ಪಂಚ ಗ್ಯಾರಂಟಿಗಳಂತೆ ಸರ್ಕಾರ ಮಧ್ಯ ನಿಷೇದ ಗ್ಯಾರಂಟಿ ಜಾರಿಗೆ ತರಲು ರೈತ ಸಂಘ ಒತ್ತಾಯ

ಯಾದಗಿರಿ:ಮದ್ಯಪಾನ ಮುಕ್ತ ರಾಜ್ಯ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿ ಮದ್ಯ ನಿಷೇಧ ಕಾಯ್ದೆ ಜಾರಿಗೆ ತರುವಂತೆ ರಾಜ್ಯ ರೈತ ಸಂಘ ಹಸಿರು ಸೇನೆ (ಕೂಡಿಹಳ್ಳಿ ಚಂದ್ರಶೇಖರ್ ಬಣದ) ರಾಜ್ಯ ಉಪಾಧ್ಯಕ್ಷೆ ಮಹಾದೇವಿ ಬೇವಿನಾಳ ಮಠ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಮಧ್ಯಪಾನದಿಂದ ಸಮಾಜ ಅವನತಿಯತ್ತ ಸಾಗುತ್ತಿದೆ ಯುವಕರೇ ಅತಿ ಹೆಚ್ಚು ಮಧ್ಯಪಾನ ಸೇವಿಸುತ್ತಿರುವುದರಿಂದ ಅದೆಷ್ಟೋ ಕುಟುಂಬಗಳು ಬೀದಿಪಾಲು ಆಗುವುದರ ಜೊತೆಗೆ ಕುಡಿತದಿಂದ ತಮ್ಮ ಆರೋಗ್ಯ ಹಾಳಾಗಿ ಯುವಕರ ಸಾವಿನ ಸಂಖ್ಯೆ ಹೆಚ್ಚಾಗುತ್ತಿವೆ ಎಂದಿದ್ದಾರೆ.ಈಗಾಗಲೇ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿಗಳ ರೀತಿಯಲ್ಲಿ ಸರ್ಕಾರ ಮಧ್ಯಪಾನ ನಿಷೇಧ ಗ್ಯಾರಂಟಿ ಯೋಜನೆ ಜಾರಿಗೆ ಮುಂದಾಗಬೇಕು ಸರ್ಕಾರದ  ಗ್ಯಾರಂಟಿ ಯೋಜನೆಗಳಿಗಿಂತ ಮಹಿಳೆಯರಿಗೆ ಮಧ್ಯಪಾನ ನಿಷೇಧದ ಅವಶ್ಯಕತೆ ತುಂಬಾ ಇದೆ ಅದೆಷ್ಟೋ ಮಹಿಳೆಯರು ದಿನನಿತ್ಯ ನರಕಯಾತನೇ ಅನುಭವಿಸುತ್ತಿದ್ದಾರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಭಿವೃದ್ಧಿ ನೆಪದಲ್ಲಿ ಮಧ್ಯ ಮಾರಾಟ ಹೆಚ್ಚುಗೊಳಿಸಿ ಸರಕಾರಕ್ಕೆ ಆದಾಯ ಹೆಚ್ಚು ಮಾಡುವಂತೆ ಅಬಕಾರಿ ಇಲಾಖೆಗೆ ಸರ್ಕಾರಗಳು ಒತ್ತಡ ಹಾಕುತ್ತಿರುವುದು ಸರಿಯಲ್ಲ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಮಾತ್ರ ಮದ್ಯಪಾನ ನಿಷೇಧ ಕುರಿತು ಸದನದಲ್ಲಿ ಒಂದು ಬಾರಿಯಾದರೂ ಯಾರು ಚರ್ಚೆ ಮಾಡದಿರುವುದು ದುರಾದೃಷ್ಟಕರ ಕಳೆದ ಕೆಲವು ವರ್ಷಗಳ ಹಿಂದೆ ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮಧ್ಯಪಾನ ನಿಷೇಧ ಮಾಡುವಂತೆ ಒತ್ತಾಯಿಸಿ ರಾಯಚೂರಿನಿಂದ ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ಒಕ್ಕೂಟದಿಂದ ಸಾವಿರಾರು ಮಹಿಳೆಯರು ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಿ ಮನವಿ ಸಲ್ಲಿಸಿದರು ಕೂಡಾ ಸರ್ಕಾರಗಳು ಸ್ಪಂದಿಸಿಲ್ಲ ಇದು ದುಃಖದ ಸಂಗತಿಯಾಗಿದೆ. ಬೆಳಗಾವಿಯಲ್ಲಿ ಈಗಾಗಲೇ ಅಧಿವೇಶನ ಆರಂಭವಾಗಿದ್ದು ಸಿಎಂ, ಡಿಸಿಎಂ, ಸಚಿವರು ಶಾಸಕರು ಮಧ್ಯಪಾನ ನಿಷೇಧ ಮಾಡುವ ಬಗ್ಗೆ ಚರ್ಚೆ ಮಾಡಿ ಮಧ್ಯ ನಿಷೇಧಕ್ಕೆ ಕ್ರಮ ಕೈಗೊಳ್ಳಬೇಕು ಒಂದು ವೇಳೆ ನಿರ್ಲಕ್ಷ ವಹಿಸಿದ್ದಲ್ಲಿ ರಾಜ್ಯ ರೈತ ಸಂಘದ ವತಿಯಿಂದ ರಾಜ್ಯದ್ಯಂತ ಉಗ್ರ ಹೋರಾಟ ಮಾಡುವುದಾಗಿ ಅವರು ಸರ್ಕಾರಕ್ಕೆ ಎಚ್ಚರಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!