gulbargametro

ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ ಡಿ. ದೇವರಾಜ ಅರಸು-ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ

ಕಲಬುರಗಿ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ್ ಅರಸು ರವರು ಸಮಾಜದಲ್ಲಿ ಆರ್ಥಿಕವಾಗಿ ಬಡವರು ನಿರ್ಗತಿಕರು, ಅಲೆಮಾರಿ ಜನಾಂಗದವರನ್ನು ಮತ್ತು ಹಿಂದುಳಿದ ವರ್ಗದ ಜನರ ಅಭಿವೃದ್ದಿಗಾಗಿ ಅವಿರತವಾಗಿ ಶ್ರಮಿಸುವುದರ ಮೂಲಕ ತಮ್ಮ ಸಾಮಾಜಿಕ ಸೇವೆಯನ್ನು ಮಾಡಿದ ಮಹಾನ್ ವ್ಯಕ್ತಿ ಎಂದು ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಲಬುರಗಿ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ರಾಜ್ಯದ…

Read More

ಗಣೇಶ-ಈದ್ ಮಿಲಾದ ಶಾಂತಿ ಸಮಿತಿ ಸಭೆ: ಪರಿಸರ ಸ್ನೇಹಿ ಮಣ್ಣಿನ ಗಣಪ ಪ್ರತಿಷ್ಠಾಪಿಸಿ

ಸೌಹಾರ್ದಯುತವಾಗಿ ಹಬ್ಬ ಆಚರಿಸುವಂತೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಕರೆ ಕಲಬುರಗಿ, : ಸೂಫಿ-ಸಂತರ ನಾಡು ಕಲಬುರಗಿ ಶಾಂತಿ-ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು, ಗಣೇಶ ಚತುರ್ಥಿ ಮತ್ತು ಮಿಲಾದ್ ಉನ್ ನಬಿ ಈದ್-ಎ-ಮಿಲಾದ್ ಹಬ್ಬ ಒಟ್ಟಾಗಿಯೆ ಬಂದಿರುವುದರಿಂದ ಎರಡು ಧರ್ಮೀಯರು ಸೌಹಾರ್ದಯುತವಾಗಿ ಹಬ್ಬ ಆಚರಿಸುವಂತೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಕರೆ ನೀಡಿದರು. ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶಾಂತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಿ.ಓ.ಪಿ. ಗಣಪ ಬಳಸದೆ ಪರಿಸರ ಸ್ನೇಹಿ ಮಣ್ಣಿನ ಗಣಪತಿಯನ್ನು ಪ್ರತಿಷ್ಠಪಿಸುವ ಮೂಲಕ ಪರಿಸರ ಕಾಳಜಿ…

Read More

ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ

ಚಿಂಚೋಳಿಯ ಪೊಲೀಸ್ ಠಾಣೆಯಲ್ಲಿ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ ಜರಗಿತು. ಸಭೆ ಉದ್ದೇಶಿಸಿ ಚಿಂಚೋಳಿಯ ಪೊಲೀಸ್ ಠಾಣೆಯ ಸಿಪಿಐ ಕಪಿಲದೇವ್, ಅವರು ಮಾತನಾಡಿ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಈ ಸಭೆ ಕರೆಯಲಾಗಿದ್ದು ಚಿಂಚೋಳಿ ತಾಲೂಕ ಬಹಳಷ್ಟು ಶಾಂತಿಯತೆಯಿಂದ ಜನರು ಇರುತ್ತಾರೆ ಯಾಕೆಂದರೆ ನಾನು ಒಂದು ವರ್ಷ ಆಯ್ತು ನಾನು ಇಲ್ಲಿ ಸಿಪಿಐ ಆಗಿ ಸೇವೆ ಮಾಡುತ್ತಿದ್ದು ಚಿಂಚೋಳಿಯಲ್ಲಿ ನನ್ನ ವ್ಯಾಪ್ತಿಯಲ್ಲಿ ಯಾವುದೇ ಒಂದು ಗಲಾಟೆ…

Read More

ಕೋನಾರ್ಕ್,ಎಲ್‌ಟಿಟಿ,ಇಂದೋರ್ ಎಕ್ಸಪೇಸ್ ರೈಲುಗಳ ನಿಲುಗಡೆಗೆ ಬಿಜೆಪಿ ಮನವಿ

ಚಿತ್ತಾಪುರ : ಚಿತ್ತಾಪುರ ರೈಲು ನಿಲ್ದಾಣಕ್ಕೆ, 18519/18520-ಲೋಕಮಾನ್ಯ ತಿಲಕ್ (LTT), 11019,11020-ಕೋನಾರ್ಕ್ ಎಕ್ಸ್‌ಪ್ರೆಸ್‌, 20915-20916-ಲಿಂಗಂಪಳ್ಳಿ ಟು ಇಂದೋರ್ ಎಕ್ಸ್‌ಪ್ರೆಸ್ ಚಿತ್ತಾಪುರ ರೈಲು ನಿಲ್ದಾಣದಲ್ಲಿ ರೈಲು ನಿಲುಗಡೆ ಮಾಡಬೇಕೆಂದು ಇಂದು ದಕ್ಷಿಣ ರೈಲ್ವೆ ಸಿಕಂದರಾಬಾದ್ ಡಿಆರ್ ಎಂ ಅವರಿಗೆ ಬಿಜೆಪಿ ಮುಖಂಡರು ಮನವಿ ಪತ್ರವನ್ನು ಸಲ್ಲಿಸಿದರು. ಚಿತ್ತಾಪುರ ಪಟ್ಟಣದಲ್ಲಿ ಲೋಕಮಾನ್ಯ ತಿಲಕ್ (LTT)-ಕೋನಾರ್ಕ್, -ಲಿಂಗಂಪೈಲಿಯಿಂದ ಇಂದೋರ್ ಎಕ್ಸ್‌ಪ್ರೆಸ್‌ಗೆ ಹೋಗುವ ರೈಲುಗಳು ಚಿತ್ತಾಪುರ ರೈಲು ನಿಲ್ದಾಣದಲ್ಲಿ ನಿಲ್ಲುತ್ತಿಲ್ಲ. ರೈಲುಗಳು ಇಲ್ಲಿ ನಿಲ್ಲದ ಕಾರಣ ಅನೇಕ ಪ್ರಯಾಣಿಕರು ಮತ್ತು ಉದ್ಯಮಿಗಳು ಅನಾನುಕೂಲತೆಯನ್ನುಅನುಭವಿಸುತ್ತಿದ್ದಾರೆ….

Read More

ಅ. ೨೨ ರಂದು ಪಲ್ಲಕ್ಕಿ ಉತ್ಸವ

ಕಲಬುರಗಿ: ತಾಲೂಕಿನ ಶ್ರೀನಿವಾಸ್ ಸರಡಗಿ ಶ್ರೀ ಮಹಾಲಕ್ಷ್ಮೀಶಕ್ತಿ ಪೀಠದಲ್ಲಿ ಶ್ರಾವಣ ಮಾಸದ ಐದನೇ ಶುಕ್ರವಾರ ಅಗಸ್ಟ್ ೨೨ ರಂದು ಬೆಳಿಗ್ಗೆ ೯ ಕ್ಕೆ ಪಲ್ಲಕ್ಕಿ ಉತ್ಸವ ಶ್ರೀ ದೇವಿಗೆ ಮಹಾಭಿಷೇಕ ಮಹಾಲಂಕಾರ ಮಹಾನವಿದ್ಯ ಮತ್ತು ಅರ್ಚನೆ ಹಾಗೂ ಹೋಮ ಹವನ ನಡೆಯಲಿದೆ . ನಂತರ ನಾಡಿನ ಖ್ಯಾತ ಕಲಾವಿದ ರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಬಂದ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಗುರುವಂದನ ಕಾರ್ಯಕ್ರಮದಲ್ಲಿ ಎಲ್ಲಾಭಕ್ತಾಧಿಗಳು ಆಗಮಿಸಿ ಮಹಾತಾಯಿ ಮತ್ತು ಪೂಜ್ಯರ ಆಶೀರ್ವಾದ ಪಡೆಯಬೇಕೆಂದು ಶಕ್ತಿ ಪೀಠದ ಕಾರ್ಯದರ್ಶಿ…

Read More

ಶ್ರೀ ರೇವಣಸಿದ್ಧೇಶ್ವರ ಕೋರಿ ಮಠದಲ್ಲಿ ದಂಪತಿಗಳಿಗೆ ಸನ್ಮಾನ

ಕಲಬುರಗಿ ನಗರದ ಶ್ರೀ ರೇವಣಸಿದ್ಧೇಶ್ವರ ಕೋರಿ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಕಳೆದ ಇಪ್ಪತ್ತು ದಿನಗಳಿಂದ ಹಾಲುಮತ ಕುಲದೈವ ಶ್ರೀ ಬೀರಲಿಂಗೇಶ್ವರ ಪುರಾಣ ಕಾರ್ಯಕ್ರಮದಲ್ಲಿ ಡಾ.ಅಮರಪ್ಪಾ ಜಂಪಾ ವೈದ್ಯ ದಂಪತಿಗಳಿಗೆ ಸನ್ಮಾನಿಸಲಾಯಿತು ಇದೆ ಸಂದರ್ಭದಲ್ಲಿ ಸಮಾರಂಭದ ಅಧ್ಯಕ್ಷತೆ ರವಿಗೊಂಡ ಕಟ್ಟಿಮನಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಆನಂದ ವಾರಿಕ, ಯೋಗ ಶಿಕ್ಷಕರಾದ ನಿತ್ಯಾನಂದ ಬಂಡಿ, ಸಂಜೀವಕುಮಾರ ರೇವಣಕರ, ಅಮರ, ವಿಶ್ವರಾಜ ಸೋನಾರ್, ಖ್ಯಾತ ಛಾಯಾಗ್ರಾಹಕ ಮಂಜು ಜಮಾದಾರ, ಮಹೇಶ ಪಾಣೇಗಾಂವ ಉಪಸ್ಥಿತರಿದ್ದರು. ರಜನಿಕಾಂತ್ ಮೆಳಕುಂದಿ…

Read More

ವಿಜೃಂಬಣೆಯಿಂದ ಜರುಗಿದ ಶ್ರೀ ಭೋಗೇಶ್ವರ ರಥೋತ್ಸವ

ತಾಳಿಕೋಟೆ: ತಾಲೂಕಿನ ಹಿರೂರ ಗ್ರಾಮದಲ್ಲಿ ಶ್ರೀ ಭೋಗೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಸೋಮವಾರರಂದು ಮಹಾ ರಥೋತ್ಸವವು ಸಾವಿರಾರು ಭಕ್ತ ಸಮೂಹದ ಮಧ್ಯ ವಿಜೃಂಬಣೆಯಿಂದ ಜರುಗಿತು. ರಥೋತ್ಸವ ಅಂಗವಾಗಿ ನಸುಕಿನ ಜಾವ ಶ್ರೀ ಭೋಗೇಶ್ವರ ಮಹಾ ಮೂರ್ತಿಗೆ ವೇ.ಜಗನ್ನಾಥ ಜೋಶಿ ಅವರಿಂದ ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾ ಮಂಗಳಾರತಿ ಕಾರ್ಯಕ್ರಮಗಳು ಜರುಗಿದವಲ್ಲದೇ ಮುಂಜಾನೆ ೮ ಗಂಟೆಗೆ ಗಂಗಸ್ಥಳದೊಂದಿಗೆ ಕುಂಭ ಕಳಸ ವಾಧ್ಯವೈಭವಗಳೊಂದಿಗೆ ಜರುಗಿ ೧೧ ಗಂಟೆಗೆ ಫಲ್ಲಕ್ಕಿ ಉತ್ಸವವು ಮೇರವಣಿಗೆಯು ಪ್ರಾರಂಭಗೊಂಡು ಶ್ರೀ ಭೋಗೇಶ್ವರ ದೇವಸ್ಥಾನದಿಂದ ಡೋಣಿ ಭೋಗೇಶ್ವರದವರೆಗೆ…

Read More

ಚಂಡ್ರಿಕಿ ಗ್ರಾಮದಲ್ಲಿ ಶಾಂತಿ ಸಭೆ – ಹಬ್ಬಗಳನ್ನು ಸೌಹಾರ್ದತೆ ಯಿಂದ ಆಚರಿಸೋಣ: ಡಿವೈಎಸ್ಪಿ ಸುರೇಶ್

ಗುರುಮಠಕಲ್: ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬವನ್ನು ಶಾಂತಿ ಸೌಹಾರ್ದತೆಯೊಂದಿಗೆ ಧಾರ್ಮಿಕ ಭಾವನೆಗಳಿಗೂ ಧಕ್ಕೆಯಾಗದಂತೆ ಆಚರಿಸಿ ಎಂದು ಡಿವೈಎಸ್ಪಿ ಸುರೇಶ್. ಎಮ್ ಅವರು ಹೇಳಿದರು. ತಾಲ್ಲೂಕಿನ ಚಂಡ್ರಿಕಿ ಗ್ರಾಮದಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಹಬ್ಬದ ವೇಳೆ ಯಾವುದೇ ಕಾನೂನು ಸುವ್ಯವಸ್ಥೆ ಸಮಸ್ಯೆಗಳು ಎದುರಾಗದಂತೆ ಎಲ್ಲ ಸಮುದಾಯದ ಜನರು ಪರಸ್ಪರ ಸಹಕಾರ ಮತ್ತು ಸಹಾನುಭೂತಿಯಿಂದ ನಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಹಬ್ಬಗಳನ್ನು ಸಮಾನ ಮನೋಭಾವದಿಂದ ಆಚರಿಸುವುದು ಸಮಾಜದಲ್ಲಿ ಶಾಂತಿ, ಸಾಮರಸ್ಯ…

Read More

ವೇಣುಗೋಪಾಲ ಸ್ವಾಮಿ ಜಾತ್ರೆಯಲ್ಲಿ ರೋಚಕ ಕುಸ್ತಿ ಪಂದ್ಯಾವಳಿ

ಸುರಪುರ : ನಗರದ ಶ್ರೀ ವೇಣುಗೋಪಾಲ ಸ್ವಾಮಿ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಮೂರನೇ ದಿನದ ಕಾರ್ಯಕ್ರಮದಲ್ಲಿ ಅದ್ದೂರಿಯಾಗಿ ಕುಸ್ತಿ ಪಂದ್ಯಾವಳಿ ನಡೆಸಲಾಯಿತು. ದೇವಸ್ಥಾನದ ಆವರಣದಲ್ಲಿ ಕುಸ್ತಿ ಪಂದ್ಯಾವಳಿಗೆ ಅಂಕಣವನ್ನು ಸಿದ್ಧಗೊಳಿಸಲಾಗಿತ್ತು, ಸುರಪುರ ರಾಜವಂಶಸ್ಥರಾದ ರಾಜ ಕೃಷ್ಣಪ್ಪ ನಾಯಕ ಅವರು ಭಾಗವಹಿಸಿ ಪಂದ್ಯಾವಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕಿನ ವಾಗಣಗೇರ,ದೇವರಗೊನಾಲ ಹಾಗೂ ಶಹಾಪುರ ತಾಲ್ಲೂಕಿನ ರಸ್ತಾಪುರ ದೋರನಹಳ್ಳಿ,ಗೋಗಿ ಸೇರಿದಂತೆ ಕಲಬುರ್ಗಿ,ವಿಜಯಪುರ ಇತರೆ ಜಿಲ್ಲೆಗಳಿಂದಲೂ ಅನೇಕ ಜನ ಕುಸ್ತಿಪಟುಗಳು ಭಾಗವಹಿಸಿದ್ದರು. ಕುಸ್ತಿ ಪಂದ್ಯಾವಳಿಯಲ್ಲಿ ಮೊದಲಿಗೆ ನಗದು ಬಹುಮಾನದ…

Read More

ನಗರ ಸ್ಥಳೀಯ ಸಂಸ್ಥೆಗಳ ವಿವಿಧ ತೆರಿಗೆ ಸಂಗ್ರಹಣೆ ಹಾಗೂ ವಸತಿ ಯೋಜನೆ ಪ್ರಗತಿ ಪರಿಶೀಲನಾ ಸಭೆ

ಕಲಬುರಗಿ: ಸೋಮವಾರದಂದು ಆಗಸ್ಟ್ ೧೮ ರಂದು ಜಿಲ್ಲಾ ನಗರಾಭಿವೃದ್ಧಿ ಕೋಶ, ಪೌರಾಡಳಿತ ನಿರ್ದೇಶನಾಲಯ ಹಾಗೂ ನಗರಾಭಿವೃದ್ಧಿ ಇಲಾಖೆಗೆ ಸಂಬಂಧಪಟ್ಟ ಜಿಲ್ಲೆಯೊ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವಿವಿಧ ತೆರಿಗೆ ಸಂಗ್ರಹಣೆ ಹಾಗೂ ವಸತಿ ಯೋಜನೆ ಪ್ರಗತಿ ಪರಿಶೀಲನಾ ಸಭೆಯನ್ನು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರ ಅಧ್ಯಕ್ಷತೆಯಲ್ಲಿ ಜರುಗಿತ್ತು. ಮಹಾನಗರ ಪಾಲಿಕೆಯ ಆಯುಕ್ತರಾದ ಅವಿನಾಶ ಶಿಂಧೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮುನ್ನವರ್ ದೌಲಾ, ನಗರ ಸ್ಥಳಿಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಗೂ ಕರವಸೂಲಿಗಾರರು ,ಕಂದಾಯ ಅಧಿಕಾರಿಗಳು,…

Read More
error: Content is protected !!