ಮಾಡಿದ ಸಮಾಜಮುಖಿ ಕೆಲಸ-ಬರೆದ ಸಾಹಿತ್ಯ ಅಜರಾಮರ

ಕಲಬುರಗಿ: ಮಾಡಿದ ಅಭಿವೃದ್ಧಿ ಕಾರ್ಯಗಳು, ಸಮಾಜಮುಖಿ ಸೇವೆಗಳು ಹಾಗೂ ಬರೆದ ಸಾಹಿತ್ಯ ಅಜರಾಮರವಾಗಿರುತ್ತದೆ ಎಂದು ಶ್ರೀಶೈಲಂ -ಸುಲಫಲ ಮಠದ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಹೇಳಿದರು.
ನಗರದ ಆಳಂದ ರಸ್ತೆಯ ಬೆಣ್ಣೂರ ಪೆಟ್ರೋಲ್ ಪಂಪ ಎದರುಗಡೆಯ ಎಸ್.ಬಿ. ಕನ್ವೆನ್ಷನ್ ಹಾಲ್‌ದಲ್ಲಿ ಶುಕ್ರವಾರ ನಡೆದ ನಿವೃತ್ತ ಅಪರ ನಿಬಂಧಕ ಶರಣಬಸಪ್ಪ ಎ. ಬೆಣ್ಣೂರ ಅಭಿನಂದನಾ ಹಾಗೂ ಸಹಕಾರಿ ಜ್ಯೋತಿ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
, ಆಳಿದ ರಾಜರು ಮಣ್ಣುಪಾಲು ಆಗಿರುತ್ತಾರೆ. ಆದರೆ ಮಾಡಿದ ಕಾರ್ಯಗಳು ಜತೆಗೆ ಬರೆದ ಸಾಹಿತ್ಯಕ್ಕೆ ಭವಿಷ್ಯವಿದೆಯಲ್ಲದೇ ಶಾಶ್ವತವಾಗಿರುತ್ತದೆ. ಇದೇ ಕಾರಣಕ್ಕೆ ಸಾಹಿತ್ಯಕ್ಕೆ ಇಂದಿಗೂ ಬೆಲೆ ಇದೆ ಎಂದರಲ್ಲದೇ ಸಹಕಾರಿ ಕ್ಷೇತ್ರದಲ್ಲಿ ಮೂರು ದಶಕಗಳ ಕಾಲದುದ್ದಕ್ಕೂ ನಿವೃತ್ತ ಅಪರ ನಿಬಂಧಕ ಶರಣಬಸಪ್ಪ ಎ. ಬೆಣ್ಣೂರ ಮಾಡಿದ ಕಾರ್ಯಗಳು ಮಾದರಿಯಾಗಿದ್ದು ಹಾಗೂ ಅವರ ಕಾರ್ಯ ಹಾಗೂ ವ್ಯಕ್ತಿತ್ವ ಕುರಿತು ಹಿರಿಯ ಪತ್ರಕರ್ತ, ಲೇಖಕ ಗುಂಡೂರಾವ್ ಕಡಣಿ ಸಂಪಾಕದಲ್ಲಿ ಹೊರ ತರಲಾದ ಸಹಕಾರ ಜ್ಯೋತಿ ಸಾಹಿತ್ಯ (ಅಭಿನಂದನಾ ಗ್ರಂಥ) ಕೃತಿಯೂ ನಿಜಕ್ಕೂ ದೊಡ್ಡ ಕೊಡುಗೆಯಾಗಿ ಹೊರ ಹೊಮ್ಮಿವೆ ಎಂದು ಹೇಳಿದರು.
ಕಡಗಂಚಿ ಮಠದ ವೀರತಪಸ್ವೀ ವೀರಭದ್ರ ಶಿವಾಚಾರ್ಯರು, ಚವದಾಪುರಿ ಹಿರೇಮಠದ ರಾಜಶೇಖರ ಶಿವಾಚಾರ್ಯರು ಹಗೂ ಶ್ರೀನಿವಾಸಸರಡಗಿಯ ಡಾ. ಅಪ್ಪಾರಾವ ದೇವಿ ಮುತ್ಯಾ ಅವರು ಸಮ್ಮುಖತೆ ವಹಿಸಿ, ಶರಣಬಸಪ್ಪ ಅವರು ತಮ್ಮ ತಂದೆಯAತೆ ಹೆಸರು ಮಾಡಿದ್ದಾರೆ. ನಿವೃತ್ತಿ ನಂತರವೂ ಹತ್ತಾರು ಸಮಾಜಮುಖಿ ಕಾರ್ಯಗಳು ಮುಂದುವರೆಯಲಿ ಎಂದು ಹೇಳಿದರು.
 ಸಮಾರಂಭದಲ್ಲಿ ಅಪರ ನಿಬಂಧಕರಾಗಿ ನಿವೃತ್ತಿ ಹೊಂದಿದ ಶರಣಬಸಪ್ಪ ಬೆಣ್ಣೂರ ದಂಪತಿಯನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅದೆ ತೆರನಾಗಿ ಸಹಕಾರ ಜ್ಯೋತಿ ಅಭಿನಂದನಾ ಗ್ರಂಥದ ಸಂಪಾದಕರಾದ ಗುಂಡೂರಾವ ಕಡಣಿ ಅವರನ್ನು ಸನ್ಮಾನಿಸಲಾಯಿತು. ತದನಂತರ ಗಣ್ಯರು ಹಾಗೂ ಮಠಾಧೀಶರು ಗ್ರಂಥ ಮೌಲ್ಯಧಾರಿತವಾಗಿ ಬಂದಿದೆ ಎಂದು ಶ್ಲಾಘಿಸಿದರು.
ಸೊನ್ನ ವಿರಕ್ತ ಮಠದ ಡಾ. ಶಿವಾನಂದ ಸ್ವಾಮಿಗಳು, ಕಲ್ಯಾಣ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಎನ್. ಪಾಟೀಲ್, ಸಹಕಾರ ಸಂಘಗಳ ಜಂಟಿ ನಿಬಂಧಕ ವಿಶ್ವನಾಥ ಮಲಕೂಡ, ಮುಖಂಡರಾದ ನೀಲಕಂಠರಾವ ಮೂಲಗೆ, ಶರಣಬಸಪ್ಪ ಪಾಟೀಲ್ ಅಷ್ಠಗಾ, ಚಂದ್ರಶೇಖರ ಬೆಣ್ಣೂರ, ಧೂಳಪ್ಪ ಬೆಣ್ಣೂರ, ವಿಶ್ವನಾಥ ಬೆಣ್ಣೂರ, ನವೀನ ಬೆಣ್ಣೂರ ಹಾಗೂ ಬೆಣ್ಣೂರ ಗೆಳೆಯರ ಬಳಗದವರಾದ ಬಸವರಾಜ ವಾಲಿ, ಕೆ.ಎಸ್. ಮಾಲಿಪಾಟೀಲ್, ಅರುಣಕುಮಾರ ಪಾಟೀಲ್, ಡಾ. ಸಂಗಮೇಶ ಹಿರೇಮಠ, ಗುರುಬಸಪ್ಪ ಪಾಟೀಲ್, ಶ್ರೀಶೈಲ್ ಘೂಳಿ, ಚಂದ್ರಕಾAತ ಬಿರಾದಾರ, ಸಿದ್ಧಣ್ಣಗೌಡ ಮಾಲಿಪಾಟೀಲ್, ಶಿವಶರಣಪ್ಪ ಜಮಾದಾರ, ರಾಜಶೇಖರ ಬಿರಾದಾರ ಸೇರಿದಂತೆ ಮುಂತಾದವರಿದ್ದರು. ಪ್ರಾಚಾರ್ಯರಾದ ಡಾ. ಸುರೇಶ ನಂದಗಾAವ ಸ್ವಾಗತಿಸಿದರು. ಆರ್.ಜೆ ವಾಣಿ ನಿರೂಪಿಸಿದರು. ಡಾ. ಸೂರ್ಯಕಾಂತ ಪಾಟೀಲ್ ಸರಸಂಬಾ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!