ಜವಾಬ್ದಾರಿಯುತ ವಕೀಲರಾಗಿ ಹೊರಹೊಮ್ಮಬೇಕು

ಕಲಬುರಗಿ: ಭಾರತೀಯ ಸಂವಿಧಾನ ಜೀವಂತ ಗ್ರಂಥವಾಗಿದ್ದು, ಪ್ರತಿಯೊಬ್ಬರಿಗೂ ಗೌರವದಿಂದ ಬದುಕುವ ಹಕ್ಕು ನೀಡಿದೆ. ಕಾನೂನು ವದವಿ ವಡೆದ ನಂತರ ವಿದ್ಯಾರ್ಥಿಗಳು ವೃತ್ತಿವರತೆ ಮೈಗೂಡಿಸಿಕೊಳ್ಳ ಬೇಕು. ಸಮಾಜ ನಿರೀಕ್ಷಿಸುವ ಜವಾಬ್ದಾರಿಯುತ ವಕೀಲರಾಗಿ ಹೊರಹೊಮ್ಮಬೇಕು ಎಂದು ಭಾರತೀಯ ಕಾನೂನು ಆಯೋಗದ ಅಧ್ಯಕ್ಷರು, ಸುಪ್ರೀಂ ಕೋರ್ಟ್ನ ವಿಶ್ರಾಂತ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹೇಳಿದರು.
ನಗರದ ಲಾಹೋಟಿ ನಗರದ ಸೇರ್ ಶಂಕರಲಾಲ್ ಕಾನೂನು ಕಾಲೇಜಿಗೆ ೬೫ ವರ್ಷ ತುಂಬಿದ ಪ್ರಯುಕ್ತ ಕಾಲೇಜಿನ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ‘ಜ್ಞಾನದ ಮುತ್ತುಗಳು’ ವಿಶೇಷ ಉಪನ್ಯಾಸ ಹಾಗೂ ಕಾ ನೂನು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾನೂನು ವೃತ್ತಿಗೆ ಅವಶ್ಯಕವಾಗಿರುವ ಕೌಶಲ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು. ಸಮಾಜಕ್ಕೆ ಉತ್ತಮವಾದದ್ದನ್ನು ಮಾಡಬೇಕು ಎಂದರು. ಈ ಕಾಲೇಜಿಗೆ ಭೇಟಿ ನೀಡಿದ್ದಕ್ಕೆ ಖುಷಿಯಾಗಿದೆ.
ಈ ಕಾಲೇಜಿನ ಹಳೆಯ ವಿದ್ಯಾರ್ಥಿ ನ್ಯಾ.ಶಿವರಾಜ ಪಾಟೀಲರು ನನ್ನ ಗುರು, ಮಾರ್ಗದರ್ಶಕರಾಗಿದ್ದರು. ಅವರು ರಾಜಸ್ಥಾನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದಾಗ ನಾನು ಅಲ್ಲಿ ವಕೀಲನಾಗಿದ್ದೆ. ಈ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯ, ಎಚ್‌ಕೆಇ ಸಂಸ್ಥೆಯ ಅಧ್ಯಕ್ಷ ಶಶೀಲ್ ಜಿ.ನಮೋಶಿ ಮಾತನಾಡಿ, ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಎರಡು ದಶಕ ನ್ಯಾಯಮೂರ್ತಿಗಳಾಗಿ ಕೆಲಸ ಮಾಡಿದ್ದಾರೆ. ಇಡಬ್ಲ್ಯೂಎಸ್‌ನಂತ ಮಹತ್ವದ ತೀರ್ವುಗಳನ್ನು ನೀಡಿದ್ದಾರೆ. ಇಡಬ್ಲ್ಯೂಎಸ್ ಸಮರ್ವಕ ಜಾರಿಗೆ ಆಗ್ರಹಿಸಿ ನಾನೂ ವಿಧಾನ ಪರಿಷತ್‌ನಲ್ಲಿ ಧ್ವನಿ ಎತ್ತಿದ್ದೆ ಎಂದು ಹೇಳಿದರು. ನ್ಯಾ.ದಿನೇಶ್ ಮಹೇಶ್ವರಿ ಅವರ ಪತ್ನಿ ಸುಮನ್ ಮಹೇಶ್ವರಿ, ಅನೀಲಕುಮಾರ ಎಸ್.ಮರಗೋಳ, ನಾಗಣ್ಣ ಘಂಟಿ, ಅಮಿತ್‌ಕುಮಾರ ದೇಶವಾಂಡೆ, ಪ್ರಾಧ್ಯಾಪಕ ನರೇಂದ್ರ ಬಡಶೇಷಿ ಹಾಗೂ ವಿದ್ಯಾರ್ಥಿಗಳು ಇದ್ದರು. ಪ್ರಾಚಾರ್ಯರಾದ ಡಾ.ಮಹೇಶ್ವರಿ ಸ್ವಾಗತಿಸಿದರು. ವಿದ್ಯಾರ್ಥಿನಿ ನಿರೂಪಿಸಿದರು. ಕಾಲೇಜಿನ ಹಿರೇಮಠ ವೈಷ್ಣವಿ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!