ವಡಗೇರಾ: ರೈತ ಸಂಘಟನೆಯ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ರೈತರ ಸಮಸ್ಯೆಗಳ ಕುರಿತಂತೆ ಪ್ರಾಮಾಣಿಕವಾಗಿ ನ್ಯಾಯ ಕೊಡಿಸುವ ಕೆಲಸ ಮಾಡುವಂತೆ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಕಾರ್ಯಧ್ಯಕ್ಷರಾದ ಮಹೇಶ್ ಗೌಡ.ಎಂ.ಸುಬೇದಾರ್ ಹೇಳಿದರು.ಶಹಾಪುರ ನಗರದಲ್ಲಿರುವ ರಾಜ್ಯ ರೈತ ಸಂಘ ಹಸಿರು ಸೇನೆ ಕಲ್ಯಾಣ ಕರ್ನಾಟಕ ಕಾರ್ಯಾಲಯದಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆ (ಚೂನಪ್ಪ ಪೂಜಾರಿ ಬಣದ) ವಡಗೇರಾ ತಾಲೂಕು ಕಾರ್ಯದರ್ಶಿಯನ್ನಾಗಿ ಬಸನಗೌಡ ಮಾಲಿ ಪಾಟೀಲ್ ತೇಕರಾಳ ರವರನ್ನು ನೇಮಕ ಮಾಡಿ ಅವರು ಮಾತನಾಡಿದರು.ಸಂಘಟಿತ ಹೋರಾಟದಿಂದ ಮಾತ್ರ ಜಯ ಸಾಧ್ಯ. ಸರ್ಕಾರಗಳು ರೈತರನ್ನು ಕಡೆಗಣಿಸುತ್ತಿರುವುದು ಸರಿಯಲ್ಲ ಈಗಾಗಲೇ ಮಳೆಗೆ ಬೆಳೆಗಳು ಹಾಳಾಗಿದ್ದು ರೈತರಿಗೆ ಸಮರ್ಪಕ ಬೆಳೆ ಪರಿಹಾರ ವಿತರಿಸಲು ಜಿಲ್ಲಾಡಳಿತ ಮುಂದಾಗಬೇಕು ವಿಳಂಬ ಮಾಡಿದ್ದಲ್ಲಿ ರೈತ ಸಂಘದ ವತಿಯಿಂದ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದರು. ತಾಲೂಕಿನಲ್ಲಿ ನೀರಾವರಿ ಯೋಜನೆಗಳು ಹಾಗೂ ಗ್ರಾಮೀಣ ಭಾಗದ ರಸ್ತೆ ಮತ್ತು ತಾಲೂಕಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆ ಕಚೇರಿಗಳ ನಿರ್ಮಾಣ ನೂತನ ತಾಲೂಕಿನ ಜಲ್ವಂತ ಸಮಸ್ಯೆಗಳ ವಿರುದ್ಧ ಹಂತ ಹಂತವಾಗಿ ಹೋರಾಟ ಹಮ್ಮಿಕೊಳ್ಳುವಂತೆ ಕಿವಿ ಮಾತು ಹೇಳಿದರು.ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರುಗಳಾದ ಸಿದ್ದಣ್ಣ ಬಡಿಗೇರ್, ಜಿ.ಎನ್.ಚಾಹುಸ್, ಅಯ್ಯಣ್ಣ ದಿಡ್ಡಿಮನಿ, ಶರಣಗೌಡ ಮಾಲಿಪಾಟೀಲ್ , ಮಲ್ಲಪ್ಪ ಶಿವಣ್ಣೂರ,ಹಾಗೂ ಇನ್ನಿತರರು ಉಪಸ್ಥಿತರಿದ್ದರು
ಸಂಘಟಿತ ಹೋರಾಟದಿಂದ ಮಾತ್ರ ಜಯಸಾಧ್ಯ:ಮಹೇಶ್ ಗೌಡ ಸುಬೇದಾರ್


