ಕಲಬುರಗಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಕಲಬುರಗಿ ಧರ್ತಿ ಅಭಾ ಜನ ಜಾತೀಯ ಗ್ರಾಮ ಉತ್ಕಾರ್ಷ ಅಭಿಯಾನದಡಿ ಆದಿ ಕರ್ಮಯೋಗಿ ಅಭಿಯಾನ ತಾಲೂಕು ಮಟ್ಟದ ಅಧಿಕಾರಿಗಳಿಗೆ ಮೂರು ದಿನದ ತರಬೇತಿಯ ಕಾರ್ಯಗಾರವನ್ನು ಮಹರ್ಷಿ ವಾಲ್ಮೀಕಿ ಮತ್ತು ಭಗವಾನ್ ಬಿರ್ಸಾ ಮುಂಡಾ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿ ಮೂರು ದಿನಗಳ ತರಬೇತಿ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಬಿ. ಪೌಜಿಯಾ ತರನ್ನುಮ್ ಅವರು ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರಾದ ಧನರಾಜ್ ಲದ್ದಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಕರಾದ ರಾಜಕುಮಾರ ರಾಥೋಡ್, ಆದಿ ಕರ್ಮಯೋಗಿ ಅಭಿಯಾನ ಹಾಗೂ ವಿಭಾಗ ಅಧಿಕಾರಿ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಭಾರತ ಸರ್ಕಾರ ಕಲಬುರಗಿ ಜಿಲ್ಲಾ ಪ್ರಭಾರಿ ಅಧಿಕಾರಿ ಕುಂದನ್ ಕುಮಾರ್, ಡಾ. ನೆಲ್ಸನ್ ಮಂಡಲಾ ಸೇವಾ ಸಂಸ್ಥೆಯವರಾದ ಸುಭಾಸ್, ಕಲಬುರಗಿ ಶಿಕ್ಷಣಾಧಿಕಾರಿ ಶಂಕರಮ್ಮ ಡವಳಗಿ ಉಪಸ್ಥಿತರಿದ್ದರು..
ತಾಲೂಕು ಮಟ್ಟದ ಅಧಿಕಾರಿಗಳಿಗೆ ಮೂರು ದಿನದ ತರಬೇತಿ ಕಾರ್ಯಗಾರ : ಡಿಸಿ ಚಾಲನೆ


