ನಾನು ಶಾಸಕನಲ್ಲ ,ನಿಮ್ಮ ಸೇವಕ- ಅಲ್ಲಮಪ್ರಭು ಪಾಟೀಲ

ಕಲಬುರಗಿ : ನಾನು ಶಾಸಕನಲ್ಲ ,ನಿಮ್ಮ ಸೇವಕ- ನನ್ನನ್ನು ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ತಮಗೆ ಯಾವತ್ತಿಗೂ ಚಿರ ಋಣಿ ಎಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಹೇಳಿದರು.

ಸದಾಶಿವ ನಗರದ ಶ್ರೀ ಗಣೇಶ ಮಂದಿರ ಗಣೇಶ ವಿಸರ್ಜನಾ ದಿನದಂದು ಬಡಾವಣೆಯಲ್ಲಿ ಹತ್ತನೇ ಮತ್ತು ಪಿ.ಯು.ಸಿ‌.ಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತಗೊಂಡ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಯಶಸ್ಸು ಎನ್ನುವುದು ಯಾರೊಬ್ಬರ ಸ್ವತ್ತಲ್ಲಾ, ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಪಡೆಯಲು ಸಾಧ್ಯ ಎಂದು ಹೇಳಿದ ಶಾಸಕರು
ಮತಕ್ಷೇತ್ರದಲ್ಲಿರುವ ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ಎಂದರು.

ಇದೇ ಸಂಧರ್ಭದಲ್ಲಿ ಮೂರು ದಿನಗಳ ಕಾಲ ಪ್ರಸಾದ ಸೇವೆ ಸಲ್ಲಿಸಿದ ಮಹನಿಯರನ್ನು ಗೌರವಿಸಲಾಯಿತು.ಪ್ರಧಾನ ಅರ್ಚಕ ವಿವೇಕಸ್ವಾಮಿ ದಂಪತಿಯನ್ನು ಸಮಿತಿ ಪರವಾಗಿ ಗೌರವಿಸಲಾಯಿತು .
ವೀರಣ್ಣಗುಗ್ವಾಡ್ ನಿರೂಪಿಸಿದರು ವೀರಭದ್ರಪ್ಪಾ ಪಾಟೀಲ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!