ಸೋಮಾರಿತನದಿಂದ ವಿದ್ಯಾರ್ಥಿ ಜೀವನದಲ್ಲಿ ಸೋಲು
ಗುರುಮಠಕಲ್: ವಿದ್ಯಾರ್ಥಿ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದರೆ ಸತತ ಪರಿಶ್ರಮ ಅಗತ್ಯವಾಗಿದೆ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ಉಪನ್ಯಾಸಕಿ ಡಾ.ಜ್ಯೋತಿಲತಾ ಹೇಳಿದರು. ಗುರುಮಠಕಲ್ ಪಟ್ಟಣದ ಹೊರವಲಯದ ಡೆಕ್ಕನ್ ಶಿಕ್ಷಣ ಸಂಸ್ಥೆಯ ಪ್ರಗತಿ ಕಾಲೇಜಿನಲ್ಲಿ ಪಿಯು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಓದಿನ ಬಗ್ಗೆ ಚಿಂತನೆ ಇರಬೇಕು ಹೊರತು ಚಿಂತೆ ಇರಬಾರದು ಎಂದು ಹೇಳಿದ ಅವರು, ನಿರಂತರ ಪರಿಶ್ರಮದ ಅಧ್ಯಾಯ ಎಂದೂ ಕೈಬಿಡಲ್ಲ ಎನ್ನುವುದು ಅರಿಯಬೇಕು. ಸೋಮಾರಿತನ ದಿಂದ ವಿದ್ಯಾರ್ಥಿ ಜೀವನದಲ್ಲಿ ಸೋಲು ಹಾಗಾಗಿ ವಿದ್ಯಾರ್ಥಿಗಳು ಅಭ್ಯಾಸದ ಕಡೆ ಗಮನಹರಿಬೇಕು ಎಂದರು. ಮಾನವ ಜನ್ಮ ದೊಡ್ಡದ್ದು ಹಾಳು ಮಾಡಿಕೊಳ್ಳದಿರಿ ಎಂದು ದಾಸಶ್ರೇಷ್ಠರು ಸಾರಿದ್ದಾರೆ. ಮನಸ್ಸು ವಿಚಲಿತಗೊಳ್ಳಿಸಿಕೊಳ್ಳದೇ ಸಾಧನೆ ಸುಲಭ. ಜೀವನಕ್ಕೆ ಉದ್ದೇಶ ಇರಬೇಕು. ಪಿಯುಸಿ ದೊಡ್ಡ ಜೀವನ ಘಟ್ಟ ಇದನ್ನು ವ್ಯರ್ಥ ಮಾಡಿಕೊಳ್ಳಬಾರದು ಎಂದರು. ಸಾಧನೆಯ ಕನಸು ಕಂಡು ಅದರ ಯಶಸ್ವಿಗೆ ಸತತವಾಗಿ ಪ್ರಯತ್ನ ಮಾಡಬೇಕು ಎಂದು ಹೇಳಿದರು. ಗುರಿ ಸಾಧಿಸಬೇಕಾದರೆ ಇಂದಿನ ಕೆಲಸವನ್ನು ಇಂದೇ ಮಾಡಿ ಮುಸಗಿಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಈ ಸಂಧರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಗೋವಿಂದರಾಜ ಕಾಮಿನ್, ಉಪಾಧ್ಯಕ್ಷ ಇಸ್ಮಾಯಿಲ್ ಪ್ಯಾರೆ, ಕಾರ್ಯದರ್ಶಿ ಅಕ್ತರ ಪ್ಯಾರೆ, ಸಂಜೀವ ಕುಮಾರ ಚಂದಾಪುರ, ಪ್ರಾಂಶುಪಾಲ ಶಿವಕುಮಾರ ರೆಡ್ಡಿ, ಶಾಲೆಯ ಮುಖ್ಯಗುರು ಚನ್ನಾರೆಡ್ಡಿ, ಝಹಿರೋದ್ದೀನ್, ಜಾಕೀರ ಹುಸೇನ ವೇದಿಕೆಯಲ್ಲಿದ್ದರು.
ಮಹೇಶ, ಗೋಪಾಲರೆಡ್ಡಿ, ಲಕ್ಷಣ, ಆಶಪ್ಪ, ಬಾಲಗೋಪಾಲ, ಮದಿಯಾ, ಅಂಬಿಕಾ, ವೆಂಕಟೇಶ, ವಿಜಯಕುಮಾರ್ ರೆಡ್ಡಿ ಪತ್ತಿ, ಸೇರಿದಂತೆ ವಿದ್ಯಾರ್ಥಿಗಳು ಇದ್ದರು.


