ನಿಖರವಾದ ಮಾಹಿತಿ ಇದ್ದಾಗ ಮಾತ್ರ ಸರ್ಕಾರಕ್ಕೆ ಸವಲತ್ತುಗಳು ಮತ್ತು ಮೀಸಲಾತಿ ನೀಡಲು ಅನುಕೂಲ : ತಿಪ್ಪಣ್ಣಪ್ಪ ಕಮಕನೂರ

ಜಿಲ್ಲಾ ಕೋಲಿ-ಕಬ್ಬಲಿಗ ಸಮುದಾಯಗಳ ಸಮನ್ವಯ ಸಮಿತಿ ಸುದ್ದಿಗೋಷ್ಠಿ

ಕಲಬುರಗಿ : ಕರ್ನಾಟಕ ಸರ್ಕಾರದಿಂದ ರಾಜ್ಯದಲ್ಲಿ 2025ರ ಸೆಪ್ಟೆಂಬರ್-22 ರಿಂದ ಪ್ರಾರಂಭವಾಗುವ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯಲ್ಲಿ ಸಮಾಜದ ಬಂಧುಗಳು ಯಾವ ಜಾತಿ ಬರೆಸಬೇಕೆಂದು ಸಮಾಜದ ಮುಖಂಡರು ಚರ್ಚಿಸಿ ಈ ರೀತಿ ನಿರ್ಣಯ ಮಾಡಲಾಗಿದ್ದು,ಮೂಲ ಜಾತಿ ಕಾಲಂ 09 ರಲ್ಲಿ ಕಬ್ಬಲಿಗ ಸಂಕೇತ ಸಂಖ್ಯೆ A-0588 ಎಂದು ಬರೆಸಬೇಕು.

ಅದರಂತೆ ಉಪಜಾತಿ ಕಾಲಂ 10 ರಲ್ಲಿ ಕೋಲಿ ಸಂಕೇತ ಸಂಖ್ಯೆ: A-0712
ಪರ್ಯಾಯ ಪದ ಜಾತಿ ಕಾಲಂ 11 ರಲ್ಲಿ ಟೋಕರೆ ಕೋಲಿ ಸಂಕೇತ ಸಂಖ್ಯೆ: C-22.2 ಎಂದು ಬರೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು

ಅವರು ನಗರದ ಪತ್ರಿಕಾ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ನಾವು, ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದೆ. ಆದ್ದರಿಂದ ಮುಂಬರುವ ಸಮೀಕ್ಷೆಯಲ್ಲಿ ನಮ್ಮ ಎಲ್ಲಾ ವಾಸ್ತವ ಸ್ಥಿತಿಗತಿಗಳು, ಅಂಕಿಅಂಶಗಳ ಮತ್ತು ನಿಖರವಾದ ಮಾಹಿತಿ ಇದ್ದಾಗ ಮಾತ್ರ ಸರ್ಕಾರಕ್ಕೆ ಸವಲತ್ತುಗಳು ಮತ್ತು ಮೀಸಲಾತಿ ನೀಡಲು ಅನುಕೂಲವಾಗುತ್ತದೆ.

ಹೀಗಾಗಿ ಕರ್ನಾಟಕ ಮತ್ತು ಕನ್ನಡದಲ್ಲಿ ಬಳಸುವುದರಿಂದ ಮತ್ತು ಬುಡಕಟ್ಟು ಲಕ್ಷಣ ಹೊಂದಿರುವುದರಿಂದ ಮೂಲ ದಾಖಲೆಯಂತೆ ಕಬ್ಬಲಿಗ ಪದವನ್ನು ಮೂಲ ಜಾತಿಯ ಕಾಲಂದಲ್ಲಿ ಸಂಕೇತ ಸಂಖ್ಯೆ:4-0588 ನಮೂದಿಸಬೇಕು. ಅದರಂತೆ ಹಿಂದಿಯಲ್ಲಿ ನಮ್ಮ ಜಾತಿಯನ್ನು ಕೋಲಿ ಎಂದು ಕರೆಯುವುದರಿಂದ ಸಮೀಕ್ಷೆ ಉಪಜಾತಿ ಕಾಲಂ 10 ರಲ್ಲಿ ಸಂಕೇತ ಸಂಖ್ಯೆ: 4-0712 ಎಂದು ನಮೂದಿಸಬೇಕು, ಅದರಂತೆ ಇದೇ ಜಾತಿಯನ್ನು ಮರಾಠಿ ಭಾಷೆಯಲ್ಲಿ ಟೋಕರೆ ಕೋಲಿ ಎಂದು ಕರೆಯುವುದರಿಂದ ಸಮೀಕ್ಷೆಯಲ್ಲಿ ಪರ್ಯಾಯ ಪದದ ಕಾಲಂ 11 ರಲ್ಲಿ ಸಂಕೇತ ಸಂಖ್ಯೆ: C-22.2 ಎಂದು ನಮೂದಿಸಬೇಕೆಂದು ಜಿಲ್ಲೆಯ ಎಲ್ಲಾ ಸಮಾಜದ ಬುದ್ದಿಜೀವಿಗಳು, ಮುಖಂಡರು, ಜನಪ್ರತಿನಿಧಿಗಳು ಮತ್ತು ವಿವಿಧ ಸಂಘಟನೆಯ ಪದಾಧಿಕಾರಿಗಳು ಸಭೆ ಸೇರಿ ಸಮಾಜದ ಮುಂದಿನ ಭವಿಷ್ಯಕ್ಕಾಗಿ ನಿರ್ಣಯ ತೆಗೆದುಕೊಳ್ಳಲಾಗಿದೆ.

ಆದ್ದರಿಂದ ಸಮಾಜದ ಮುಖಂಡರು ಆಯಾ ತಾಲೂಕುಗಳಲ್ಲಿ ಜಾಗೃತಿಯನ್ನು ಮೂಡಿಸಬೇಕು, ಮತ್ತು ಸಮಾಜದ ಬಂಧುಗಳು ಎಲ್ಲರೂ ಒಂದೇ ರೀತಿಯಾದ ಮಾದರಿಯನ್ನು ಅನುಸರಿಸಿ ಸಮೀಕ್ಷೆಗೆ ಬಂದ ಅಧಿಕಾರಿಗಳ ಜೊತೆ ಸಹಕರಿಸಬೇಕೆಂದು ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಬಸವರಾಜ ಬೂದಿಹಾಳ,ಶಿವಶರಣಪ್ಪ ಕೋಬಾಳ್, ರಾಜಗೋಪಾಲ್ ರೆಡ್ಡಿ, ಹುಲಿಗೆಪ್ಪ ಕನಕಗಿರಿ, ಅಮೃತ ಡಿಗ್ಗಿ,ವಿಜಯಕುಮಾರ್ ಹದಗಲ್, ಪ್ರೇಮ ಕೋಲಿ ಶಾಂತಪ್ಪ ಕೂಡಿ, ಅವ್ವಣ್ಣ ಮ್ಯಾಕೇರಿ,ಬಸವರಾಜ ಸಪ್ಪಣಗೋಳ,ಶಿವಕುಮಾರ ನಾಟೀಕಾರ,ಲಕ್ಷ್ಮಣ ಅವಂಟಿ ಗುಂಡು ಐನಾಪುರ, ಸೇರಿದಂತೆ ಸೇರಿದಂತೆ ಇತರರು ಉಪಸ್ಥಿತಿದರು.

Leave a Reply

Your email address will not be published. Required fields are marked *

error: Content is protected !!