ಕಲಬುರಗಿ: ಪ್ರತಿವರ್ಷದಂತೆ ಈ ವರ್ಷವೂ ಕೂಡ ವಿಜೃಂಭಣೆಯಿಂದ ಶ್ರೀ ವಿಶ್ವ ಕರ್ಮ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಧಿಕಾರಿ ಕಚೇರಿಯ ಶೀಷ್ಟಾಚಾರ ತಹಶೀಲ್ದಾರ್ ಪಂಪಯ್ಯ. ಅವರು ಅಧಿಕಾರಿಗಳಗೆ ಸೂಚನೆ ನೀಡಿದರು. ಇತ್ತೀಚಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶ್ರೀ ವಿಶ್ವಕರ್ಮ ಜಯಂತಿ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೆಪ್ಟಂಬರ್ ೧೭ ರಂದು ರಂಗಮಂದಿರದಲ್ಲಿ ಮದ್ಯಾಹ್ನ ೦೩ ಗಂಟೆಗೆ ನಡೆಯುವ ಕಾರ್ಯಕ್ರಮಕ್ಕೆ ಎಲ್ಲಾ ಸರಕಾರಿ ಅರೆಸರಕಾರಿ ಕಚೇರಿಗಳಲ್ಲಿ ಬೆಳಿಗ್ಗೆ ೯ ಗಂಟೆಗೆ ಆಚರಿಸಬೇಕು ಮತ್ತು ಸರಕಾರಿ ಶಾಲಾ ಕಾಲೇಜುಗಳಲ್ಲಿ ಹಾಗೂ ಅನುದಾನ ಶಾಲಾ ಕಾಲೇಜುಗಳಲ್ಲಿ ತಾಲ್ಲೂಕ ಮತ್ತು ಜಿಲ್ಲಾ ಪಂಚಾಯತಗಳಲ್ಲಿ ಕಡ್ಡಾಯವಾಗಿ ಜಯಂತಿಯನ್ನು ಆಚರಿಸಲು ತಿಳಿಸಿದರು.
ಭಾವಚಿತ್ರಕ್ಕೆ ಮಾಲಾರ್ಪಣೆ ಹೂದಾನಿಗಳಿಂದ ಅಲಂಕರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕುಡಿಯುವ ನೀರು ಹಾಗೂ ಸ್ವಚ್ಛತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ಜಗದೀಶ್ವರಿ ನಾಶಿ ಮಾತನಾಡಿ,ನಾಡಗೀತೆ ಸಂಗೀತ ಕಾರ್ಯಕ್ರಮ ಹಾಗೂ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಲಾಗುವುದು ಎಂದರು ಸಮಾಜದ ಮುಖಂಡರುಗಳಾದ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು. ಮೆರವಣಿಗೆಯ ಸಂದರ್ಭದಲ್ಲಿ ಸೂಕ್ತ ಪೋಲಿಸ್ ಬಂದೋಬಸ್ತ್ ಮಾಡಬೇಕೆಂದು ಮನವಿ ಮಾಡಬೇಕೆಂದರು.
ಈ ಕುರಿತು ಕಾರ್ಯಕ್ರಮದಲ್ಲಿ ಶ್ರೀ ವಿಶ್ವಕರ್ಮ ದಿನಾಚರಣೆ ಅಂಗವಾಗಿ ನುರಿತ ಉಪನ್ಯಾಸಕರನ್ನಾಗಿ ಶ್ರೀ ಗುಂಡಪ್ಪಾ ವಿಶ್ವಕರ್ಮ ಮರ್ತೂರ್ ಅವರನ್ನು ನೇಮಿಸಲಾಗಿದೆ ಮತ್ತು ಜಯಂತ್ಯೋತ್ಸವ ಸಮಿತಿ ಅಧ್ಯಕ್ಷರನ್ನಾಗಿ ಕಲಬುರಗಿ ಜೆ.ಕೆ ನಗರದ ವೀರಭದ್ರೇಶ್ವರ ಗದ್ದುಗೆಯ ಶ್ರೀ ವೀರಣ್ಣ ಮುತ್ಯಾ ವಿಶ್ವಕರ್ಮ ಅವರನ್ನು ನೇಮಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ಸಭೆಯಲ್ಲಿ ವಿಶ್ವ ಕರ್ಮ ಸಮಾಜದ ಮುಖಂಡರಾದ ಅಮೃತ ಹಳ್ಳಿ ,ಕಮಲಾಕರ್ ವಿಶ್ವಕರ್ಮ ,ಲೋಹಿತ್ ಕಲ್ಲೂರು ವಿಶ್ವಕರ್ಮ ,ಸುನೀಲ್ ವಿಶ್ವಕರ್ಮ ದಿಕ್ಸಂಗಿ,ಅಶೋಕ ಪೊದ್ದಾರ,ಶರಣು ಪಂಚಾಳ,ಗುರುದೇವ ವಿಶ್ವಕರ್ಮ, ಅಧಿಕಾರಿಗಳು ಇದ್ದರು.


