ಕಲಬುರಗಿ : ನೂತನವಾಗಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿಯಾಗಿ ಶ್ರೀಮತಿ ಶೋಭಾ ಗುರುರಾಜ್ ದೇಸಾಯಿ ಅವರು ಆಯ್ಕೆಯಾಗಿದ್ದಾರೆ.
ನಂತರ ಸನ್ಮಾನ ಸ್ವೀಕರಿಸಿ ನೂತನ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿ ಶ್ರೀಮತಿ ಶೋಭಾ ಗುರುರಾಜ್ ದೇಸಾಯಿ ಅವರು ಮಾತನಾಡಿ,ಮಹಾನಗರ ಪಾಲಿಕೆ ವಿರೋದ ಪಕ್ಷದ ನಾಯಕಿ ಮಾಡಿದ್ದಕ್ಕೆ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ನಗರ ಬಿಜೆಪಿ ಅಧ್ಯಕ್ಷ ಚಂದು ಪಾಟೀಲ ಸೇರಿದಂತೆ ಎಲ್ಲಾ ಸದಸ್ಯರಿಗೆ ಮತ್ತು ಪಕ್ಷದ ಎಲ್ಲಾ ನಾಯಕರಿಗೆ ಮತ್ತು ಮುಖಂಡರಿಗೆ ಅವರು ಧನ್ಯವಾದ ಸಲ್ಲಿಸಿದರು. ಕಲಬುರಗಿ ಮಹಾನಗರ ಪಾಲಿಕೆಯ ಇತಿಹಾಸದಲ್ಲಿ ನಾನು ಪ್ರಪ್ರಥಮವಾಗಿ ಒಬ್ಬ ಮಹಿಳೆಯಾಗಿ, ವಿರೋಧ ಪಕ್ಷದ ನಾಯಕಿಯಾಗಿ ಅಯ್ಕೆ ಆಗಿದ್ದು ನನಗೆ ಹೆಮ್ಮೆವಿದೆ. ನಗರದ ವಿವಿಧ ವಾರ್ಡಗಳಲ್ಲಿರುವ ಸಮಸ್ಯೆ ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ನೂತನವಾಗಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿಯಾಗಿ ಶ್ರೀಮತಿ ಶೋಭಾ ಗುರುರಾಜ್ ದೇಸಾಯಿ ಅವರನ್ನು ನಾವು ಆಯ್ಕೆ ಮಾಡಿದ್ದೇವೆ. ಕಳೆದ 2 ವರ್ಷದಿಂದ ಯಾವುದೇ ಅಭಿವೃದ್ಧಿ ಕೆಲಸ ನಗರದಲ್ಲಿ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ. ನಗರದ ವಿವಿಧ ವಾರ್ಡಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಈ ಪಾರ್ಟಿ ಆ ಪಾರ್ಟಿ ಮಾಡಬೇಡಿ ಎಲ್ಲಾ ಸದಸ್ಯರಿಗೂ ಸಮಾನವಾಗಿ ಅನುದಾನ ನೀಡಿ, ನಗರ ಎಲ್ಲಾ ವಾರ್ಡಗಳ ಸಮಸ್ಯೆ ಪರಿಹಾರ ನೀಡಿ ನಗರವನ್ನು ಅಭಿವೃದ್ಧಿ ಮಾಡೋಣ
ಚಂದು ಪಾಟೀಲ ಬಿಜೆಪಿ ನಗರ ಅಧ್ಯಕ್ಷ..
ಕಲಬುರಗಿ ನಗರದ ಮಹಾನಗರ ಪಾಲಿಕೆಯ ಇತಿಹಾಸದಲ್ಲಿ ಪ್ರಪ್ರಥಮ ಬಾರಿ ಒಬ್ಬ ಮಹಿಳೆ, ಶ್ರೀಮತಿ ಶೋಭಾ ಗುರುರಾಜ್ ದೇಸಾಯಿ ಅವರನ್ನು ಬಿಜೆಪಿ ಪಕ್ಷದಿಂದ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿಯಾಗಿ ಅಯ್ಕೆ ಮಾಡಿದ್ದಾರೆ. ಕಲಬುರಗಿ ನಗರದ ವಿವಿಧ ವಾರ್ಡನಲ್ಲಿ ಜನ ಸಾಕಷ್ಟು ಸಮಸ್ಯೆ ದಲ್ಲಿ ವಾಸಿಸುತ್ತಿದ್ದಾರೆ. ಅಧಿಕಾರದಲ್ಲಿರುವರು ಯಾರು ಆ ಕಡೆ ಗಮನ ಹಾರಿಸುತ್ತಿಲ್ಲ, ಜನರ ಸಂಕಷ್ಟಕ್ಕೆ ಧ್ವನಿಯಾಗಿ ಸರ್ಕಾರ ಚಾಟಿ ಬಿಸುವುದರಲ್ಲಿ ನಾವು ಎಲ್ಲಾರೂ ಸೇರಿ ಕೆಲಸ ಮಾಡುತ್ತೇವೆ ..
ದತ್ತಾತ್ರೇಯ ಪಾಟೀಲ ರೇವೂರ
ಮಾಜಿ ಶಾಸಕ


