ಕಲಬುರಗಿ -ವಿಶ್ವಬ್ಯಾಂಕ್ ನೆರವಿನ ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆ (ಕುಸ್ಸೆಂಫ್) ಅಡಿಯಲ್ಲಿ ಕಲಬುರಗಿ ನಗರದಲ್ಲಿ 24X7 ನಿರಂತರ ನೀರು ಸರಬರಾಜು ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಬುಧವಾರ ವಾರ್ಡ್ ನಂ.5, 6 ಮತ್ತು 23 ಜೋನ್ ನಂ. 38ಎ ರಲ್ಲಿ ಮ್ಯಾಪಿಂಗ್ ಸಮೀಕ್ಷೆಗೆ ಕಲಬುರಗಿ ಮಹಾನಗರ ಪಾಲಿಕೆಯ ಚುನಾಯಿತ ಸದಸ್ಯರಾದ ದಿಗಂಬರ ನಾಡಗೌಡ, ಅರುಣಾಬಾಯಿ ಹಾಗೂ ಗಂಗಮ್ಮ, ಬಸವರಾಜ ಮೂನಹಳ್ಳಿ ಅವರು ಮಂಗಳವಾರ ಚಾಲನೆ ನೀಡಿದರು.
ಈ ಜೋನ್ನಲ್ಲಿ ಮೂನಿಮ್ಮ ಸಂಘ, ಗಾಂಧಿನಗರ, ಸಂಜಯನಗರ, ಭವಾನಿ ನಗರ, ಚನ್ನವೀರ ನಗರ, ಇತ್ಯಾದಿಗಳ ಏರಿಯಾಗಳಲ್ಲಿ ಮ್ಯಾಪಿಂಗ್ ಸರ್ವೆ (Mapping Survey) ಮಾಡಲಾಗುತ್ತದೆ. ಅಂದಾಜು 2558 ಮನೆಗಳ ಸಮೀಕ್ಷೆ ಕೈಗೊಳ್ಳಬಹುದಾಗಿದೆ ಎಂದು ಮೆ|| ಎಲ್ & ಟಿ ಕಂಪನಿಯ ಸಮಾಜಿಕ ತಜ್ಞರಾದ ಲಿಂಗರಾಜ್ ಹೀರಾ ರವರು ತಿಳಿಸಿದರು.
ಈ ಯೋಜನೆಯಡಿ ನಗರದಲ್ಲಿರುವ ಪ್ರತಿ ಮನೆಗೆ ನಳ ಸಂಪರ್ಕ ಒದಗಿಸುವ ಗುರಿ ಹೊಂದಿದೆ. ಇದಕ್ಕಾಗಿ ನಳ ಸಂಪರ್ಕದ ಪೂರ್ವದಲ್ಲಿ ಗ್ರಾಹಕರ-ನೀರು ಬಳಕೆದಾರರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ನಗರದಲ್ಲಿರುವ 55 ವಾರ್ಡಗಳನ್ನು 47 ಜೋನಗಳಾಗಿ ಹಾಗೂ 64 ಡಿಎಮ್ಎ (DMA) ಗಳಾಗಿ ವಿಂಗಡಿಸಲಾಗಿದೆ. ಪ್ರತಿ ಜೋನನ್ನು ಪ್ರತ್ಯೇಕವಾಗಿ ಮ್ಯಾಪಿಂಗ್ ನೀರು ಸರಬರಾಜು ಕ್ಷೇತ್ರದ ಸಮೀಕ್ಷೆ ಮಾಡಲಾಗುತ್ತಿದೆ.
ಈ ಮ್ಯಾಪಿಂಗ್ ಸಮೀಕ್ಷೆ ಸಂದರ್ಭದಲ್ಲಿ ಈ ಜೋನ್ನಲ್ಲಿ ಬರುವ ಎಲ್ಲಾ ಗ್ರಾಹಕರ ಹಾಗೂ ಆಸ್ತಿಗಳ ಸಮೀಕ್ಷೆಯನ್ನು ಗಣಕಯಂತ್ರದ (ಟ್ಯಾಬ್) ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅದೇ ರೀತಿ ಈ ಜೋನ್ನಲ್ಲಿರುವ ಅಧೀಕೃತ ನಳ ಸಂಪರ್ಕ ಹೊಂದಿದ ಗ್ರಾಹಕರ, ಅನಧೀಕೃತ ನಳ ಸಂಪರ್ಕದ ಗ್ರಾಹಕರ, ಹೊಸ ಸಂಪರ್ಕ ಹೊಂದುವ ಗ್ರಾಹಕರ ಹಾಗೂ ನಳ ಸಂಪರ್ಕಗಳ ವಿಧಗಳು, ಗೃಹ ಬಳಕೆಗಾಗಿ ಗೃಹೇತರ ಬಳಕೆಗಾಗಿ ಹಾಗೂ ವಾಣಿಜ್ಯ ಬಳಕೆಗಾಗಿ ವಿಂಗಡಿಸಿದ ಆ ಜೋನ್ನಲ್ಲಿ ಇರುವ ನೀರು ಬಳಕೆದಾರರ ಸ್ಪಷ್ಟವಾದ ಮಾಹಿತಿ ಸಹ ಸಂಗ್ರಹಿಸಲಾಗುತ್ತಿದೆ. ಅದೇ ರೀತಿ ನಳ ಸಂಪರ್ಕದ ದಾಖಲಾತಿಗಳನ್ನು ಒದಗಿಸುವಂತೆ ಮಾಹಿತಿ ಸಹ ನೀಡಲಾಗುತ್ತಿದೆ ಎಂದು ನೆರವು ಸರ್ಕಾರೇತರ ಸಂಸ್ಥೆಯ ತಂಡದ ನಾಯಕರಾದ ಕೋಟ್ರಯ್ಯ ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಯೋಜನಾ ಅನುಷ್ಠಾನ ಘಟಕದ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಸ್.ವಾಯ್. ಸಾಲಿಮನಿ, ಸಾಮಾಜಿಕ ಅಭಿವೃದ್ಧಿ ಅಧಿಕಾರಿ ನಾಗಯ್ಯಾ ಹೀರೆಮಠ, ಮೆ|| ಸ್ಮೆಕ್ ಕನ್ಸಲ್ಟೇನ್ಸಿಯ ಸಮಾಜಿಕ ತಜ್ಞರಾದ ಯುವರಾಜ್ ಕಟ್ಟಿಮನಿ, ಎಲ್ ಆಂಡ್ ಟಿ ಕಂಪನಿ ಸಾಮಾಜಿಕ ತಜ್ಞರಾದ ಲಿಂಗರಾಜ ಆಳಂದ, ಚಂದ್ರಶೇಖರ ಹಾಗೂ ಸರ್ಕಾರೇತರ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.


