ಶಹಾಪುರ: ಕನಕದಾಸರನ್ನು ನಾವು ಪೂಜ್ಯ ಸಂತ ಮತ್ತು ತತ್ವಜ್ಞಾನಿಯಾಗಿ ನೋಡುತ್ತೇವೆ. ಕನಕದಾಸರ ಜೀವನ ಬೋಧನೆಗಳು, ಕೀರ್ತನೆಗಳು ಇಂದಿಗೂ ಲಕ್ಷಾಂತರ ಜನರಿಗೆ ಮಾರ್ಗದರ್ಶನ ಹಾಗೂ ಸ್ಪೂರ್ತಿಯಾಗಿದೆ. ದಾಸಶ್ರೇಷ್ಠರೆಂದೇ ಕರೆಯಲಾಗುವ ಶ್ರೀಕೃಷ್ಣ ಪರಮಾತ್ಮನ ಪರಮ ಭಕ್ತರಾದ ಕನಕದಾಸರ ಜನ್ಮ ದಿನವನ್ನು ನಾವು ಕನಕದಾಸ ಜಯಂತಿ ಎಂದು ಆಚರಿಸುತ್ತೇವೆ.ಎಂದು ಶಾಲೆಯ ಮುಖ್ಯ ಗುರುಗಳಾದ ಪೂರ್ಣಚಂದ್ರ ಕಟ್ಟಿಮನಿವರು ವಿದ್ಯಾರ್ಥಿಗಳಿಗೆ ಹೇಳಿದರು.
ನಗರದ ಆದಿಲ್ ಪುರದಲ್ಲಿ ಇರುವ ಆದರ್ಶ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಫಲಪುಷ್ಪ ಸಮರ್ಪಿಸಿ ಮಾಲಾರ್ಪಣೆ ಮಾಡುವವರೊಂದಿಗೆ ಜಯಂತಿ ನೆರವೇರಿಸಿ ಮಾತನಾಡಿದ. ಅವರು ಕನಕದಾಸರು ಓರ್ವ ಮಹಾನ್ ಹರಿದಾಸ ಸಂತ, ತತ್ವಜ್ಞಾನಿ ಹಾಗೂ ಕೀರ್ತನಾಗಾರರಾಗಿದ್ದರು. ಅವರು ಕರ್ನಾಟಕದಲ್ಲಿ ಭಕ್ತಿ ಚಳುವಳಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕನಕದಾಸರ ಕೀರ್ತನೆಗಳು ಎಂದು ಕರೆಯಲ್ಪಡುವ ಅವರ ಕೀರ್ತನೆಗಳು, ಭಕ್ತಿ ಸಂಯೋಜನೆಗಳು ಸಮಾಜವನ್ನು ಪ್ರೇರೇಪಿಸುತ್ತಿವೆ ಮತ್ತು ಉನ್ನತಿಗೊಳಿಸುತ್ತಿವೆ. ಆದರೆ ಕನಕದಾಸರ ಜೀವನವನ್ನು ಬದ್ಧತೆ, ಸಾಮಾಜ ಸುಧಾರಣೆ ಮತ್ತು ಸಾಹಿತ್ಯ ಪ್ರತಿಭೆಯ ಸಾಕಾರವಾಗಿ ನೋಡಲಾಗುತ್ತದೆ. ಕನಕದಾಸರ ಜಯಂತಿಯನ್ನು ಅವರ ಜೀವನ ಮತ್ತು ಅವರ ಕೊಡುಗೆಯನ್ನು ಗೌರವಿಸಲು ಆಚರಿಸಲಾಗುತ್ತದೆ. ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. . ಎಂದು ಕನಕದಾಸರ ಜೀವನ ಚರಿತ್ರೆ ಮಕ್ಕಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕೀಯರಾದ ಹರಿಫ್ ಬೇಗಂ, ಅನಿಸ್ ಫಾತಿಮಾ, ಸಹನಾ ಸುಲ್ತಾನ್, ಉಮಾ ಸಿ ಕಟ್ಟಿಮನಿ, ಶೀಪಾ ಜುನೆಯದಿ ಸೇರಿದಂತೆ ಇತರರು ಉಪಸ್ಥಿತಿದರು


