ಭಕ್ತಿಪೂರ್ವಕವಾಗಿ ಜರುಗಿದ ಗಣೇಶ ವಿಸರ್ಜನೆ

ಮುದ್ದೇಬಿಹಾಳ : ಗಣೆಶೋತ್ಸವ ನಿಮಿತ್ಯ ಪಟ್ಟಣದ ಬಹುತೇಕ ಮನೆಗಳಲ್ಲಿ ೫ ದಿನಗಳ ವರೆಗೆ ಪ್ರತಿಷ್ಟಾಪಿಸಲ್ಪಟ್ಟ ಶ್ರೀ ಗಣೇಶನ ಮಹಾಮೂರ್ತಿಗಳನ್ನು ಭಕ್ತಿಬಾವದಿಂದ ಪೂಜಿಸುವ ಮೂಲಕ ಗಣೇಶನನ್ನು ಸಂಭ್ರಮದಿOದ ಬಿಳ್ಕೊಡಲಾಯಿತು.
ಮನೆಯ ಸದಸ್ಯರೆಲ್ಲರೂ ೫ ದಿನಗಳ ಕಾಲ ಮನೆಯಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಗಣೇಶನಿಗೆ ದಿನಂಪ್ರತಿ ವಿವಿಧ ಹೂವುಗಳಿಂದ ಅಲಂಕರಿಸಿ ವಿವಿಧ , ಲಾಡು, ಹೋಳಿಗೆ, ಪಾಯಸ, ಕರಿಗಡುಬು, ಚಿತ್ರಾನ್ನ, ಅನೇಕ ತೆರನಾದ ಸಿಹಿ ತಿನಿಸುಗಳನ್ನು ನೈವೇದ್ಯ ಮಾಡಿ ಗಣೇಶನಿಗೆ ತಮ್ಮ ಬೇಕುಬೇಡಿಕೆಗಳನ್ನು ಕೇಳಿಕೊಂಡರು.
ಸಾಯಂಕಾಲ ದಾರಿಯುದ್ದಕ್ಕೂ ಯುವಕರು, ಮಕ್ಕಳು ಪಟಾಕ್ಷಿ ಸಿಡಿಸಿ ಸಂಭ್ರಮಿಸಿದರಲ್ಲದೇ ಹಾಡಿನೊಂದಿಗೆ ಗಣಪತಿ ಬಪ್ಪಾ ಮೋರಯಾ..  ಘೋಷಣೆಗಳನ್ನು ಕೂಗುತ್ತಾ ಗಣೇಶನ ಮೂರ್ತಿಗಳನ್ನು ಸಮೀಪದ ತಂಗಡಗಿ ರಸ್ತೆಯಲ್ಲಿರುವ ಹೊಳೆಗೆ ತೆರಳಿ ಪೂಜೆ ಸಲ್ಲಿಸಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.
ಈ ಸಮಯದಲ್ಲಿ ನೇತಾಜಿ ನಲವಡೆ, ಮಾರುತಿ ನಲವಡೆ, ರಾಜನಾರಾಯಣ ನಲವಡೆ, ಗಜಾನನ ನಲವಡೆ, ರಾಘವೇಂದ್ರ ನಲವಡೆ, ರಾಹುಲ್ ನಲವಡೆ, ಅನೀಲ್ ಪವಾರ, ಸುನೀಲ್ ಪವಾರ, ರಾಜು ಮ್ಯಾಗೇರಿ, ಶರಣು ಸಾಲವಾಡಗಿ, ಆಕಾಶ ನಲವಡೆ, ಅಥರ್ವ, ಸಾಯಿಸಮರ್ಥ, ಅಭಿಷೇಕ ನಲವಡೆ, ವೇದಾಂತ ಪವಾರ, ಅಭಿ ರಾಯಗೊಂಡ, ಅಜ್ಜು ರಾಯಗೊಂಡ ಅಮೀತ್, ಪ್ರೀತಮ್ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!