ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 29 ಖರೀದಿ ಕೇಂದ್ರ ಆರಂಭ

ಯಾದಗಿರಿ : 2025-26ನೇ ಸಾಲಿನ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಯಾದಗಿರಿ ಜಿಲ್ಲೆಯ ರೈತರಿಂದ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಹತ್ತಿ ಮದ್ಯಮ ಎಳೆ ಪ್ರತಿ ಕ್ವಿಂಟಾಲಗೆ 7,710 ರೂ.ಗಳ ಹಾಗೂ ಉದ್ದನೆ ಎಳ 8110 ರೂ.ಗಳಂತೆ ಪ್ರತಿ ಎಕರೆಗೆ 8.5 ಕ್ವಿಂಟಾಲ ಖರೀದಿಸಲು ಭಾರತೀಯ ಹತ್ತಿ ನಿಗಮ ಹುಬ್ಬಳ್ಳಿ ಖರೀದಿ ಏಜೇನ್ಸಿಯಾಗಿ ಯಾದಗಿರಿ ಜಿಲ್ಲೆಗೆ ನೇಮಿಸಲಾಗಿದೆ ಎಂದು ಯಾದಗಿರಿ ಜಿಲ್ಲಾ ಟಾಸ್ಕ್ ಫೋರ್ಸ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಶ್ರೀ ಹರ್ಷಲ್ ಭೋಯರ್ ಅವರು ಹೇಳಿದರು.  ಯಾದಗಿರಿ ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇತ್ತೀಚಿನ ನಡೆದ ಯಾದಗಿರಿ ಜಿಲ್ಲಾ ಟಾಸ್ಕ್ ಫೋರ್ಸ ಸಮಿತಿ ಅಧ್ಯಕ್ಷ ವಹಿಸಿ ಅವರು ಮಾತನಾಡಿದರು.

ಪ್ರಸ್ತುತ ಸಾಲಿನಲ್ಲಿ ರೈತರು ಅಂತರ್ಜಾಲದ ಪ್ಲೇ ಸ್ಟೋರ್‌ನಲ್ಲಿ ಕೀಸಾನ್ ಕಪಾಸ್ ಅಪ್ಲಿಕೇಶನ್ ಅನ್ನು ರೈತರು ಡೌನಲೋಡ್ ಮಾಡಿಕೊಂಡು ತಮ್ಮ ಹೆಸರು ಆಧಾರ್ ಹೆಸರು, ಪಹಣೆಯಲ್ಲಿ ಮತ್ತು ಭಿತ್ತನೆ ಕ್ಷೇತ್ರ (ನಿಖರವಾಗಿರುವಂತೆ) ನಮೂದಿಸಿ ದಾಖಲೆಗಳನ್ನು ಲಗತ್ತಿಸಿ, ಅಪ್ಲೋಡ್ ಮಾಡಬೇಕು, ಒಟ್ಟು 29 ಖರೀದಿ ಕೇಂದ್ರಗಳನ್ನು ಗುರುತಿಸಲಾಗಿರುತ್ತದೆ. ರೈತರು ತಾವು ಬೆಳೆದ ಹತ್ತಿಯನ್ನು ಭಾರತೀಯ ಹತ್ತಿ ನಿಗಮದ ಕೇಂದ್ರಗಳಲ್ಲಿ ಮಾರಾಟ ಮಾಡಿ ಲಾಭ ಪಡೆಯಲು ಜಿಲ್ಲೆಯ ರೈತರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!