ಕಲಬುರಗಿ ಜಿಲ್ಲೆಯ ಒಳಪಡುವ ಎಲ್ಲಾ ತಾಲೂಕಿನ ನಮ್ಮ ಹಡಪದ ಅಪ್ಪಣ್ಣ ಸಮಾಜದ ಜನತೆಗೆ ವಿಶೇಷ ಸೂಚನೆ ತಿಳಿಸುವುದು ಹಡಪದ ಅಪ್ಪಣ್ಣ ಸಮುದಾಯದ ಸೇರಿದ ಅನೇಕ ಉಪಜಾತಿಯ ಪದಗಳು ನಾವಿ, ನಾವಿಂದ, ನಾಯಿಂದ, ನಯನಜ. ಕೆಲಸಿ, ನ್ಹಾವಿ, ಕ್ಷೌರಿಕ, ಕ್ಷೌರ, ಭಂಡಾರಿ, ನಾವಲಿಗ, ಕ್ಷೌರದ ಈ ಹೆಸರುಗಳು ಹಡಪದ ಸಮಾಜದ ಉಪ ಪಂಗಡಗಳಾಗಿದ್ದು. ಈ ಸಮುದಾಯದವರು ದಯವಿಟ್ಟು ತಾವು ತಪ್ಪದೆ ಜಾತಿ ಜನ ಗಣತಿಯಲ್ಲಿ ಈ ಮೇಲಿನ ಎಲ್ಲಾ ಹೆಸರುಗಳು ನಮೂದಿಸದೇ. ಹಡಪದ, ಜಾತಿ ಹಡಪದ, ಉಪಜಾತಿ ಹಡಪದ, ಧರ್ಮ ಹಿಂದು ಎಂದು ನಮೂದಿಸಲು ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ಎಂದು ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾಧ್ಯಕ್ಷರಾದ ಈರಣ್ಣ ಸಿ ಹಡಪದ ಸಣ್ಣೂರ ಹೇಳಿದರು.
ರಾಜ್ಯದ ಮಾಜಿ ಸಂ.ಕಾರ್ಯದರ್ಶಿ ಬಸವರಾಜ ಹಳ್ಳಿ ಶಹಾಬಾದ, ಕಲಬುರಗಿ ಜಿಲ್ಲೆಯ ಗೌರವಾಧ್ಯಕ್ಷ ಬಸವರಾಜ ಹಡಪದ ಸುಗೂರ ಎನ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ರಮೇಶ್ ಹಡಪದ ನೀಲೂರ, ಕಲಬುರಗಿ ಜಿಲ್ಲೆಯ ಕಾರ್ಯಾಧ್ಯಕ್ಷ ಭಗವಂತ ಹಡಪದ ಸಹ ಶಿಕ್ಷಕರು ಹೊನ್ನಕಿರಣಗಿ, ಜಿಲ್ಲಾ ಉಪಾಧ್ಯಕ್ಷ ರುದ್ರಮಣಿ ಅಪ್ಪಣ್ಣ ಬಟಗೇರಾ, ಮಹಾತೇಶ ಇಸ್ಲಾಂಪೂರೆ, ಕಲಬುರಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್, ಆನಂದ ಖೇಳಗಿ, ಸಹ ಸಂ.ಕಾರ್ಯದರ್ಶಿ ಸಂತೋಷ ಬಗದುರಿ, ಸಹ ಪ್ರ.ಕಾರ್ಯದರ್ಶಿ ಮಲ್ಲಿಕಾರ್ಜುನ ಬನ್ನೂರ, ಮಹಾದೇವ ಹಡಪದ ರಾವೂರ, ಕಲಬುರಗಿ ಜಿಲ್ಲೆಯ ನಗರ ಘಟಕ ಅಧ್ಯಕ್ಷ ಮಲ್ಲಿಕಾರ್ಜುನ ಸಾವಳಗಿ, ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ ತೊನಸನಹಳ್ಳಿ ಸೇರಿದಂತೆ ಅನೇಕ ಪದಾಧಿಕಾರಿಗಳ ಸಮ್ಮುಖದಲ್ಲಿ ಚರ್ಚೆ ಮಾಡಿ ಈ ನಿರ್ಣಯವನ್ನು ತೆಗೆದುಕೋಳಲಾಯಿತು. ಎಂದು ಈರಣ್ಣ ಸಿ ಹಡಪದ ಸಣ್ಣೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


