ಬೆಂಗಳೂರು : ಸಾರಿಗೆ ನೌಕರರು ಯಾವುದೇ ರೀತಿಯ ಮುಷ್ಕರ ಮಾಡುವಂತಿಲ್ಲ ಎಂದು ಸಾರಿಗೆ ನೌಕರರಿಗೆ ಕೆಎಸ್ಆರ್ಟಿಸಿ ವತಿಯಿಂದ ಖಡಕ್ ಎಚ್ಚರಿಕೆ ನೀಡಲಾಗಿದೆ.
ಹಾಗೂ ಮುಷ್ಕರಕ್ಕೆ ಬೆಂಬಲವನ್ನ ಕೂಡ ಸೂಚಿಸುವಂತಿಲ್ಲ ಬೆಂಗಳೂರು ಚಲೋದಲ್ಲಿ ಭಾಗಿಯಾಗದಂತೆ ಎಚ್ಚರಿಕೆಯನ್ನ ಕೊಡಲಾಗಿದೆ ಗುರುವಾರರಂದು ಬೆಂಗಳೂರು ಚಲೋಗೆ ಕರೆಯನ್ನು ನೀಡಲಾಗಿದ್ದು, ಡ್ಯೂಟಿಗೆ ಬಂದಿಲ್ಲ ಅಂದ್ರೆ ನೋ ವರ್ಕ್ ನೋ ಪೇ ಅಂತ ಆದೇಶ ಮಾಡಿದೆ.
38 ತಿಂಗಳ ವೇತನ ಪರಿಷ್ಕರಣೆಯ ಹಿಂಬಾಕಿ 11/ 2020 ರಿಂದ 2023, 2024, ರಿಂದ ನಾಲ್ಕು ವರ್ಷಗಳ ವೇತನ ಒಪ್ಪಂದಕ್ಕೆ ಆಗ್ರಹಿಸಿ ಗುರುವಾರ ಬೆಂಗಳೂರು ಚಲೋಗೆ ಕರೆಯನ್ನ ಕೊಡಲಾಗಿತು. ಜಂಟಿ ಕ್ರಿಯಾ ಸಮಿತಿ ಕೊಟ್ಟಿರುವಂತಹ ಬೆಂಗಳೂರು ಚಲೋನಲ್ಲಿ ಸಾರಿಗೆ ನೌಕರರು ಭಾಗಿಯಾಗುವಂತಿಲ್ಲ ಅಥವಾ ಸಹಕಾರವನ್ನ ಕೊಡುವಂತಿಲ್ಲ ಅಂತ ಹೇಳಿ ಆದೇಶವನ್ನು ಹೊರಡಿಸಲಾಗಿದೆ. ಒಂದು ವೇಳೆ ಯಾರಾದರೂ ಭಾಗಿಯಾದರೆ ಕೆಲಸ ಹಾಜರಾಗದಿದ್ದರೆ ಅವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನ ಕೂಡ ನೀಡಲಾಗಿದೆ.


