ಕಲಬುರಗಿ : ಪ್ರಜಾಸುದ್ದಿ ಕನ್ನಡ ದಿನಪತ್ರಿಕೆಯ 15 ನೇ ವಾರ್ಷಿಕೋತ್ಸವದ ಅಂಗವಾಗಿ ಕಲ್ಯಾಣ ಕರ್ನಾಟಕ ಪತ್ರಕರ್ತರ ಪ್ರಥಮ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಜಾಸುದ್ದಿ ಕನ್ನಡದಿನ ಪತ್ರಿಕೆಯ ಸಂಪಾದಕ ಶರಣಪ್ಪಬಸಪ್ಪ ಸುಗೂರು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅವರು ನಗರದ ಪತ್ರಿಕಾ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇದೇ ಸೆ. 20 ರಂದು ನಗರದ ಜಿಲ್ಲಾ ಪಂಚಾಯತ ಅವರಣದಲ್ಲಿರುವ ಪತ್ರಿಕಾ ಭವನದಲ್ಲಿ ಸಮ್ಮೇಳನವನ್ನು ಆಯೋಜಿಸಿದ್ದು, ಸಮ್ಮೇಳನಾಧಕ್ಷರಾಗಿ ಹಿರಿಯ ಪತ್ರಕರ್ತ, ಹಾಗೂ ಸಾಹಿತಿ ಡಾ. ಶಿವರಂಜನ್ ಸತ್ಯಂಪೇಟ, ಹಾಗೂ ಶಾಸಕ ಬಸವರಾಜ ಮತ್ತಿಮೂಡ ಅವರು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದಾರೆ.
ಅಂದು ಕಾರ್ಯಕ್ರಮದಲ್ಲಿ ಡಾ. ವಿಶ್ವನಾಥ ರೆಡ್ಡಿ ಅವರ ನೇತೃತ್ವದ ಶ್ರೀ ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆ, ಕಲಬುರಗಿ ವತಿಯಿಂದ
ಉಚಿತ ಕಣ್ಣಿನ ತಪಾಸಣೆ ಮತ್ತು ಔಷಧ ವಿತರಣಾ ಶಿಬಿರ ಸಹ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಾರಂಗ ಮಠ ಶ್ರೀಶೈಲಂ, ಸುಲಫಲ ಮಠದ ಶ್ರೀ ಜಗದ್ಗುರು ಡಾ| ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಹಾಗೂ ಕಡಗಂಚಿ ಮಠದ ಶ್ರೀ ಪಂಪಾಪತಿ ದೇವರು ವಹಿಸಲಿದ್ದಾರೆ ಉದ್ಘಾಟಕರಾಗಿ ಕಲಬುರಗಿ ಸಂಸದ ರಾಧಕೃಷ್ಣ ದೊಡ್ಡಮನಿ ಅವರು ಆಗಮಿಸಲಿದ್ದಾರೆ, ಸಮ್ಮೇಳನದಲ್ಲಿ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಸೇರಿದಂತೆ ಅನೇಕ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು. ,
ವಿಶೇಷ ಸನ್ಮಾನ
ಶಿವರಾಯ ದೊಡ್ಡಮನಿ, ಶಿವಲಿಂಗಪ್ಪ ದೊಡ್ಡಮನಿ, ದೇವಿಂದ್ರಪ್ಪ ಕಪನೂರ , ಹಣಮಂತ, ಅಜೀಜ್ ಉಲ್ಲಾ ಸರಮಸ್ತ್
ಡಾ. ಅವಿನಾಶ ದೇವನೂರ, ಶಿವರಾಜ ವಾಲಿ, ಮಲ್ಲಿಕಾರ್ಜು ವಿ. ನಾಯಕೋಡಿ ಪ್ರಕಾಶ ಪೂಜಾರಿ,ಸುರೇಶ ಶಿಂಧೆ, ಬೌದ್ಧಪ್ರಿಯ ನಾಗಸೇನ, ಮುಕ್ತರೋದ್ದಿನ್ , ಶಕ್ತಿಕಾಂತ ಭಾವಿದೊಡ್ಡಿ, ಚಿದಾನಂದ ರೋಲೆ, ಶರಣಬಸಪ್ಪಾ ಅಣವಾರಕರ್,ಲೋಹಿತ್ ಕಟ್ಟಿ, ರಮೇಶ ಭಟ್, ವೀರೇಂದ್ರ ಕೊಲ್ಲುರ
ವಾಸು ಚವ್ಹಾಣ, ಚಂದ್ರಶೇಖರ ಕೌಲಗಾ
ದೇವಿಂದ್ರಪ್ಪ ಅಂವಟಿ, ವಿಠಲ್ ಚಿಕಣಿ ನಾಗರಾಜ ಹೂವಿನಳ್ಳಿ, ಕಾಶಿನಾಥ ಗುತ್ತೇದಾರ ಅವರನ್ನು ಕಾರ್ಯಕ್ರಮದಲ್ಲಿ ವಿಶೇಷ ಸನ್ಮಾನಿಸಲಾಗುವುದು ಎಂದು ಅವರು ವಿವರಿಸಿದರು.


