ಯಾದಗಿರಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ತಮ್ಮ ಸ್ವಕ್ಷೇತ್ರಕ್ಕೆ ಭೇಟಿ ನೀಡಿದ ಶರಣಪ್ಪ ಸಲಾದಪುರ ವಿವಿಧ ಮಠಗಳಿಗೆ ಭೇಟಿ ನೀಡಿ, ಮದ್ಯಪಾನ ಹಾಗೂ ಮಾದಕವಸ್ತುಗಳ ವಿರುದ್ಧ ಮಠಕ್ಕೆ ಭೇಟಿ ನೀಡುವ ಭಕ್ತರಲ್ಲಿ ಜಾಗೃತಿ ಮೂಡಿಸಲು, ಮಠಗಳು ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.
ಚರಬಸವೇಶ್ವರ ಗದ್ದುಗೆ ಸಂಸ್ಥಾನ ಮಠಕ್ಕೆ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾದ ಶರಣಪ್ಪ ಸಲಾದಪುರ ಅವರು ಭೇಟಿ ನೀಡಿ, ಶ್ರೀ ಶ್ರೀ ಶ್ರೀ ಪರಮಪೂಜ್ಯ ಬಸಯ್ಯ ತಾತ ಗದ್ದುಗೆ ಅವರ ಆಶೀರ್ವಾದವನ್ನು ಪಡೆದು, ಸನ್ಮಾನವನ್ನು ಸ್ವೀಕರಿಸಿದ ಬಳಿಕ ಮಠಮಾನ್ಯಗಳಿಗೆ ಭೇಟಿ ನೀಡುವ ಭಕ್ತರಿಗೆ ಶ್ರೀಗಳು ಹೆಚ್ಚಿನ ಮುತುವರ್ಜಿ ವಹಿಸಿ ಆಣೆಪ್ರಮಾಣವನ್ನು ಮಾಡಿಸುವ ಮೂಲಕ ಭಕ್ತರನ್ನು ಮದ್ಯಪಾನ ಸೇರಿ ನಾನಾ ವ್ಯಸನಗಳಿಂದ ಮುಕ್ತರನ್ನಾಗಿಸಬೇಕು. ಇದಲ್ಲದೆ ಜನರು ಸಹ ಸ್ವಯಂ ಜಾಗೃತರಾಗುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಬದ್ಧರಾಗೋಣ ಎಂದು ಮನವಿ ಮಾಡಿದರು. ಈ ವೇಳೆ, ಈ ಸಂದರ್ಭದಲ್ಲಿ ಶರಣು ಬಿ ಗದ್ದುಗೆ ಅವರು ಉಪಸ್ಥಿತರಿದ್ದರು.
ತಿಂಥಣಿ ಮಠಕ್ಕೆ ಭೇಟಿ ನೀಡಿ ಶ್ರೀ ಶ್ರೀ ಶ್ರೀ ಪರಮಪೂಜ್ಯ ಸಿದ್ದರಾಮಾನಂದಪುರಿ ಸ್ವಾಮಿಜೀ ಅವರ ಆಶೀರ್ವಾದವನ್ನು ಪಡೆದು ಸನ್ಮಾನವ ಸ್ವೀಕರಿಸಿ ಮಠಮಾನ್ಯಗಳಿಗೆ ಭೇಟಿ ನೀಡುವ ಭಕ್ತರಿಗೆ ಶ್ರೀಗಳು ಆಣೆಪ್ರಮಾಣವನ್ನು ಮಾಡಿಸುವ ಮೂಲಕ ಭಕ್ತರನ್ನು ಮದ್ಯಪಾನ ಸೇರಿ ನಾನಾ ವ್ಯಸನಗಳಿಂದ ಮುಕ್ತರನ್ನಾಗಿಸಬೇಕು. ಇದಲ್ಲದೆ ಜನರು ಸಹ ಸ್ವಯಂ ಜಾಗೃತರಾಗುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಬದ್ಧರಾಗೋಣ ಎಂದು ಮನವಿ ಮಾಡಿದರು.
ಗ್ರಾಮಸ್ಥರಿಂದ ಸನ್ಮಾನ:
ಪ್ರಪ್ರಥಮ ಬಾರಿಗೆ ತವರೂ ಕ್ಷೇತ್ರ ಶಹಾಪುರಕ್ಕೆ ಭೇಟಿ ನೀಡಿದ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರಾದ ಶರಣಪ್ಪ ಅವರನ್ನು ಪರಸನಹಳ್ಳಿ ಗ್ರಾಮದ ಹಿರಿಯ ಮುಖಂಡರು ಹಾಗೂ ಅಭಿಮಾನಿಗಳು ಸನ್ಮಾನಿಸಿದರು. ಬಳಿಕ ಪರಸನಹಳ್ಳಿ ಗ್ರಾಮದಲ್ಲಿ ಮದ್ಯಪಾನವನ್ನು ಸಂಪೂರ್ಣ ನಿಷೇಧ ಮಾಡುವುದಾಗಿ ಪ್ರಮಾಣ ಮಾಡಿದರು. ಅಲ್ಲದೇ ಸ್ಥಳೀಯ ಮುಖಂಡರುಗಳಾದ ನೀಲಕಂಠ ಬಡೀಗೆರ, ಬಾಬುರಾವ ಭೂತಾಳಿ, ಶಂಕರ ಸಿಂಗೆ,ಮಹಾದೇವ ದಿಗ್ಗಿ, ರಾಯಪ್ಪ ಸಾಲಿಮನಿ ಞನ್ನೂ ಹಿರಿಯ ಮತ್ತು ಯುವ ಮುಖಂಡರು ಹಾಗೂ ಅಭಿಮಾನಿಗಳು ಜೊತೆಗೂಡಿ ಸನ್ಮಾನಿಸಿದರು.


