ಕಲಬುರಗಿ, -ಮುಂಬರುವ ದಸರಾ ಹಾಗೂ ದೀಪಾವಳಿ ಹಬ್ಬ-2025ರ ಸಂದರ್ಭದಲ್ಲಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಸೋಲಾಪುರ ವಿಭಾಗದಿಂದ ಕೇಂದ್ರ ರೈಲ್ವೆ ಇಲಾಖೆಯು ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ ಎಂದು ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ವಿಭಾಗದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದೌಂಡ್-ಕಲಬುರಗಿ ರೈಲು: ವಾರದಲ್ಲಿ 5 ದಿನಗಳು ಕಾಯ್ದಿರಿಸದ ವಿಶೇಷ (ರೈಲು ಸಂಖ್ಯೆ 01421) ಸೆಪ್ಟೆಂಬರ್ 26 ರಿಂದ ಡಿಸೆಂಬರ್ 1 ರವರೆಗೆ ಪ್ರತಿ ಸೋಮವಾರ, ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ಬೆಳಿಗ್ಗೆ 5 ಗಂಟೆಗೆ ದೌಂಡ್ ನಿಂದ ಹೊರಟು ಅದೇ ದಿನ ಬೆಳಿಗ್ಗೆ 11.20 ಗಂಟೆಗೆ ಕಲಬುರಗಿಗೆ ಆಗಮಿಸಲಿದೆ. ಅದೇ ರೀತಿ (ರೈಲು ಸಂಖ್ಯೆ 01422) ಸೆಪ್ಟೆಂಬರ್ 26 ರಿಂದ ಡಿಸೆಂಬರ್ 1 ರವರೆಗೆ ಪ್ರತಿ ಸೋಮವಾರ, ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ಕಲಬುರಗಿಯಿಂದ ಸಂಜೆ 16.10 ಗಂಟೆಗೆ ಹೊರಟು ಅದೇ ದಿನ ರಾತ್ರಿ 22.20 ಗಂಟೆಗೆ ದೌಂಡ್ಗೆ ತಲುಪಲಿದೆ. ಈ ರೈಲು ಭಿಗ್ವಾನ್, ಪರೆವಾಡಿ, ಜೆಯೂರ್, ಕೆಮ್, ಕುರ್ದುವಾಡಿ, ಮಾಧಾ, ಮೊಹೋಲ್, ಸೋಲಾಪುರ, ಟಿಕೇಕರ್ವಾಡಿ, ಹೋಟಗಿ, ಅಕ್ಕಲಕೋಟ ರಸ್ತೆ, ಬೊರೋತಿ, ದುಧನಿ ಮತ್ತು ಗಾಣಗಾಪುರಗಳಲ್ಲಿ ಮಾರ್ಗವಾಗಿ ಸಂಚರಿಸಲಿವೆ.
ದೌಂಡ್ – ಕಲಬುರಗಿ ಕಾಯ್ದಿರಿಸದ ವಾರದ ದ್ವಿ-ವಿಶೇಷ ರೈಲು: (ರೈಲು ಸಂಖ್ಯೆ 01425) ಈ ವಿಶೇಷ ರೈಲು ಸೆಪ್ಟೆಂಬರ್ 25 ರಿಂದ ನವೆಂಬರ್ 30 ರವರೆಗೆ ಪ್ರತಿ ಗುರುವಾರ ಮತ್ತು ಭಾನುವಾರ ದೌಂಡ್ದಿಂದ ಬೆಳಿಗ್ಗೆ 5 ಗಂಟೆಗೆ ಹೊರಟು ಅದೇ ದಿನ ಬೆಳಿಗ್ಗೆ 11.20 ಗಂಟೆಗೆ ಕಲಬುರಗಿಗೆ ಆಗಮಿಸಲಿದೆ. ಅದೇ ರೀತಿ (ರೈಲು ಸಂಖ್ಯೆ 01426) ಸೆಪ್ಟೆಂಬರ್ 25 ರಿಂದ ನವೆಂಬರ್ 30 ರವರೆಗೆ ಪ್ರತಿ ಗುರುವಾರ ಮತ್ತು ಭಾನುವಾರಗಳಂದು ಕಲಬುರಗಿಯಿಂದ ರಾತ್ರಿ 20.30 ಕ್ಕೆ ಹೊರಟು ಮರುದಿನ 02.30 ಕ್ಕೆ ದೌಂಡ್ ತಲುಪಲಿದೆ. ಈ ರೈಲು ಭಿಗ್ವಾನ್, ಪರೇವಾಡಿ, ಜೆಯೂರ್, ಕೆಮ್, ಕುರ್ದುವಾಡಿ, ಮಾಧಾ, ಮೊಹೋಲ್, ಸೋಲಾಪುರ, ಟಿಕೆಕರ್ವಾಡಿ, ಹೊಟ್ಗಿ, ಅಕ್ಕಲಕೋಟ ರಸ್ತೆ, ಬೊರೊಟಿ, ದುಧಾನಿ ಮತ್ತು ಗಾಣಗಾಪುರ ಮಾರ್ಗವಾಗಿ ನಿಲುಗಡೆಯಾಗಲಿದೆ.
ಲಾತೂರ್-ಹಡಪ್ಸರ್ ವಿಶೇಷ ರೈಲು: ರೈಲು ಸಂಖ್ಯೆ 01429 ವಿಶೇಷ ರೈಲುಗಳು ಪ್ರತಿ ಸೋಮವಾರ, ಮಂಗಳವಾರ, ಬುಧವಾರ ಮತ್ತು ಶುಕ್ರವಾರಗಳಂದು ಸೆಪ್ಟೆಂಬರ್ 26 ರಿಂದ ನವೆಂಬರ್ 28 ರವರೆಗೆ ಲಾತೂರ್ದಿಂದ ಬೆಳಿಗ್ಗೆ 09.30 ಕ್ಕೆ ಹೊರಟು ಅದೇ ದಿನ ಮಧ್ಯಾಹ್ನ 3.30 ಕ್ಕೆ ಹಡಪ್ಸರ್ ತಲುಪಲಿದೆ. ಅದೇ ರೀತಿ ರೈಲು ಸಂಖ್ಯೆ 01430 ವಿಶೇಷ ರೈಲು ಇದೇ ಸೆಪ್ಟೆಂಬರ್ 26 ರಿಂದ ನವೆಂಬರ್ 28 ರವರೆಗೆ ಪ್ರತಿ ಸೋಮವಾರ, ಮಂಗಳವಾರ, ಬುಧವಾರ ಮತ್ತು ಶುಕ್ರವಾರಗಳಂದು ಹಡಪ್ಸರ್ದಿಂದ ಸಂಜೆ 4.05 ಕ್ಕೆ ಹೊರಟು ಅದೇ ದಿನ ರಾತ್ರಿ 21.20 ಕ್ಕೆ ಲಾತೂರ್ಗೆ ತಲುಪಲಿದೆ. ಈ ರೈಲು ಹರಾಂಗುಲ್, ಮುರುದ್, ಧರಶಿವ್, ಬಾರ್ಸಿ ಟೌನ್, ಕುರ್ದುವಾಡಿ, ಜೆಯೂರ್ ಮತ್ತು ದೌಂಡ್ದಲ್ಲಿ ಮಾರ್ಗಗಳ ಮೂಲಕ ಸಂಚರಿಸಲಿದೆ.
ಎಲ್.ಟಿ.ಟಿ. (ಐಖಿಖಿ) ಮುಂಬೈ-ಲಾತೂರ್ ಸಾಪ್ತಾಹಿಕ ವಿಶೇಷ ರೈಲು: (ರೈಲು ಸಂಖ್ಯೆ 01007) ಸೆಪ್ಟೆಂಬರ್ 28 ರಿಂದ ನವೆಂಬರ್ 30 ರವರೆಗೆ ಪ್ರತಿ ಭಾನುವಾರದಂದು ಎಲ್ಟಿಟಿ ಮುಂಬೈನಿಂದ ಬೆಳಿಗ್ಗೆ 00.55 ಕ್ಕೆ ಹೊರಟು ಅದೇ ದಿನ ಮಧ್ಯಾಹ್ನ 13.30 ಕ್ಕೆ ಲಾತೂರ್ ತಲುಪಲಿದೆ. ಅದೇ ರೀತಿ ಸಾಪ್ತಾಹಿಕ (ವಿಶೇಷ ರೈಲು ಸಂಖ್ಯೆ 01008) ಸೆಪ್ಟೆಂಬರ್ 28 ರಿಂದ ನವೆಂಬರ್ 30 ರವರೆಗೆ ಪ್ರತಿ ಭಾನುವಾರ ಲಾತೂರ್ನಿಂದ ಸಂಜೆ 4ಕ್ಕೆ ಹೊರಟು ಮರುದಿನ ಬೆಳಿಗ್ಗೆ 04.50 ಕ್ಕೆ ಎಲ್ಟಿಟಿ ಮುಂಬೈಗೆ ತಲುಪಲಿದೆ. ಈ ರೈಲು ಥಾಣೆ, ಕಲ್ಯಾಣ್, ಲೋನಾವಾಲ, ಪುಣೆ, ದೌಂಡ್, ಕುರ್ದುವಾಡಿ ಮತ್ತು ಧಾರಾಶಿವ್ಗಳಲ್ಲಿ ನಿಲುಗಡೆಯಾಗಲಿದೆ.
ವಿಶೇಷ ಶುಲ್ಕದ ಮೇಲೆ ವಿಶೇಷ ರೈಲುಗಳಿಗೆ ಕಾಯ್ದಿರಿಸುವಿಕೆಗಳು ಕುರಿತು www.irctc.co.in ವೆಬ್ಸೈಟ್ನ್ನು, ಕಾಯ್ದಿರಿಸದ ಬೋಗಿಗಳಿಗೆ ಬುಕಿಂಗ್ನ್ನು ನಿಲ್ದಾಣಗಳಲ್ಲಿನ ಬುಕಿಂಗ್ ಕೌಂಟರ್ ಹಾಗೂ ಯು.ಟಿ.ಎಸ್. (UTS) ಅಪ್ಲಿಕೇಶನ್ ಮೂಲಕವೂ ಮಾಡಬಹುದಾಗಿದೆ.
ಈ ವಿಶೇಷ ರೈಲುಗಳ ನಿಲುಗಡೆಗಳ ಕುರಿತು www.enquiry.indianrail.gov.inಗೆ ಭೇಟಿ ನೀಡಿ ಅಥವಾ ಎನ್.ಟಿ.ಇ.ಎಸ್. (NTES) ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬೇಕು. ಅನಾನುಕೂಲತೆಯನ್ನು ತಪ್ಪಿಸಲು ಪ್ರಯಾಣಿಕರು ಟಿಕೇಟ್ದೊಂದಿಗೆ ಪ್ರಯಾಣಿಸಬೇಕೆಂದು ರೈಲ್ವೆ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


