ಕಲಬುರಗಿ : ರಾಯಚೂರ ಜಿಲ್ಲೆಯಲ್ಲಿ ನಡೆದ ವಿಭಾಗ ಮಟ್ಟದ ಕ್ರಿಕೆಟ್ ಕ್ರೀಡಾಕೂಟದಲ್ಲಿ ಚಿತ್ತಾಪುರ ಪಟ್ಟಣದ ಬೆಥನಿ ಪ್ರೌಢಶಾಲೆಯ ಅಲೋಕಿ ಅವಾನಿ ಅಂಬಿಕಾ ಭೂಮಿಕಾ ನಂದಿನಿ ವಿದ್ಯಾಥಿ೯ನಿಯರು ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅದೇ ರೀತಿಯಾಗಿ ಭೂಮಿಕಾ ಎಂಬ ವಿದ್ಯಾಥಿ೯ನಿ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು, ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ . ಬೆಥನಿ ಪ್ರೌಢಶಾಲೆಯ ವಿದ್ಯಾಥಿ೯ನಿಯರ ಸಾಧನೆ ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ವಿಷಯಕ್ಕೆ . ವಿದ್ಯಾಥಿ೯ನಿಯರ ಸಾಧನೆಗೆ ಬೆಥನಿ ಪ್ರೌಢಶಾಲೆ ಮುಖ್ಯ ಗುರುಗಳು ಸಿಸ್ಟರ್ ಕವಿತಾ ಬಿ.ಎಸ್ ಅವರು ಹರ್ಷ ವ್ಯಕ್ತಪಡಿಸಿದರು. ತರಬೇತಿ ನೀಡಿದ ದೈಹಿಕ ಶಿಕ್ಷಕ ವಿಶ್ವನಾಥ ಕುಂಬಾರ ಹಾಗೂ ಶಿಕ್ಷಕಿರಾದ ಅರ್ಚನಾ, ದೇವಪ್ಪ , ನಿಕತ್ ಮಿಸ್, ಸುಷ್ಮಾ , ಸವಿತಾ, ನಿವೇದಿತಾ ಸೇರಿದಂತೆ ಮೊದಲಾದವರು ಉಪಸ್ಥಿದರು
ಚಿತ್ತಾಪುರ ಬೆಥನಿ ಪ್ರೌಢಶಾಲೆಯ ವಿದ್ಯಾಥಿ೯ನಿಯರ ಸಾಧನೆ


