ಕೇಂದ್ರ ನೀತಿ ಆಯೋಗದ ಮಹತ್ವಾಕಾಂಕ್ಷಿ ತಾಲೂಕ ಕಾರ್ಯಕ್ರಮ : ಕಾಳಗಿ ತಾಲೂಕಿಗೆ ಎರಡನೆಯ ಸ್ಥಾನ ಸಚಿವ ಪ್ರಿಯಾಂಕ್ ಖರ್ಗೆ ಹರ್ಷ

ಕಲಬುರಗಿ : ವಿವಿಧ ಐದು ವಲಯಗಳಲ್ಲಿ ಸೂಚ್ಯಂಕಗಳಲ್ಲಿ ಗಣನೀಯ ಅಭಿವೃದ್ದಿ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಕೈಗೊಂಡ ಕ್ರಮಗಳ ಕಾರ್ಯಸಾಧನೆಗಾಗಿ ಕಾಳಗಿ ತಾಲೂಕು ಡೆಲ್ಟಾ ಪಟ್ಟಿಯಲ್ಲಿ ದಕ್ಷಿಣ ಭಾರತದಲ್ಲಿಯೇ ಎರಡನೆಯ ಸ್ಥಾನ ಪಡೆದಿದ್ದು ಇದು ಹೆಮ್ಮೆಯ ವಿಷಯವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಅಚಿವ ಪ್ರಿಯಾಂಕ್ ಖರ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಕೇಂದ್ರದ ನೀತಿ ಆಯೋಗವು ಕೃಷಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕೌಶಲ್ಯ, ಅಪೌಷ್ಠಿಕತೆ, ಆರೋಗ್ಯ, ಶಿಕ್ಷಣ ಹಾಗೂ ಮೂಲಸೌಲಭ್ಯ ವಲಯಗಳಲ್ಲಿ ಆಗಿರುವ ಸಾಧನೆ ಕುರಿತಂತೆ ಸರ್ವೆ ನಡೆಸಿತ್ತು .ಮಾನವನ ಅಭಿವೃದ್ಧಿ ಸೂಚ್ಯಂಕ (ಹೂಮನ್ ಡೆವಲಪ್ಟೆಂಟ್ ಇಂಡೆಕ್ಸ್ ) ನಲ್ಲಿ ಆಗ ಕಂಡುಬಂದ ಅಂಕಿ ಅಂಶಗಳ ಪ್ರಕಾರ ಕಾಳಗಿ ತಾಲೂಕಿನಲ್ಲಿ ಈ ಎಲ್ಲ ಕ್ಷೇತ್ರಗಳ ಅಭಿವೃದ್ದಿ ಪ್ರತಿಶತಃ ಕ್ಕಿಂತ ಕಡಿಮೆ ದಾಖಲಾಗಿತ್ತು.

ಇದೇ ರೀತಿ ಇರುವ ದೇಶದ ವಿವಿಧ ತಾಲೂಕಗಳ ಸರ್ವೆ ನಡೆಸಿ ಕಲಬುರಗಿ ಜಿಲ್ಲೆಯ ಅಫಜಲಪುರ, ಶಹಾಬಾದ್ ಹಾಗೂ ಕಾಳಗಿ ತಾಲೂಕುಗಳನ್ನು ಸೇರಿಸಿ ಒಟ್ಟು 500 ತಾಲೂಕು ಗಳನ್ನು ಮಹತ್ವಾಕಾಂಕ್ಷಿ ತಾಲೂಕು ಗಳೆಂದು ಪ್ರಧಾನಮಂತ್ರಿಗಳ ನೇತೃತ್ವದಲ್ಲಿ ಜನೇವರಿ 7, 2023 ರ ಸಭೆಯಲ್ಲಿ ಘೋಷಿಸಲಾಗಿತ್ತು.

ಈ ಮೂರು ತಾಲೂಕುಗಳಲ್ಲಿ ಕೃಷಿ, ಶಿಕ್ಷಣ, ನೈರ್ಮಲ್ಯ, ಸಾಮಾಜಿಕ ಅಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯ ವಲಯಗಳ ಅಭಿವೃದ್ಧಿ ಹಾಗೂ ಜನ ಜೀವನ ಮಟ್ಟ ಸುಧಾರಣೆಗಾಗಿ ತಿಳುವಳಿಕೆ ಮೂಡಿಸುವ ಕಾರ್ಯಕ್ರಮದ ಜೊತೆಗೆ ಸರ್ಕಾರದ ಯೋಜನೆಗಳ ಮಹತ್ವದ ಬಗ್ಗೆ ಹಾಗೂ ಅವುಗಳ ಜಾರಿಗೊಳಿಸುವ ಉದ್ದೇಶದಿಂದ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಜಿಲ್ಲಾ ಪಂಚಾಯತ್ ಹಾಕಿಕೊಂಡಿತ್ತು.

ಪ್ರತಿ ಮೂರು ತಿಂಗಳು ವಿಮರ್ಶೆ ವರದಿಗಳ ಪ್ರಸ್ತುತಿ ಪರಿಣಾಮವಾಗಿ ಕಾಳಗಿ ತಾಲೂಕಿನಲ್ಲಿ ಈ ನಿಟ್ಟಿನಲ್ಲಿ ಅಂಕಿ ಅಂಶದಲ್ಲಿ ಪ್ರಗತಿ ಸಾಧಿಸಲಾಗಿದೆ. ಹಾಗಾಗಿ, ನೀತಿ ಆಯೋಗ ದಕ್ಷಿಣ ಭಾರತದ ರಾಜ್ಯಗಳಲ್ಲಿನ ಮಹಾತ್ಮಾಕಾಂಕ್ಷಿ ತಾಲೂಕುಗಳಲ್ಲಿ ಸರ್ವೆ ನಡೆಸಿ ಕಾಳಗಿ ತಾಲೂಕಿಗೆ ಎರಡನೆಯ ಸ್ಥಾನ ನೀಡುವುದರ ಜೊತೆಗೆ ರೂ 1ಕೋಟಿ ವಿಶೇಷ ಅನುದಾನ ಘೋಷಿಸಿದೆ.

ನೀತಿ ಆಯೋಗದ ಈ ವಿಶೇಷ ಅನುದಾನದ ಸಾರ್ವಜನಿಕರ ಬಳಕೆಗೆ ಸಂಬಂಧಿಸಿದಂತೆ ನೀತಿ‌‌ ನಿಯಮಗಳನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾಗಿರುವ ಸಮಿತಿಯಲ್ಲಿ ರೂಪಿಸಲಾಗುತ್ತಿದೆ. ಅದರಂತೆ ಅನುದಾನದ ಸಮರ್ಪಕ ಹಾಗೂ ಕಟ್ಟುನಿಟ್ಟಿನ ಬಳಕೆಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು.

ದಕ್ಷಿಣ ಭಾರತದಲ್ಲಿಯೇ ಎರಡನೆಯ ಸ್ಥಾನ

ಕಾಳಗಿ ತಾಲೂಕು ದಕ್ಷಿಣ ಭಾರತದಲ್ಲಿಯೇ ಎರಡನೆಯ ಸ್ಥಾನ ಪಡೆದುಕೊಂಡು ನೀತಿ ಆಯೋಗದಿಂದ ರೂ 1 ಕೋಟಿ ವಿಶೇಷ ಪಡೆದುಕೊಂಡಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಈ ಅನುದಾನ ಬಳಕೆಗಾಗಿ ಈಗಾಗಲೇ ಅಧಿಕಾರಿಗಳಿಗೆ ಸೂಕ್ತ ಸಲಹೆ‌ ನೀಡಲಾಗಿದೆ.

-ಸಚಿವ ಪ್ರಿಯಾಂಕ್ ಖರ್ಗೆ

Leave a Reply

Your email address will not be published. Required fields are marked *

error: Content is protected !!