ಜಾನಪದ ಕಲಾವಿದರ ಸಂಭ್ರಮ : ಜಾನಪದ ಕಲೆಗಳನ್ನು ಉಳಿಸಿ

ಕೆಂಭಾವಿ : ನಮ್ಮ ಪೂರ್ವಜರು ತಲೆಮಾರುಗಳಿಂದ ಉಳಿಸಿಕೊಂಡು ಬಂದಿರುವ ಜಾನಪದ ಕಲೆಗಳನ್ನು, ಹಾಡುಗಳನ್ನು, ನೃತ್ಯಗಳನ್ನು ಮತ್ತು ಕಥೆಗಳನ್ನು ಸಂರಕ್ಷಿಸುವುದು ನಮ್ಮ ಮೊದಲ ಉದ್ದೇಶವಾಗಿರಬೇಕು. ಈ ಕಲೆಗಳು ನಮ್ಮ ನಾಡಿನ ಇತಿಹಾಸ ಮತ್ತು ಬದುಕಿನ ಮೌಲ್ಯಗಳನ್ನು ಪ್ರತಿಬಿಂಬಿಸುತ್ತವೆ.​ ಗ್ರಾಮೀಣ ಭಾಗದಲ್ಲಿ ಯಾವುದೇ ಪ್ರಚಾರವಿಲ್ಲದೆ, ಕೇವಲ ಕಲೆಯ ಮೇಲಿನ ಪ್ರೀತಿಯಿಂದಲೇ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ನಮ್ಮ ಕಲಾವಿದರನ್ನು ಗುರುತಿಸಿ, ಅವರಿಗೆ ಗೌರವ ಮತ್ತು ಪ್ರೋತ್ಸಾಹ ನೀಡಬೇಕು ಎಂದು ಶ್ರೀ ವೆಂಕಟೇಶ್ವರ ಶಿಕ್ಷಣ ಮತ್ತು ಗ್ರಾಮೀಣಾಭಿರುದ್ಧಿ ಸಂಸ್ಥೆ, (ಬೈಚಬಾಳ) ಅಧ್ಯಕ್ಷ ಗುರುನಾಥ ಬ್ಯಾಕೋಡ್ ತಿಳುಸಿದರು.

ಪಟ್ಟಣದ ಪರಸನಹಳ್ಳಿ ಗ್ರಾಮದ ವರಹಳ್ಳಿರಾಯ ದೇವಸ್ಥಾನ ಆವರಣದಲ್ಲಿ ಶ್ರೀಲಕ್ಷ್ಮೀ ವೆಂಕಟೇಶ್ವರ ಶಿಕ್ಷಣ ಮತ್ತು ಗ್ರಾಮೀಣಾಭಿರುದ್ಧಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ” ನುಡಿ-ಸಂಸ್ಕೃತಿ ಉಳಿಸಿ ಬೆಳೆಸಬೇಕು ಹಾಗೂ ಜನಪದ ಕಲಾವಿದರ ಸಂಭ್ರಮ” ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದವರು.

ಕಲೆಯು ಬದುಕಿನ ಕಷ್ಟಗಳನ್ನು ಮರೆಸಿ, ಹೊಸ ಚೈತನ್ಯವನ್ನು ತುಂಬುತ್ತದೆ. ಈ ವೇದಿಕೆಯ ಮೂಲಕ ನಾವೆಲ್ಲರೂ ಒಟ್ಟಾಗಿ ನಮ್ಮ ಜಾನಪದದ ಸೌಂದರ್ಯವನ್ನು ಆಸ್ವಾದಿಸಿ, ಒಂದು ದಿನವನ್ನು ಸಂತಸ ಮತ್ತು ಸಂಭ್ರಮದಿಂದ ಕಳೆಯುವುದಾಗಿದೆ. ನಮ್ಮ ಯುವ ಪೀಳಿಗೆಗೆ ಈ ಕಲೆಗಳ ಮಹತ್ವವನ್ನು ತಿಳಿಸಿ, ಅವರನ್ನು ಜಾನಪದದತ್ತ ಆಕರ್ಷಿಸಬೇಕು. ಅವರು ಈ ಕಲೆಗಳನ್ನು ಮುಂದಕ್ಕೆ ಕೊಂಡೊಯ್ಯುವ ಸೇತುವೆಯಾಗಬೇಕು ಎಂದು ಹೇಳಿದರು.

ಈ ಸಂಧರ್ಭದಲ್ಲಿ ಶ್ರೀನಿವಾಸ. ಕೆ, ಹಣಮಂತ ದೊರನಹಳ್ಳಿ, ಪುಂಡಲೀಕ ಯಮನಪ್ಪ ಹೂಗಾರ, ನಿಂಗಪ್ಪ ಭಜಂತ್ರಿ, ಗಿರೆಪ್ಪ ಹೂಗಾರ, ಬಸವರಾಜ್ ಹೂಗಾರ್, ಪರಶುರಾಮ್. ಎಸ್, ಗುರಪ್ಪ ನಾಯ್ಕೋಡಿ ಇದ್ದರು. ಕಲಾವಿದರು ವಿವಿಧ ಕಲೆಗಳನ್ನು ಪ್ರದರ್ಶನ ನೀಡಿದರು.

Leave a Reply

Your email address will not be published. Required fields are marked *

error: Content is protected !!