31 ರಂದು ಶ್ರೀ ಆಸ್ಪತ್ರೆ ಉದ್ಘಾಟನೆ

ಕಲಬುರಗಿ: ನಗರದ ಹಳೆ ಜೇವರ್ಗಿ ರಸ್ತೆಯಲ್ಲಿ ನೂತನವಾಗಿ ನಿರ್ಮಾಣ ವಾಗಿರುವ ೩೦ ಹಾಸಿಗೆಯುಳ್ಳ ‘ಶ್ರೀ ಆಸ್ಪತ್ರೆ’ಯು ಅ.೩೧ರಂದು ಸಂಜೆ ೫-೩೦ಗಂಟೆಗೆ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಆಸ್ಪತ್ರೆಯ ಚೇರಮನ್‌ರಾದ ಮಕ್ಕಳ ತಜ್ಞರಾದ ಡಾ. ಸಚೀನ ಎಸ್.ಬಿ ಹಾಗೂ ಸ್ರೀ ರೋಗ ತಜ್ಞರಾದ ಡಾ. ಶ್ವೇತಾನಿದಿ ಅವರು ಜಂಟಿಯಾಗಿ ತಿಳಿಸಿದರು.
ನಗರದ ಹಳೆ ಜೇವರ್ಗಿ ರಸ್ತೆಯಲ್ಲಿರುವ ಈಜಿ ಬೈ ಹತ್ತಿರ ಶ್ರೀ ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಪ್ರಾರಂಭದಲ್ಲಿ ೧೦ ಹಾಸಿಗೆ ಉಳ್ಳ ಆಸ್ಪತ್ರೆಯ ಪ್ರಾರಂಬಿಸಿದ ಆಸ್ಪತ್ರೆಯು ಸಾರ್ವಜನಿಕರ ಸಹಕಾದಿಂದ ಮತ್ತು ಉತ್ತಮ ಸೇವೆ ಒದಗಿಸುತ್ತಾ ಬಂದಿದೆ ಎಂದು ತಿಳಿಸಿದರು.
ಅ. ೩೧ರಂದು ಸಂಜೆ ೫-೩೦ಗಂಟೆಗೆ ನಡೆಯಲಿರುವ ಶ್ರೀ ಆಸ್ಪತ್ರೆಯನ್ನು ಕಲಬುರಗಿ ಜಿಲ್ಲಾ ಉಸ್ತುವಾರಿ ಮತ್ತು ಐಟಿಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆಯವರು ಉದ್ಘಾಟನೆ ಮಾಡುವರು. ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದರಾದ ರಾಧಾಕೃಷ್ಣ ದೊಡ್ಡಮನಿ, ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ, ಸಣ್ಣ ಕೈಗಾರಿಕೆ ಸಚಿವರಾದ ಶರಣಬಸಪ್ಪ ದರ್ಶನಾಪೂರ, ಶಾಸಕರಾದ ಕನೀಜ್ ಫಾತೀಮಾ, ಕೆಕೆಆರ್‌ಡಿಬಿ ಅಧ್ಯಕ್ಷರಾದ ಡಾ. ಅಜಯಸಿಂಗ್, ಶಾಸಕರಾದ ಅಲ್ಲಮಪ್ರಭು ಪಾಟೀಲ, ಎಂ.ವೈ, ಪಾಟೀಲ್, ಬಸವರಾಜ ಮತ್ತಿಮಡು, ಡಾ. ಅವಿನಾಶ ಜಾಧವ, ತಿಪ್ಪಣಪ್ಪ ಕಮಕನೂರ, ಶಶೀಲ ನಮೋಶಿ, ಜಗದೇವ ಗುತ್ತೇದಾರ, ಬಿ.ಜಿ. ಪಾಟೀಲ, ಕುಡಾ ಚೇರ್ಮನ್ ಮಜರ್ ಅಲಮ್ ಖಾನ್, ಜಿಲ್ಲಾದಿಕಾರಿ ಫೌಜಿಯಾ ತರನ್ನುಮ್, ನಗರ ಪೊಲೀಸ್ ಕಮಿಷನರ್ ಡಾ. ಶರಣಪ್ಪ ಎಸ್.ಡಿ, ಎಸ್ಪಿ ಅಡ್ಡೂರು ಶ್ರೀನಿವಾಸಲು ಅವರು ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆಂದು ಇದೆ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಡಾ. ಅನುರಾಧ ಅವರು ಮಾತನಾಡಿ ಪ್ರಸವ ಸಮಯದಲ್ಲಿ ತಾಯಿ ಮತ್ತು ಮಕ್ಕಳಿಗೆ ಬೇಕಾಗುವ ಎಲ್ಲಾ ಚಿಕಿತ್ಸೆ, ಮತ್ತು ಅವದಿಪೂರ್ವದಲ್ಲಿ ಜನಿಸಿದ ಮಕ್ಕಳಿಗೆ ಗುಣಮಟ್ಟದ ಚಿಕಿತ್ಸೆಂiÀÆ ಸಹ ಲಭ್ಯವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ. ಮಧುಶ್ರೀ ದೇಶಪಾಂಡೆ ಗಂಗಾಣಿ, ಡಾ. ಅಕ್ಷತಾ ಭಿಮನ್ ಇದ್ದರು.

Leave a Reply

Your email address will not be published. Required fields are marked *

error: Content is protected !!