ಗುರುಮಠಕಲ್: ವಲಯ ಮಟ್ಟದ ಕ್ರೀಡಾಕೂಟದಲ್ಲಿ ಶಾಂತಿನಿಕೇತನ ಶಾಲೆಗೆ ಕಬ್ಬಡಿ ಪ್ರಥಮ ಬಹುಮಾನ

ಗುರುಮಠಕಲ್; ಗುರುಮಠಕಲ್ ವಲಯ ಮಟ್ಟದಲ್ಲಿ ನಡೆದ ಕ್ರೀಡಾಕೂಟದಲ್ಲಿ ಚಪೆಟ್ಲಾ ಗ್ರಾಮದ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ವಿಶೇಷವಾಗಿ ಕಬ್ಬಡಿ ಪಂದ್ಯದಲ್ಲಿ ಶಾಂತಿನಿಕೇತನ ಶಾಲಾ ತಂಡ ಶ್ರೇಷ್ಠ ಕೌಶಲ್ಯ ತೋರಿಸಿ ಪ್ರಥಮ ಬಹುಮಾನವನ್ನು ತನ್ನದಾಗಿಸಿಕೊಂಡಿದೆ.
ಪಂದ್ಯದ ಅಂತಿಮ ಹಂತದಲ್ಲಿ ಶಾಂತಿನಿಕೇತನ ತಂಡ ಎದುರಾಳಿಗಳನ್ನು ಶಕ್ತಿಶಾಲಿಯಾಗಿ ಎದುರಿಸಿ ಗೆಲುವಿನ ನಗೆ ಬೀರಿತು. ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಕರು, ಪೋಷಕರು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ. ಶಾಲೆಯ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳ ಪರಿಶ್ರಮ ಮತ್ತು ತರಬೇತುದಾರರ ಮಾರ್ಗದರ್ಶನವೇ ಈ ಜಯದ ಮೂಲವೆಂದು ತಿಳಿಸಿದರು.  ಈ ಸಾಧನೆಯಿಂದ ಶಾಂತಿನಿಕೇತನ ಶಾಲೆಯ ವಿದ್ಯಾರ್ಥಿಗಳಿಗೆ ಮುಂದಿನ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ದೊರೆತಿದೆ.

Leave a Reply

Your email address will not be published. Required fields are marked *

error: Content is protected !!