ಕಲಬುರಗಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ೨೦೨೫ನ್ನು ಬಾಗಬಾನ ಸಮಾಜ ವತಿಯಿಂದ ಸೆ. ೨೨ ರಿಂದ ಅ. ೭.ರ ವರೆಗೆ ನಡೆಯಲ್ಲಿದೆ ಎಂದು ಕರ್ನಾಟಕ ರಾಜ್ಯ ವಾಗಬಾನ ಸಮಾಜ ಮತ್ತು ಕಲಬುರಗಿ ಜಿಲ್ಲಾ ಬಾಗಬಾನ ಸಮಾಜ ಅಧ್ಯಕ್ಷರಾದ ಇಲಿಯಾಸ್ ಸೇಠ ಬಾಗಬಾನ ಹೇಳಿದರು.
ಬಾಗಬಾನ್ ಸಮಾಜ ಕೂಡ ಹಿಂದುಳಿದ ವರ್ಗವಾಗಿದ್ದು, ಇಡಿ ರಾಜ್ಯದಲ್ಲಿ ಬಾಗಬಾನ ಸಮಾಜದ ಎಲ್ಲಾ ಬಂಧುಗಳು ಸದರಿ ಸಮೀಕ್ಷೆಯಲ್ಲಿ ಸಕ್ರೀಯವಾಗಿ ಭಾಗವಹಿಸಿ ತಮ್ಮ ತಮ್ಮ ಜಿಲ್ಲೆಯಲ್ಲಿ, ತಾಲೂಕುಗಳಲ್ಲಿ ಮತ್ತು ಹೂಬಳಿಗಳಲ್ಲಿ ಎಲ್ಲಾ ಬಾಗಬಾನ ಸಮಾಜದ ಮನೆಗಳ ಸದಸ್ಯರ ಮಾಹಿತಿ ಆಯೋಗದ ಯಾಪ್ (ಂಠಿಠಿ) ಮೂಲಕ ಸರಕಾರಕ್ಕೆ ಒದಗಿಸುವುದು ಬಹಳ ಅವಶ್ಯವಾಗಿರುತ್ತದೆ. ಪ್ರತಿ ಮನೆಗಳಲ್ಲಿರುವ ೬ ವರ್ಷ ಮೇಲ್ಪಟ್ಟು ವಯಸ್ಸು ಇರುವ ಸದಸ್ಯರ ಮಾಹಿತಿ ಒದಗಿಸಬೇಕಾಗಿದೆ, ಆಧಾರ ಕಾರ್ಡ, ರೇಷನ್ ಕಾರ್ಡ, ಚುನಾವಣಾ ಗುರುತಿನ ಚೀಟಿಗಳ ಸಂಖ್ಯೆಗಳು ಒದಗಿಸುವುದು, ಮತ್ತು ಇತರೆ ಮಾಹಿತಿಗಳನ್ನು ಸಲ್ಲಿಸುವುದು.
ಹಿಂದುಳಿದ ವರ್ಗಗಳ ಆಯೋಗ ಒಟ್ಟಾರೆ ೬೦ ಪ್ರಶ್ನೆಗಳನ್ನು ಪ್ರತಿ ಮನೆಯವರಿಗೆ ಕೇಳಲಿದ್ದು ಇವು ಎಲ್ಲಾ ಮಾಹಿತಿ ಒದಗಿಸುವ ಜವಾಬ್ದಾರಿ ನಮ್ಮ ಕರ್ತವ್ಯ ಎಂದು ಪರಿಗಣಿಸಿ ಪ್ರತಿ ಮನೆಯ ಮಾಹಿತಿ ಆಯೋಗಕ್ಕೆ ಸಲ್ಲಿಸಲು ಕೋರುತ್ತೇನೆ.
ಸದರಿ ಸಮೀಕ್ಷೆಯ ಪ್ರಶ್ನಾವಳಿಯಲ್ಲಿ ಕೆಲವು ಬಹಳ ಮುಖ್ಯವಾಗಿದ್ದು ಅದರಲ್ಲಿ ಪ್ರಸಂಖ್ಯೆ (೮) ರಲ್ಲಿ ಧರ್ಮ ಅಂದರೆ ಇಸ್ಲಾಂ ಎಂದು ನಮೂದಿಸುವುದು, ಪ್ರ. ಸಂಖ್ಯೆ (೯) ರಲ್ಲಿ ಜಾತಿ ಅಂದರೆ ಮುಸ್ಲಿಮ ಎಂದು ನಮೂದಿಸುವುದು, ಪ್ರ. ಸಂಖ್ಯೆ (೧೦) ರಲ್ಲಿ ಉಪ ಜಾತಿ ಅಂದರೆ ಬಾಬಗಾನ್ (ಃಂಉBAಓ) (೦೦೮೯) ಎಂದು ನಮೂದಿಸುವುದು, ಮತ್ತು ಪ್ರ. ಸಂಖ್ಯೆ: (೩೦) ರಲ್ಲಿ ಕುಲ ಕಸಬು (ವ್ಯಾಪಾರ) ಅಂದರೆ ಹಣ್ಣು-ತರಕಾರಿ ಮಾರಾಟಗಾರರು (೨೫) ಎಂದು ನಮೂದಿಸುವುದು.
ಉಳಿದ ಮಾಹಿತಿಗಳನ್ನು ಸರಿಯಾಗಿ ಅಧ್ಯಯನ ಮಾಡಿ ಒದಗಿಸುವುದು ಮತ್ತು ತಮ್ಮ ಭಾಗದಲ್ಲಿ ಸಮಾಜದ ಎಲ್ಲಾ ಸದಸ್ಯರುಗಳಿಗೆ ಸದರಿ ವಿಷಯ ತಿಳಿಸಿ ಅವರಿಗೆ ಸಹಾಯ ಮಾಡಿ ಸದರಿ ಸಮೀಕ್ಷೆ ಯಶಸ್ವಿಗೊಳಿಸಲು ಇಲಿಯಾಸ್ ಸೇಟ ಭಾಗಬಾನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


