ಸಿದ್ದರಾಮಯ್ಯನವರು ಸಿಎಂ ಆಗಿ ಮುಂದುವರೆಯಲಿ ಎಂದು ದೇವರ ಮೋರೆ ಹೋದ ಅಭಿಮಾನಿಗಳು

ಕಲಬುರಗಿ: ರಾಜ್ಯದ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯನವರು ಮುಂದುವರೆಯಲಿ ಅಂತಾ ಕಲಬುರಗಿಯ ಸುಪ್ರಸಿದ್ಧ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ 101 ತೆಂಗಿನಾ ಕಾಯಿ ಒಡೆದು ಅಭಿಮಾನಿಗಳಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.

ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಐದು ವರ್ಷ ಸಿಎಂ ಆಗಿ ಮುಂದುವರೆಯಬೇಕು ಅಂತಾ ಸಿದ್ದರಾಮಯ್ಯನವರ ಅಭಿಮಾನಿ ಬಳಗದಿಂದ ಡೊಳ್ಳು ಬಾರಿಸಿ ತೆಂಗಿನಕಾಯಿ ಒಡೆದು ಹೊಡೆದು ವಿಶೇಷ ಪೂಜೆ ಸಲ್ಲಿಸಿದರು. ಸಿಎಂ ಸಿದ್ದರಾಮಯ್ಯನವರು ರಾಜ್ಯದ ಜನರಿಗೆ ಸಾಕಷ್ಟು ಜನಪರ ಯೋಜನೆ ನೀಡಿದ್ದಾರೆ ಅವರೆ ಸಿಎಂ ಆಗಿ ಮುಂದುವರೆಯಬೇಕು. ಎಂದು ಅಭಿಮಾನಿಗಳು ಅವರ ಘೋಷಣೆ ಕೂಗಿದರು.

Leave a Reply

Your email address will not be published. Required fields are marked *

error: Content is protected !!