ಕಲಬುರಗಿ, -ಕೇಂದ್ರ ರೇಷ್ಮೆ ಮಂಡಳಿ, ರಾಜ್ಯ ರೇಷ್ಮೆ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಕಲಬುರಗಿ ಇವುಗಳ ಸಹಯೋಗದೊಂದಿಗೆ ಗುಣಮಟ್ಟದ ರೇಷ್ಮೆಗೂಡಿನಿಂದ–ಗುಣ ಮಟ್ಟದ ರೇಷ್ಮೆ ಉತ್ಪಾದನೆಯೆಂಬ ಉದ್ದೇಶದೊಂದಿಗೆ ಗುರುವಾರ (ಜನವರಿ ೨೨ ರಂದು) ಕಾಳಗಿ ತಾಲೂಕಿನ ಚಿಂಚೋಳಿ-ಹೆಚ್ ಗ್ರಾಮದ ಮೇ|| ಲುಂಬಿನಿ ಸ್ವಯಂ ಚಾಲಿತ ರೇಷ್ಮೆ ನೂಲು ಬಿಚ್ಚಾಣಿಕೆ ಘಟಕದಲ್ಲಿ ಆಯೋಜಿಸಲಾದ ರೇಷ್ಮೆ ಬೆಳೆಗಾರರು ಹಾಗೂ ನೂಲು ಬಿಚ್ಚಾಣಿಕೆದಾರರ “ರೇಷ್ಮೆ ಮೇಳ”ಕ್ಕೆ ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಅವರು ರೇಷ್ಮೆ ವಸ್ತು ಪ್ರದರ್ಶನ ಹಾಗೂ ತೋಟಗಾರಿಕೆ ವಸ್ತು ಪ್ರದರ್ಶನದ ಮಳಿಗೆ ಉದ್ಘಾಟಿಸಿ ರೇಷ್ಮೆ ಬೆಳೆಗಾರರು ಹಾಗೂ ನೂಲು ಬಿಚ್ಚಾಣಿಕೆದಾರರನ್ನು ಉದ್ದೇಶಿಸಿ ಮಾತನಾಡಿದರು. ನಂತರ ಅವರು ಉತ್ತಮ ರೇಷ್ಮೆ ಗೂಡು ಬೆಳೆದಂತಹ ಕಲಬುರಗಿ ಹಾಗೂ ಬೀದರ ಜಿಲ್ಲೆಗಳ ಪ್ರಗತಿಪರ ರೇಷ್ಮೆ ಬೆಳೆಗಾರರಿಗೆ ಪ್ರಶಂಸಾ ಪ್ರಮಾಣಪತ್ರ ವಿತರಿಸಿ ಸನ್ಮಾಸಿದರು. ನಂತರ ಸ್ವಯಂ ನೂಲು ಬಿಚ್ಚಾಣಿಕೆ ಘಟಕದ ಕಾರ್ಯಚಟುವಟಿಕೆಯನ್ನು ವೀಕ್ಷಿಸಿದರು.
ಕಾರ್ಯಕ್ರಮದಲ್ಲಿ ಧಾರವಾಡ ‘ಡಿ’ ಸಿ.ಎಸ್.ಬಿ.-ಸಿಎಸ್ಟಿಆರ್ಐ (ಅSಃ-ಅSಖಿಖI) ವಿಜ್ಞಾನಿ ಎಸ್.ಎಮ್.ಹುಕ್ಕೇರಿ, ಕಲಬುರಗಿ ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ರವಿಗೌಡ, ಆರ್.ವಿ.ಎಸ್. ಟ್ರೇಡಿಂಗ್ ಕಂಪನಿಯ ಸಿ.ಇ.ಓ. ರೇಷ್ಮಾ ಎ.ಕೆ., ತೋಟಗಾರಿಕೆ ಜಂಟಿ ನಿರ್ದೇಶಕ ಸಂತೋಷ ಇನಾಮದಾರ, ಬೀದರ್ ಜಿಲ್ಲಾ ಪಂಚಾಯತ್ ರೇಷ್ಮೆ ಉಪನಿರ್ದೇಶಕ ರಂಗನಾಥ, ಬೀದರ ‘ಬಿ’ ಖಇಅ,ಅSಃ-ಅSಖ&ಖಿI ವಿಜ್ಞಾನಿ ಡಾ|| ಶ್ರೀನಿವಾಸ್.ಕೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ|| ಶರಣಬಸಪ್ಪಾ ಕ್ಯಾತನಾಳ, ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ವಿಕಾಸ ಸಜ್ಜನ, ಕಲಬುರಗಿ ವಿಭಾಗ ರೇಷ್ಮೆ ಸಹಾಯಕ ನಿರ್ದೇಶಕ ಅನಿಲ ಎಸ್.ವಾಡಿ, ಗೂಡಿನ ನಂತರ ಚಟುವಟಿಕೆ ಜೇವರ್ಗಿ , ೫೦೦ ಜನರೇಷ್ಮೆ ಬೆಳೆಗಾರರು, ಖಾಸಗಿ ಚಾಕಿ ಸಾಕಾಣಿಕಾ ಕೇಂದ್ರದ ಮಾಲೀಕರು, ರೀಲಿಂಗ್ ತರಬೇತಿ ಪಡೆದ ನವ ಉದ್ಯಮಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ್ ರೇಷ್ಮೆ ಉಪನಿರ್ದೇಶಕ ಎಸ್.ಪ್ರಕಾಶ ಬಾಬು ಇಲಾಖಾ ಯೋಜನೆಗಳ ಬಗ್ಗೆ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದರು. ಕಲಬುರಗಿ ಹಾಗೂ ಬೀದರ್ ಜಿಲ್ಲೆ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗಗಳು ಉಪಸ್ಥಿತರಿದ್ದರು.


