gulbargametro

ಹಾನಿಗೊಳಗಾದ ಮನೆಗಳ ಸರ್ವೆ ನಡೆಸಿ ತಕ್ಷಣ ವರದಿ ಸಲ್ಲಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಸೂಚನೆ

ಕಲಬುರಗಿ : ಮಳೆ ಹಾಗೂ ಪ್ರವಾಹ ಪೀಡಿತ ಚಿತ್ತಾಪುರ ತಾಲೂಕಿನ ಹಳೆ ಹೆಬ್ಬಾಳ ಗ್ರಾಮಕ್ಕೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಈ ಸಂದರ್ಭದಲ್ಲಿ ಅವರು ಮಳೆಯಿಂದ ಬಿದ್ದ ಮನೆಯನ್ನು ಪರಿಶೀಲಿಸಿ ಹಾನಿಗೊಳಗಾದ ಮನೆಗಳ ಸರ್ವೆ ನಡೆಸಿ ತಕ್ಷಣ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹಳೆ ಹೆಬ್ಬಾಳ ಗ್ರಾಮವನ್ನು ಸ್ಥಳಾಂತರಿಸುವ ಬಗ್ಗೆ ಗ್ರಾಮಸ್ಥರು ಸಚಿವರ ಮುಂದೆ ಬೇಡಿಕೆ ಇರಿಸಿದರು. ಗ್ರಾಮಸ್ಥರಿಗೆ ಸ್ಪಂದಿಸಿದ ಸಚಿವರು…

Read More

ಮಹಿಳೆಯರು ಕಾನೂನು ತಿಳಿದುಕೊಳ್ಳುವುದು ಅಗತ್ಯ: ನ್ಯಾ:ಫಕೀರವ್ವ ಕೆಳಗೇರಿ

ಸುರಪುರ:ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ದೇಶದಲ್ಲಿ ಕಾನೂನು ಜಾರಿಯಲ್ಲಿವೆ, ಮಹಿಳೆಯರು ಕಾನೂನಿನ ಅರಿವು ಪಡೆದು ಕೊಳ್ಳುವುದು ಅಗತ್ಯವಿದೆ ಎಂದು ಅಧ್ಯಕ್ಷರು ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಸುರಪುರ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪಕಿರವ್ವ ಕೆಳಗೇರಿ ಅವರು ಹೇಳಿದರು. ರಂಗಂಪೇಟಿಯ ಕನ್ನಡ ಸಾಹಿತ್ಯ ಸಂಘದ 83ನೇ ವರ್ಷದ ನಾಡಹಬ್ಬ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ದೇಶದಲ್ಲಿ ಮಗು ಹುಟ್ಟಿನಿಂದ ಹಿಡಿದು ಸಾಯುವವರೆಗೂ ಎಲ್ಲದಕ್ಕೂ ಕಾನೂನುಗಳಿದ್ದು ಕಾನೂನಿನ ರಕ್ಷಣೆ ಎಲ್ಲರು ಪಡೆಯುವಂತೆ ತಿಳಿಸಿದರು.ಅಲ್ಲದೆ ಮಹಿಳಾ ಆಸ್ತಿ ಹಕ್ಕು ಮತ್ತು…

Read More

ಹೆಬ್ಬಾಳ ಆರೋಗ್ಯ ಕೇಂದ್ರದಲ್ಲಿ ಪ್ರಪ್ರಥಮ ಶಸ್ತ್ರಚಿಕಿತ್ಸೆ ಯಶಸ್ವಿ

ಕಲಬುರಗಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರಣಬಸಪ್ಪಾ ಕ್ಯಾತನಾಳ ಹಾಗೂ ಮಾನ್ಯ ಆರ್‌ಸಿಹೆಚ್‌ಓ ಕಲಬುರಗಿ, ಮಾನ್ಯ ಟಿಹೆಚ್‌ಓ ಚಿತ್ತಾಪೂರ ರವರ ಮಾರ್ಗದರ್ಶನದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಹೆಬ್ಬಾಳ ತಾ||ಚಿತ್ತಾಪೂರ ಜಿ||ಕಲಬುರಗಿ ಆಸ್ಪತ್ರೆಯಲ್ಲಿ ಪ್ರಪ್ರಥಮವಾಗಿ ಸಿಜರಿಯನ್ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದ್ದು, ಶಸ್ತ್ರಚಿಕಿತ್ಸೆ ಯಶಸ್ವಿಗೊಂಡಿದ್ದು, ೩.೧ ಕೆ.ಜಿ ತೂಕದ ಹೆಣ್ಣು ಮಗು ಜನಿಸಿದ್ದು, ತಾಯಿ ಮತ್ತು ಮಗು ಸ್ವಸ್ಥವಾಗಿರುತ್ತಾರೆ. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ.ಮೋಹ್ಮದ ಇರ್ಫಾನ ಇನಾಮದಾರ ರವರು ಆಸ್ಪತ್ರೆಯ ಶಸ್ತ್ರಚಿಕಿತ್ಸಾ ತಂಡದ ಡಾ. ನಂದಿನಿ ಪ್ರಸೂತಿ…

Read More

ಹಿಂಗುಲಾಂಬಿಕದೇವಿ ದೇವಸ್ಥಾನದಲ್ಲಿ ವಿವಿಧ ಕಾರ್ಯಕ್ರಮ : ರಂಗದಾಳ

ಕಲಬುರಗಿ: ನವರಾತ್ರಿ ಹಬ್ಬದ ನಿಮಿತ್ಯವಾಗಿ ಭಾವಸಾರ್ ಕ್ಷತ್ರಿಯ ಸಮಾಜ ವತಿಯಿಂದ ನಗರದ ಹಿಂಗುಲಾಂಬಿಕದೇವಿ ದೇವಸ್ಥಾನದಲ್ಲಿ ವಿವಿಧ ಕಾರ್ಯಕ್ರಮಗಳು ಆಯೋಜಿಸಲಾಗಿದೆ ಎಂದು ಭಾವಸಾರ ಕ್ಷತ್ರಿಯ ಸಮಾಜದ ಜಿಲ್ಲಾ ಅಧ್ಯಕ್ಷರಾದ ಲಕ್ಷ್ಮೀಕಾಂತ್ ರಂಗದಾಳ ತಿಳಿಸಿದ್ದಾರೆ. ದಿನಾಂಕ ೨೫-೯-೨೦೨೫ ರಿಂದ ೩೦-೦೯-೨೦೨೫ ರವರೆಗೆ ಪ್ರತಿದಿನ ಬೆಳಿಗ್ಗೆ ೯ ಗಂಟೆಗೆ ಮತ್ತು ರಾತ್ರಿ ೮:೩೦ ಗಂಟೆಗೆ ದೇವಿ ಆರತಿ, ಅದೇರೀತಿಯಾಗಿ ಪ್ರತಿದಿನ ಸಾಯಂಕಾಲ ದಾಂಡಿಯಾ ನೃತ್ಯ ಸೇರಿದಂತೆ ವಿವಿಧ ದಾರ್ಮಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದ್ದು, ಕಲಬುರಗಿ ಮಹಾ ಜನತೆ ಆಗಮಿಸಿ ದೇವಿಯ ಆಶೀರ್ವಾದ ಪಡೆದುಕೊಂಡು,…

Read More

ಇನ್ನರ್ ವ್ಹಿಲ್ ಗುಲಬರ್ಗಾ ಸನ್‌ಸಿಟಿ ವತಿಯಿಂದ ‘ದೀಲ್ ಸೇ ದಾಂಡಿಯಾ’ ಗರಭಾ (ದಾಂಡಿಯಾ) ಕಾರ್ಯಕ್ರಮ

ಕಲಬುರಗಿ : ನಗರದ ಬಂಜಾರಾ ಭವನದಲ್ಲಿ ಇನ್ನರ್ ವ್ಹಿಲ್ ಗುಲಬರ್ಗಾ ಸನ್‌ಸಿಟಿ ವತಿಯಿಂದ ‘ದೀಲ್ ಸೇ ದಾಂಡಿಯಾ’ ಗರಭಾ (ದಾಂಡಿಯಾ) ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಇನ್ನರ್ ವ್ಹಿಲ್ ಗುಲಬರ್ಗಾ ಸನ್‌ಸಿಟಿ ವತಿಯಿಂದ ‘ದೀಲ್ ಸೇ ದಾಂಡಿಯಾ’ ಗರಭಾ (ದಾಂಡಿಯಾ) ಕಾರ್ಯಕ್ರಮವನ್ನು ಸುಮಾರು ೧೨ ವರ್ಷಗಳಿಂದ ಈ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಾ ಬಂದಿದ್ದಾರೆ. ಈ ಕಾರ್ಯಕ್ರಮದ ಮುಖಾಂತರ ದಾನಿಗಳು ಮತ್ತು ದಾಂಡಿಯಾ ಟಿಕೇಟಿನ ಹಣವನ್ನು ಪಡೆದು ಕಡು-ಬಡವರಿಗೆ ವೃದ್ಧಾಶ್ರಮ, ಅಂಧ ಮಕ್ಕಳಿಗೆ…

Read More

ಪ್ರಸನ್ನ ವೆಂಕಟೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಪೂಜೆ

ಸುರಪುರ: ಪ್ರತಿ ವರ್ಷದಂತೆ ಈ ವರ್ಷವೂ ಸುರಪುರ ನಗರದ ಐತಿಹಾಸಿಕ ಪ್ರಸನ್ನ ವೆಂಕಟೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ಅಂಗವಾಗಿ 9 ದಿನಗಳ ಕಾಲ ನಿರಂತರ ಪೂಜೆ ಪ್ರಸಾದ ಭಜನೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಶುಕ್ರವಾರ ಬೆಳಗ್ಗೆ ಪ್ರಸನ್ನ ವೆಂಕಟೇಶ್ವರ ದೇವರಿಗೆ ದೇವಸ್ಥಾನದ ಅರ್ಚಕರಾದ ಕೃಷ್ಣಚಾರ್ಯ ದೇವರು ಮತ್ತು ಭೀಮಶೇನಾಚಾರ್ಯ ದೇವರು ಇವರುಗಳ ನೇತೃತ್ವದಲ್ಲಿ ವಿಶೇಷ ಪೂಜಾ ಅಲಂಕಾರ ಯ,ಅಭಿಷೇಕ ತೀರ್ಥ ಪ್ರಸಾದ ವಿತರಣೆ ಮತ್ತು ಭಜನೆ ಕಾರ್ಯಕ್ರಮ ನಡೆಸಲಾಗಿದೆ. ಇಡೀ ದಿನ ಪ್ರಸಾದ ವಿತರಣೆ ಕಾರ್ಯಕ್ರಮದ ಅಂಗವಾಗಿ ಸುರಪುರ ನಗರದಾದ್ಯಂತ…

Read More

ಜಾತಿ ಕಾಲಂ ನಲ್ಲಿ ಕುರುಬ ಎಂದು ಬರೆಯಿಸಿ

ಚಿತ್ತಾಪುರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೊಗದ ವತಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಡಿ ಪ್ರಾರಂಭವಾಗಿರುವ ಜಾತಿ ಗಣತಿಯ ಕಾಲಂನಲ್ಲಿ ಕುರುಬ ಎಂಬುದಾಗಿ ಬರೆಯಿಸಿ ಎಂದು ಕುರುಬ ಸಮಾಜದ ತಾಲೂಕು ಅಧ್ಯಕ್ಷ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪೂಜಾರಿ ಮನವಿ ಮಾಡಿದ್ದಾರೆ. ಕಾಲಂ ನಂ ೮ ರಲ್ಲಿ ಧರ್ಮ ಹಿಂದೂ ಎಂದು ಕಾಲಂ ನಂ ೯ ರಲ್ಲಿ ಜಾತಿ ಕುರುಬ ಹಾಗೂ ಕಾಲಂ ನಂ ೧೦ರಲ್ಲಿ ಉಪಜಾತಿ ಇಲ್ಲಾ ಹಾಗೂ ೧೧ ನೇ ಕಾಲಂ ನಲ್ಲಿ ಪರ್ಯಾಯ…

Read More

ಬಿಜೆಪಿ ಪಕ್ಷದ ವತಿಯಿಂದ ಸೇವಾ ಪಾಕ್ಷಿಕ ಅಡಿಯಲ್ಲಿ ರಕ್ತದಾನ, ಆರೊಗ್ಯ ತಪಾಸಣೆ ಶಿಬಿರ

ಚಿತ್ತಾಪುರ : ಚಿತ್ತಾಪುರ ಬಿಜೆಪಿ ಮಂಡಲದ ವತಿಯಿಂದ ಪಂಡಿತ್ ದೀನ್ ದಯಾಳ ಉಪಾಧ್ಯಾಯ ಅವರ ೧೧೦ ನೇ ಜಯಂತಿ ಅಂಗವಾಗಿ ಸೇವಾ ಪಾಕ್ಷಿಕ ಕಾರ್ಯಕ್ರಮದ ಭಾಗವಾಗಿ ಪಟ್ಟಣದ ಅಕ್ಕಮಹಾದೇವಿ ಮಂದಿರದ ಅವರಣದಲ್ಲಿ ರಕ್ತದಾನ ಮತ್ತು ಆರೊಗ್ಯ ತಪಾಸಣಾ ಶಿಬಿರನ್ನು ಯಶಸ್ವಿಯಾಗಿ ಆಯೊಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸೇವಾ ಪಾಕ್ಷಿಕ ಸಂಚಾಲಕ ಶರಣಪ್ಪ ತಳವಾರ ಅವರು ಸೇವಾ ಪಾಕ್ಷಿಕ ಯೊಜನೆಯಡಿ ನಿರಂತರವಾಗಿ ನೂರಾರು ಕಾರ್ಯಕ್ರಮಗಳು ನಡೆಯುತ್ತವೆ ಪಕ್ಷದ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದೆ ಬಂದಿರುವದು ಶ್ಲಾಘನೀಯ…

Read More

ಚಿತ್ತಾಪುರ | ೫೦೦ ಆಹಾರದ ಕಿಟ್‌ ವಿತರಣೆ

ಕಲಬುರಗಿ ; ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಧಾರಕಾರ ಮಳೆಯಿಂದ ಮತ್ತು ಬೆಣ್ಣೆತೊರೆ ಜಲಾಶದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆದಿಂದ ನದಿಯ ಪಾತ್ರದ ಅನೇಕ ಗ್ರಾಮಗಳಲ್ಲಿ ಪ್ರವಾಹದ ಸ್ಥಿತಿ ಉಂಟಾಗಿದೆ. ನೂರಾರು ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ. ಇನ್ನೂ ಕೆಲವಡೆ ಮನೆಗಳಲ್ಲಿ ಮಳೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ವಸ್ತುಗಳು ನಷ್ಟವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇಂದು ಚಿತ್ತಾಪುರ ತಾಲೂಕಿನ ಗುಂಡಗುರ್ತಿ, ಬಡವಡಗಿ,  ಚಿತ್ತಾಪುರ ಪಟ್ಟಣದ ಬಾರಪೇಟ, ಸೇರಿದಂತೆ ವಿವಿಧಡೆ ಕಲಬುರಗಿ ಲೋಕಸಭಾ ಸದಸ್ಯ…

Read More

ಸೆ.೨೮.ರಂದು ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ

ಕಲಬುರಗಿ : ಶಿಕ್ಷಕರ ದಿನಾಚರಣೆಯ ಅಂಗವಾಗಿ ಡಾ.ರಾಜಕುಮಾರ ಸಾಹಿತ್ಯಿಕ ಮತ್ತು ಸಾಂಸ್ಕ್ರತಿಕ ಕಲಾ ಸಂಘ (ರಿ) ರಾಜಾಪೂರ ಕಲಬುರಗಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದಿನಾಂಕ ೨೮-೦೯-೨೦೨೫ ರವಿವಾರ ದಂದು ಕಲಬುರಗಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪಕ್ಕದಲ್ಲಿರುವ ರಂಗಾಯಣ ಸಭಾ ಭವನದಲ್ಲಿ ಶಿಕ್ಷಕರ ದಿನಾಚರಣೆ,ನಾಡಿನ ವಿವಿಧ ಜಿಲ್ಲೆಗಳ ಸಾಧಕ ಶಿಕ್ಷಕರಿಗೆ ರಾಜ್ಯ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ,ವಿವಿಧ ಕ್ಷೇತ್ರದ ಸಾಧಕರಿಗೆ ಸೇವಾರತ್ನ ಪ್ರಶಸ್ತಿ ಪ್ರದಾನ ವಿಶೇಷ ಸನ್ಮಾನ ಹಾಗೂ ಹಾಸ್ಯ, ಸಂಗೀತ, ಮತ್ತು…

Read More
error: Content is protected !!