ಕಲಬುರಗಿ-ಕೊಲ್ಹಾಪುರ ನಡುವೆ ವಿಶೇಷ ರೈಲುಗಳ ಸಂಚಾರ
ದಸರಾ ಮತ್ತು ದೀಪಾವಳಿ ಹಬ್ಬ-2025 ಕಲಬುರಗಿ,-ಮುಂಬರುವ ದಸರಾ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರ ಪ್ರಯಾಣಿಕರ ಅನುಕೂಲಕ್ಕಾಗಿ ಕೇಂದ್ರ ರೈಲ್ವೆ ಇಲಾಖೆಯು ಸೊಲ್ಲಾಪುರ ವಿಭಾಗದ ಮೂಲಕ ಕೊಲ್ಹಾಪುರ ಮತ್ತು ಕಲಬುರಗಿ ನಡುವೆ ಕೆಳಕಂಡ ದಿನಾಂಕಗಳಂದು 116 ಟ್ರಿಪ್‍ಗಳಲ್ಲಿ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ ಎಂದು ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕೊಲ್ಹಾಪುರ-ಕಲಬುರಗಿ ವಿಶೇಷ ರೈಲು: ಕೊಲ್ಹಾಪುರ-ಕಲಬುರಗಿ ವಿಶೇಷ ರೈಲು (ರೈಲು ಸಂಖ್ಯೆ 01451) ಇದೇ ಸೆಪ್ಟೆಂಬರ್ 24 ರಿಂದ ನವೆಂಬರ್…


