gulbargametro

ಎಂ ಆರ್ ಎಂ ಸಿ ಯಲ್ಲಿ ಓರಿಯೆಂಟೆಶನ್ ಹಾಗೂ ವೈಟ್ ಕೊಟ್ ಸಮಾರಂಭ

ಕಲಬುರ್ಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 2025-26 ನೇ ಸಾಲಿನ ಎಂ ಬಿ ಬಿ ಎಸ್ ವಿದ್ಯಾರ್ಥಿಗಳಿಗೆ ಓರಿಯಂಟೆಶನ್ ಮತ್ತು ವೈಟ್ ಕೊಟ್ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭವನ್ನು ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ ಹಾಗೂ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ ಶರಣಗೌಡ ಪಾಟೀಲ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ವೈದ್ಯಕೀಯ ಮಹಾವಿದ್ಯಾಲಯದ ಸಂಚಾಲಕರು ಹಾಗೂ…

Read More

ಮೂಲಭೂತ ಸೌಕರ್ಯ ಹಾನಿ ಪ್ರಗತಿ ಪರಿಶೀಲನೆ

ಮೂಲಭೂತ ಸೌಕರ್ಯ ಹಾನಿ ಪ್ರಗತಿ ಪರಿಶೀಲನೆ ಕಲಬುರಗಿ, ಕಳೆದ ಆಗಸ್ಟ್ ಮತ್ತು ಸೆಪ್ಟೆಂಬರ್ ಮಾಹೆಯಲ್ಲಿನ ಭಾರಿ ಮಳೆ ಮತ್ತು ಭೀಮಾ ಪ್ರವಾಹದಿಂದ ಜಿಲ್ಲೆಯಾದ್ಯಂತ ಸಾಕಷ್ಟು ಮೂಲಸೌಕರ್ಯ ಹಾನಿಯಾಗಿದ್ದು, ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಬೇಕಾಗಿರುವುದರಿಂದ ಇಲಾಖಾವಾರು ಕೂಡಲೆ ಜಿಲ್ಲಾಡಳಿತಕ್ಕೆ ಸಮಗ್ರ ವರದಿ ಸಲ್ಲಿಸಬೇಕೆಂದು ಅಧಿಕಾರಿಗಳಿಗೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಸೂಚನೆ ನೀಡಿದರು. ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಜಿಲ್ಲೆಯಲ್ಲಿ ಭೀಮಾ ಪ್ರವಾಹದಿಂದ ಹಾಗೂ ಭಾರಿ ಮಳೆಯಿಂದ ಹಾನಿಯಾದ ಮೂಲಭೂತ ಸೌಕರ್ಯಗಳಾದ ರಸ್ತೆ, ಸೇತುವೆ, ಶಾಲೆ-ಅಂಗನವಾಡಿ,…

Read More

ಜನ್ಮ ದಿನಾಚರಣೆ;ರೋಗಿಗಳಿಗೆ ಹಣ್ಣು ಹಾಲು ವಿತರಣೆ

ಸುರಪುರ: ಜಯ ಕರ್ನಾಟಕ ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಕೆ.ಸಿ. ರಾಜಪ್ಪ (ಟೈಗರ್) ಅವರ 52ನೇ ಜನ್ಮದಿನದ ಅಂಗವಾಗಿ ಸುರಪುರ ತಾಲೂಕಾ ಘಟಕದ ವತಿಯಿಂದ ನಗರದ ತಾಲೂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು ಹಣ್ಣು ವಿತರಣೆ ಮಾಡಿ ಆಚರಿಸಲಾಯಿತು.. ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಮಲ್ಲಪ್ಪ ನಾಯಕ ಕಬಾಡಗೇರ ಮಾತನಾಡಿ, ಜಯಕರ್ನಾಟಕ ರಕ್ಷಣಾ ಸೇನೆ ಕೇವಲ ಹೋರಾಟ ಮಾತ್ರವಲ್ಲದೆ ಜನರಿಗೆ ಉಪಯೋಗವಾಗುವ ಸಾಮಾಜಿಕ ಕಾರ್ಯಗಳನ್ನೂ ಮಾಡುತ್ತದೆ ಎಂದರು. ಈ ಸಂದರ್ಭದಲ್ಲಿ ‌ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶರಣು ಬೈರಿಮಡ್ಡಿ, ತಾ.ಕಾರ್ಯಾಧ್ಯಕ್ಷ…

Read More

ವಿದ್ಯುತ್ ಶಾಕ್‍ಗೆ ಮೃತಪಟ್ಟ ರೈತ ಕುಟುಂಬಕ್ಕೆ ಶಾಸಕ ಆರ್.ವಿ.ಎನ್ ಪರಿಹಾರದ ಚೆಕ್ ವಿತರಣೆ

ಸುರಪುರ: ಹೊಲದಲ್ಲಿ ಕೆಲಸ ಮಾಡುವಾಗ ವಿದ್ಯುತ್ ತಂತಿ ತಗುಲಿ ಶಾಕ್‌ ನಿಂದ ಸಾವನಪ್ಪಿದ್ದ ರಂಗಂಪೇಟೆಯ ರೈತ ಸೋಮನಾಥ ಕುಟುಂಬಕ್ಕೆ ಸರಕಾರದ 5 ಲಕ್ಷ ರೂಪಾಯಿಗಳ ಪರಿಹಾರ ಧನದ ಚೆಕ್ ಶಾಸಕ ರಾಜಾ ವೇಣುಗೋಪಾಲ ನಾಯಕ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ವಿಠಲ್ ಯಾದವ್, ಮಲ್ಲಣ್ಣ ಸಾಹುಕಾರ ಮುಧೋಳ ,ದೊಡ್ಡ ದೇಸಾಯಿ , , ರಮೇಶ್ ಯಾದವ್, ವಾಸುದೇವ ಮಂಗಳೂರು,ನಾಗಪ್ಪ ದೇವರಗೋನಾಲ ಸೇರಿದಂತೆ ಮೃತ ರೈತನ ಕುಟುಂಬದವರಿದ್ದರು.

Read More

5 ವರ್ಷ CM ಯಾರು ಅನ್ನೋಂದು ಹೈಕಮಾಂಡ ತೀರ್ಮಾನ ಮಾಡುತ್ತಾರೆ | ಎಂ.ಬಿ ಪಾಟೀಲ

ಬೆಂಗಳೂರು : ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯನವರು ಮುಂದುವರಿಯುವುದು ಅಥವಾ ಬೇರೆ ಯಾರೇ ಮುಖ್ಯಮಂತ್ರಿ ಆಗುವುದು ಕಾಂಗ್ರೆಸ್ ಹೈಕಮಾಂಡ ಕೈಯಲ್ಲಿ ಹೊರತು ಸಚಿವ ಜಮೀರ ಅಹ್ಮದ ಖಾನ್ ಅಥವಾ ನನ್ನ ಕೈಯಲ್ಲಿ ಇಲ್ಲ ಎಂದು ಸಚಿವ ಎಂಬಿ ಪಾಟೀಲ ಅವರು ಹೇಳಿದರು. ಅವರು ಸುದ್ದಿಗಾರರೊಂದಿಗೆ ಮಾತನಾಡಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪಷ್ಟವಾಗಿ ಹೇಳಿದ್ದಾರೆ ನಮ್ಮಲ್ಲಿ‌ ಹೈಕಮಾಂಡ ನಿರ್ಧಾರವೇ ಅಂತಿಮ ತೀರ್ಮಾನ, ಹೈಕಮಾಂಡ ಏನು ಹೇಳುತ್ತೆ, ಅದೇ ನಡೆಯುತ್ತೆ,ಗ್ಯಾರಂಟಿ ವಿಚಾರದಲ್ಲಿ ಪ್ರತಿಪಕ್ಷದ ಟೀಕೆಗೆ ಉತ್ತರಿಸಿದ ಅವರು, ಮಾಜಿ ಪ್ರಧಾನಿ ದೇವೆಗೌಡ್ರು ಪ್ರಧಾನಿ…

Read More

ಜಲಾವೃತ್ತ ನಾಯ್ಕಲ್ ಗ್ರಾಮದ ಮನೆಗಳಿಗೆ ಜಮಾದಾರ ಭೇಟಿ: ಸಾಂತ್ವನ, ಭರವಸೆ

ಯಾದಗಿರಿ: ನಿರಂತರ ಮಳೆಯಿಂದಾಗಿ ಅಪಾರ ಹಾನಿ ಉಂಟಾಗಿರುವ ವಡಗೇರಿ ತಾಲ್ಲೂಕಿನ ನಾಯ್ಕಲ್ ಗ್ರಾಮದ ಜಲಾವೃತ್ತ ಪ್ರದೇಶಗಳಿಗೆ ಕೆಪಿಸಿಸಿ ರಾಜ್ಯ ಸಂಯೋಜಕ ಮತ್ತು ಕಿಸಾನ್ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಮೈನುದ್ದಿನ್ ಎಂ. ಜಮಾದಾರ ದೋರನಳ್ಳಿ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಪಾರ ಮಳೆಯಿಂದಾಗಿ ಭೀಮಾನದಿ ನೀರು ಹೊಲ ಗದ್ದೆಗಳಿಗೆ ಅಲ್ಲದೇ ಮನೆಗಳಿಗೆ ನುಗ್ಗಿದ್ದು, ಅಪಾರ ನಷ್ಟವಾಗಿದೆ,  ಸತತ ಮಳೆಯ ಕಾರಣ ವಡಗೇರಿ ತಾಲ್ಲೂಕಿನಲ್ಲಿ ಹೆಚ್ಚು ಹಾನಿಯಾಗಿದ್ದು, ಅದರಲ್ಲೂ ನಾಯ್ಕಲ್…

Read More

ಕ್ಷಯ ರೋಗದ ಬಗ್ಗೆ ಭಯ ಬೇಡ:ಡಾ. ಸಂಜೀವಕುಮಾರ್ 

ಸ್ವಸ್ಥ ನಾರಿ ಸಶಕ್ತ ಪರಿವಾರ : ಉಚಿತ ಪೌಷ್ಟಿಕ ಆಹಾರ ವಿತರಣೆ  ಸುರಪುರ : ಕ್ಷಯ ರೋಗವನ್ನು ಗುಣಪಡಿಸಬಹುದು ಯಾರು ಇದರ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿ ಡಾ.ಸಂಜೀವಕುಮಾರ್ ರಾಯಚೂರಕರ್ ಮಾತನಾಡಿದರು.ತಾಲೂಕಿನ ಹೆಮನೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನ ಕಾರ್ಯಕ್ರಮ ಯಾದಗಿರಿ ಹಾಗೂ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸುರಪುರ ಇವರುಗಳ…

Read More

ಒಂದೇ ಎಂಬ ಭಾವಬಂದಾಗ ಸದೃಡ ರಾಷ್ಟç ನಿರ್ಮಾಣ-ಅಗಸರ

ತಾಳಿಕೋಟೆ, ಎಲ್ಲ ಸಮುದಾಯದವರು ಜಾತಿ, ಮತ, ಪಂಥವೆನ್ನದೇ ನಾವೆಲ್ಲರೂ ಒಂದೇ ಎಂಬ ಭಾವ ಬೆಳೆಸಿಕೊಂಡಾಗ ಮಾತ್ರ ಬಲಿಷ್ಠ ರಾಷ್ಟçವಾಗಲು ಸಾದ್ಯವೆಂದು ರಾಷ್ಟಿçÃಯ ಸೇವಾ ಯೋಜನೆಯ ಜಿಲ್ಲಾ ಸಂಯೋಜನಾಧಿಕಾರಿಗಳಾದ ಗಂಗಾಧರ ಅಗಸರ ಹೇಳಿದರು. ಪಟ್ಟಣದ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಿಂದ ಆಶ್ರಯ ಕಾಲೋನಿಯಲ್ಲಿ ಏಳು ದಿನಗಳ ಕಾಲ ಹಮ್ಮಿಕೊಂಡ ರಾಷ್ಟಿçÃಯ ಸೇವಾ ಯೋಜನೆಯ ವಿಶೇಷ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಧರ್ಮ. ಆಚಾರ ಸಂಸ್ಕಾರವನ್ನು ಯುವಕರು ಮೈಗೂಡಿಸಿಕೊಳ್ಳಬೇಕು. ದುಶ್ಚಟಗಳಿಗೆ ದಾಸರಾಗದೆ ಆರೋಗ್ಯದ ಕಡೆ…

Read More

ಕೃಷ್ಣಾ ನದಿಗೆ 1, ಲಕ್ಷ 34,ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಯಾದಗಿರಿ : ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಿರುವ ಹಿನ್ನೆಲೆಯಲ್ಲಿ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಬಂದಿದ್ದೆ ಬಸವಸಾಗರ ಜಲಾಶಯದಿಂದ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದ್ದು, ಕೃಷ್ಣಾ ನದಿಗೆ ಸೋಮವಾರ  1, ಲಕ್ಷ 34,ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು ಕೃಷ್ಣಾ ನದಿ ದಡಕ್ಕೆ ಯಾರು ತೆರಳದಂತೆ ಜಲಾಶಯದ ಅಧಿಕಾರಿಗಳಿಂದ ಎಚ್ಚರಿಕೆ ನೀಡಿದ್ದಾರೆ

Read More

ಮಳೆ ಹಾಗೂ ಪ್ರವಾಹ ಹಿನ್ನೆಲೆ ಸೂಕ್ತ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ.

ಕಲಬುರಗಿ ಜಿಲ್ಲೆಯಲ್ಲಿ ಸೆಪ್ಟೆಂಬರ ತಿಂಗಳಲ್ಲಿ ಶೇ. 63 ರಷ್ಟು ಹೆಚ್ಚು ಮಳೆ ತುರ್ತು ಪರಿಹಾರ, ಮುಂಜಾಗರೂಕತ ಕ್ರಮ ತೆಗೆದುಕೊಳ್ಳಲು ಸಚಿವರು ಸೂಚನೆ ನೀಡಿದ್ದಾರೆ. ಅತಿವೃಷ್ಟಿ ಹಾಗೂ ಪ್ರವಾಹದಂತಹ ಆಕಸ್ಮಿಕಗಳು ಸಂಭವಿಸಿದ ಸಂದರ್ಭಗಳಲ್ಲಿ ಅಧಿಕಾರಿಗಳು ವಿವೇಚನೆಯಿಂದ ವರ್ತಿಸಿ, ಲಭ್ಯವಿರುವ ಅನುದಾನವನ್ನು ಬಳಸಿಕೊಂಡು ತುರ್ತು ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಹಾಗೂ ತಾತ್ಕಾಲಿಕ ವಸತಿ, ಆಹಾರ ಸರಬರಾಜು ಸೌಲಭ್ಯಗಳನ್ನು ಕೂಡಲೇ ಒದಗಿಸಲು ನಿರ್ಧರಿಸಬೇಕು ಎಂದು ಜಿಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ 2025ರ ಆಗಸ್ಟ್ ತಿಂಗಳಲ್ಲಿ ಶೇ. 69…

Read More
error: Content is protected !!