ದೋರನಹಳ್ಳಿಯಲ್ಲಿ ಕಾಲೇಜು ಕನ್ಯಾ ಪ್ರೌಢಶಾಲೆ ಮಂಜೂರಿಗೆ ಸಚಿವರಿಗೆ ಮನವಿ

ಯಾದಗಿರಿ:ದೊರನಹಳ್ಳಿ ಗ್ರಾಮಕ್ಕೆ ಕನ್ಯಾ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜ್ ಮಂಜೂರು ಮಾಡುವಂತೆ ಒತ್ತಾಯಿಸಿ ಕಾಂಗ್ರೆಸ್ ಯುವ ಮುಖಂಡ ನಿಜಗುಣ ದೊರನಹಳ್ಳಿ ನೇತೃತ್ವದಲ್ಲಿ ಬೆಂಗಳೂರಿನ ಸದಾಶಿವ ನಗರದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಮದು ಬಂಗಾರಪ್ಪ ನವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸಲ್ಲಿಸಿ ಮಾತನಾಡಿದ ಅವರು ಯಾದಗಿರಿ ಜಿಲ್ಲೆ ಶಹಾಪೂರ ತಾಲೂಕಿನ ದೋರನಹಳ್ಳಿ ಗ್ರಾಮವು ಹೋಬಳಿ ಕೇಂದ್ರ ವಾಗಿದ್ದು ದೋರನಹಳ್ಳಿ ಗ್ರಾಮದಲ್ಲಿ ಐದು ಸರ್ಕಾರಿ ಪ್ರಾಥಮಿಕ ಶಾಲೆ ಒಂದು ಸರ್ಕಾರಿ ಪ್ರೌಢ ಶಾಲೆ ಇದ್ದು ಸರ್ಕಾರಿ ಪ್ರೌಢ ಶಾಲೆಯಲ್ಲಿ ಸುಮಾರು 700ಕ್ಕೂ ಹೆಚ್ಚು ಮಕ್ಕಳ ಸಂಖ್ಯೆ ಇದ್ದು ಈ ಶಾಲೆಯಲ್ಲಿ ಎ ಬಿ ಸಿ ತರಗತಿ ಮಾಡಿದ್ದಾರೆ ಮತ್ತು ಈ ಶಾಲೆಗೆ ಸುತ್ತಮುತ್ತಲಿನ ಗ್ರಾಮಗಳಿಂದ ಅಂದರೆ ಗುಂಡಳ್ಳಿ ಗುಂಡಳ್ಳಿ ತಾಂಡ ಇಬ್ರಾಹಿಂಪುರ ಹಬ್ಬಳ್ಳಿ ಹುರಸಗುಂಡಗಿ ಬಿದರಾಣಿ ಮತ್ತು ವಿವಿದ ಗ್ರಾಮಗಳಿಂದ ದಿನಾಲೂ ಮಕ್ಕಳು ದೊರನಹಳ್ಳಿ ಪ್ರೌಢ ಶಾಲೆಗೆ ಬರುತ್ತಿದ್ದು ಶೈಕ್ಷಣಿಕವಾಗಿ ತುಂಬಾ ತೊಂದರೆಯಾಗುತ್ತಿದೆ ಪ್ರೌಡ ಶಾಲೆ ಮುಗಿಸಿ ಮುಂದಿನ ವಿದ್ಯಾಬ್ಯಾಸ ಮಾಡಲು ಗ್ರಾಮದಿಂದ ದಿನಾಲು 300ಕ್ಕೂ ಹೆಚ್ಚು ಮಕ್ಕಳು ದೂರದ ಯಾದಗಿರಿ ಶಹಾಪೂರ ಸುರಪೂರಕ್ಕೆ ಹೋಗುತ್ತಿದ್ದು ಇದರಿಂದ ಮಕ್ಕಳಿಗೆ ಶೈಕ್ಷಣಿಕ ವಾಗಿ ತುಂಬಾ ತೊಂದರೆ ಅಗುತ್ತಿದ್ದು ಇದನ್ನು ತಾವುಗಳು ಗಂಭೀರವಾಗಿ ಪರಿಗಣಿಸಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ  ಶರಣಬಸಪ್ಪ ಗೌಡ ದರ್ಶನಾಪುರ ಹಾಗೂ ಗ್ರಾಮೀಣಾಭಿವೃದ್ಧಿ ಪಂಚಾಯತ್ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಯಾದಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಚನ್ನಾರಡ್ಡಿ ಪಾಟೀಲ್ ತುನ್ನೂರ ಮತ್ತು ರಾಯಚೂರು ಯಾದಗಿರಿ ಸಂಸದರಾದ ಜಿ. ಕುಮಾರ ನಾಯಕ ಅವರು ಈಗಾಗಲೇ ತಮಗೆ ಮನವಿ ಪತ್ರವನ್ನು ಕೂಡ ಕೊಟ್ಟಿದ್ದು ಕೂಡಲೇ ನಮ್ಮ ಮನವಿಗಳಿಗೆ ಸ್ಪಂದಿಸಿ ದೋರನಹಳ್ಳಿ ಗ್ರಾಮದಲ್ಲಿ ಕನ್ಯಾ ಪ್ರೌಢ ಶಾಲೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಮಂಜೂರು ಮಾಡುವಂತೆ ಶಿಕ್ಷಣ ಸಚಿವರಿಗೆ ಕಾಂಗ್ರೆಸ್ ಯುವ ಮುಖಂಡ ನಿಜಗುಣ ದೊರನಹಳ್ಳಿ ಮನವಿ ಸಲ್ಲಿಸಿದ್ದರು.ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅದ್ಯಕ್ಷಾದ ಸಾಯಿಬಣ್ಣ ಕೆಂಗುರಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷರು ಮತ್ತು ಪ್ರದೇಶ ಕಾಂಗ್ರೆಸ್ ಪ ಪಂ ವಿಭಾಗದ ರಾಜ್ಯದ ಪ್ರಧಾನ ಕಾರ್ಯದರ್ಶಿ ರಮೇಶ ದೊರಿ ಪ್ರದೇಶ ಕಾಂಗ್ರೆಸ್ ರಾಜ್ಯ ಹಿಂದುಳಿದ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಭಂಡಾರಿ ನಾಟೇಕರ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ವಿಭಾಗದ ಕಾರ್ಯದರ್ಶೀ ತಾಯಪ್ಪ ಯಾದವ್ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!