸೇನಾ ರಾಜ್ಯಧ್ಯಕ್ಷ ಸಿದ್ಧಲಿಂಗ ಸ್ವಾಮಿಜಿ ಹೇಳಿದರು. ಪಟ್ಟಣದ ಬಸವೇಶ್ವರ ವೃತದಲ್ಲಿ ಶಿವಸೇನಾ ಹಿಂದೂ ಮಹಾ ಗಣಪತಿಯ ೨೨ ನೇ ದಿನದ ವಿಸರ್ಜನ ಹಾಗೂ ಶೋಭಾಯಾತ್ರೆಯ ವೇಧಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಅಂಬೇಡ್ಕರ್ ಅವರ ಸಂವಿಧಾನದ ಮೇಲೆ ಕಾನೂನು ನಡೆಯುತ್ತದೆ ಹೊರತು ಕಾಂಗ್ರೆಸ್ ನಾಯಕರ ಕಾನೂನು ಮೇಲೆ ಅಲ್ಲ. ಹಿಂದೂಗಳ ವಿರೋಧಿಯಾಗಿ ಕಾಂಗ್ರೆಸ್ ಸರಕಾರ ನಡೆಯುತ್ತಿದೆ. ಹಿಂದೂಗಳ…

Read More

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸೆ. ೨೨ ರಿಂದ ಅ. ೭.ರ ವರೆಗೆ

ಕಲಬುರಗಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ೨೦೨೫ನ್ನು ಬಾಗಬಾನ ಸಮಾಜ ವತಿಯಿಂದ ಸೆ. ೨೨ ರಿಂದ ಅ. ೭.ರ ವರೆಗೆ ನಡೆಯಲ್ಲಿದೆ ಎಂದು ಕರ್ನಾಟಕ ರಾಜ್ಯ ವಾಗಬಾನ ಸಮಾಜ ಮತ್ತು ಕಲಬುರಗಿ ಜಿಲ್ಲಾ ಬಾಗಬಾನ ಸಮಾಜ ಅಧ್ಯಕ್ಷರಾದ ಇಲಿಯಾಸ್ ಸೇಠ ಬಾಗಬಾನ ಹೇಳಿದರು. ಬಾಗಬಾನ್ ಸಮಾಜ ಕೂಡ ಹಿಂದುಳಿದ ವರ್ಗವಾಗಿದ್ದು, ಇಡಿ ರಾಜ್ಯದಲ್ಲಿ ಬಾಗಬಾನ ಸಮಾಜದ ಎಲ್ಲಾ ಬಂಧುಗಳು ಸದರಿ ಸಮೀಕ್ಷೆಯಲ್ಲಿ ಸಕ್ರೀಯವಾಗಿ ಭಾಗವಹಿಸಿ ತಮ್ಮ ತಮ್ಮ ಜಿಲ್ಲೆಯಲ್ಲಿ, ತಾಲೂಕುಗಳಲ್ಲಿ…

Read More
error: Content is protected !!