gulbargametro

ಮೂರು ಹೊಸದಾಗಿ ಕಲ್ಲು ಗಣಿಗಾರಿಕೆಗೆ ಲೈಸೆನ್ಸ್ ನೀಡಲು ಒಪ್ಪಿಗೆ

ಜಿಲ್ಲಾ ಟಾಸ್ಕ ಫೋರ್ಸ್ (ಗಣಿ) ಸಭೆ: ಕಲಬುರಗಿ, :  ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅಧ್ಯಕ್ಷತೆಯಲ್ಲಿ ಬುಧವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಟಾಸ್ಕ ಫೋರ್ಸ್ (ಗಣಿ) ಹಾಗೂ ಜಿಲ್ಲಾ ಕಲ್ಲು ಪುಡಿ ಘಟಕಗಳ ಲೈಸನ್ಸ್ ನೀಡಿಕೆ ನಿಯಂತ್ರಣ ಪ್ರಾಧಿಕಾರದ ಸಭೆಯಲ್ಲಿ ಕಲಬುರಗಿ, ಕಾಳಗಿ, ಕಮಲಸಪೂರ ತಾಲೂಕಿನಲ್ಲಿ ತಲಾ ಒಂದರಂರೆ ಕಲ್ಲು ಗಣಿಗಾರಿಕೆ ನಡೆಸಲು ಲೈಸೆನ್ಸ್ ನೀಡಲು ಸಭೆ ಒಪ್ಪಿಗೆ ಸೂಚಿಸಿದೆ. ಕಲಬುರಗಿ ತಾಲೂಕಿನ ಭೀಮಳ್ಳಿ ಮತ್ತು ಕಮಲಾಪುರ ತಾಲೂಕಿನ ಜೀವಣಗಿಯಲ್ಲಿ ಕಟ್ಟಡ ಕಲ್ಲು ಗಣಿಗಾರಿಕೆಗೆ ಮತ್ತು…

Read More

16 ಪ್ರಕರಣಗಳಲ್ಲಿ ಜಪ್ತಿ ಮಾಡಿದ 84 ಕೆ.ಜಿ 616 ಗ್ರಾಂ ಗಾಂಜಾ ಮತ್ತು 467 ಗ್ರಾಂ Tablets Cough Syrup, ನಾಶ

ಬೀದರ ಜಿಲ್ಲೆಯ ವಿವಿಧ ಪೋಲಿಸ್ ಠಾಣೆಗಳಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುತ್ತಿದ್ದ/ಸಾಗಾಣಿಕೆ/ಮಾರಾಟ/ Tablets Cough Syrup, MD methamphetamine ಕಾಯ್ದೆ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಜಿಲ್ಲಾದಾದ್ಯಂತ ದಾಖಲಾದ ಒಟ್ಟು 16 ಪ್ರಕರಣಗಳಲ್ಲಿ ಜಪ್ತಿ ಮಾಡಿದ 84 ಕೆ.ಜಿ 616 ಗ್ರಾಂ ಗಾಂಜಾ ಮತ್ತು 467 ಗ್ರಾಂ Tablets Cough Syrup, MD methamphetamine ಗಳನ್ನು ನಿಯಮಾನುಸಾರ ಭಾಲ್ಕಿ ತಾಲೂಕಿನ ಧನ್ನೂರ ಗ್ರಾಮದಲ್ಲಿರುವ ಇನ್ವೇರೋ  ಜೈವಿಕ ತ್ಯಾಜ್ಯ ವಿಲೆವಾರಿ ಘಟಕದ ಕುಲುಮೆಯಲ್ಲಿ ನಾಶ ಪಡಿಸಲಾಯಿತು. ಜಿಲ್ಲಾ ಜಿಲ್ಲಾ ಪೋಲಿಸ್ ವರಿಷ್ಠ…

Read More

ಕಾಳಜಿ ಕೇಂದ್ರಗಳಿಗೆ ಚಿತ್ತಾಪುರ ತಹಸೀಲ್ದಾರರು ಭೇಟಿ ನೀಡಿ ಪರಿಶೀಲನೆ

ಕಲಬುರಗಿ : ಚಿತ್ತಾಪುರ ತಾಲೂಕಿನ ವಿವಿಧ ಗ್ರಾಮಗಳಿಗೆ ಮತ್ತು ತಾಲೂಕಿನ ಮುಖ್ಯ ರಸ್ತೆಗಳ ಮಧ್ಯೆವಿರುವ ಸೇತುವೆಗಳಿಗೆ ಚಿತ್ತಾಪುರ ತಹಸೀಲ್ದಾರ ನಾಗಯ್ಯ ಹಿರೇಮಠ ಅವರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಕಾರ ಮಳೆಯಿಂದ ಮತ್ತು ಮುಲ್ಲಾಮಾರಿ ಜಲಾಶದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆದಿಂದ, ನದಿ ದಂಡಿಗೆ ಇರುವ ಪ್ರವಾಹ ಪೀಡಿತ ಪ್ರದೇಶಗಳಿಗೆ ಇಂದು ಕೃಷಿ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿಳೊಂದಿಗೆ ಸನ್ನತಿ…

Read More

ಚಿತ್ತಾಪುರ | ಸೆ.27 ರಂದು ಬಿಗ್ ಬಾಸ್ ವಿನ್ನರ್ ಹನುಮಂತ ಲಂಬಾಣಿ ತಂಡದ ಸಂಗೀತ ರಸಮಂಜರಿ ಕಾರ್ಯಕ್ರಮ

ಕಲಬುರಗಿ : ಚಿತ್ತಾಪುರ ಪಟ್ಟಣದ ಸ್ಟೇಷನ್ ತಾಂಡಾದಲ್ಲಿ 25ನೇ ವರ್ಷದ ನವರಾತ್ರಿ ಬೆಳ್ಳಿ ಮಹೋತ್ಸವ ಅಂಗವಾಗಿ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡ ಜಗದೀಶ ಚವ್ಹಾಣ್ ಅವರು ಪ್ರಕಟಣೆಯಲ್ಲಿ ತಿಳಿಸಿದರು. ಚಿತ್ತಾಪುರ ಸ್ಟೇಷನ್ ತಾಂಡಾದ ದೊಡ್ಡ ಸೇವಾಲಾಲ್ ದೇವಸ್ಥಾನ ಹತ್ತಿರ 25ನೇ ವರ್ಷದ ನವರಾತ್ರಿ , ಬೆಳ್ಳಿ ಮಹೋತ್ಸವ ಅಂಗವಾಗಿ ಚಿತ್ತಾಪುರ ಸ್ಟೇಷನ್ ತಂಡಕ್ಕೆ ಸೆ 27 ರಂದು ಸಾಯಂಕಾಲ 7. 30 ಗಂಟೆಗೆ ಕರ್ನಾಟಕದ ಮನೆ ಮಗ ಬಿಗ್ ಬಾಸ್ ವಿನ್ನರ್ ಎಲ್ಲರ ಪ್ರೀತಿಗೆ…

Read More

ಕಲಬುರಗಿ ಜಿಲ್ಲೆಯ 100 ಅರಿವು ಕೇಂದ್ರಗಳಿಗೆ ಹೊಸ ರೂಪ ಜನರ ಬದುಕಿನ ಭಾಗವಾಗುತ್ತಿರುವ ಗ್ರಾಮೀಣ ಗ್ರಂಥಾಲಯಗಳು

ಗ್ರಾಮೀಣ ಪರಿಸರದಲ್ಲಿ ಕಳೆದ ಎರಡು ವರ್ಷಗಳಲ್ಲಿ ಕ್ರಮೇಣ ಒಂದು ಅದ್ಭುತ ಘಟಿಸತೊಡಗಿದೆ. ಗ್ರಾಮೀಣ ಮಕ್ಕಳು, ಯುವಕರು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ಉತ್ಸಾಹದಲ್ಲಿರುವ ಉದ್ಯೋಗಾಕಾಂಕ್ಷಿ ಯುವಕ, ಯುವತಿಯರು, ವಯಸ್ಕರು, ಹಿರಿಯ ನಾಗರಿಕರು ಹೀಗೆ ಯಾವುದೇ ಭೇದ ಭಾವವಿಲ್ಲದೆ ವೈವಿಧ್ಯತೆಯನ್ನು ಹಂಚಿಕೊಳ್ಳುವ ಅರಿವು ಕೇಂದ್ರಗಳೆಂಬ ಜ್ಞಾನದೇಗುಲಗಳು ಜನಪ್ರಿಯಗೊಳ್ಳುತ್ತಿವೆ. ಒಳ ಪ್ರವೇಶಿಸುತ್ತಿದ್ದಂತೆ ಮಾನಸಿಕವಾಗಿ ನೆಮ್ಮದಿ ತರುವ ಪರಿಸರ, ಅವಶ್ಯಕತೆಗೆ ಅನುಗುಣವಾಗಿ ಉಪಯುಕ್ತ ಪುಸ್ತಕಗಳು, ವೃತ್ತಪತ್ರಿಕೆಗಳು, ಮಾಹಿತಿಗಳನ್ನು ಜಾಲಾಡಲು ಡಿಜಿಟಲೀಕರಣದ ವ್ಯವಸ್ಥೆ ಈ ಎಲ್ಲಾ ಸಾಕಾರಗೊಂಡಿರುವ ಗ್ರಾಮೀಣ ಗ್ರಂಥಾಲಯಗಳಾದ ʼಅರಿವು ಕೇಂದ್ರʼಗಳು ಈಗ…

Read More

ರಾಷ್ಟ್ರೀಯ ಸೇವಾ ಯೋಜನೆ ಯ ” ಸಂಸ್ಥಾಪನ ದಿನಾಚರಣೆ”

ಕಲಬುರಗಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ ಕಲಬುರ್ಗಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಯ ” ಸಂಸ್ಥಾಪನ ದಿನಾಚರಣೆ” ಕಾರ್ಯ ಕ್ರಮ ಕೈಗೊಳ್ಳಲಾಯಿತು. ಈ ಕಾರ್ಯಕ್ರಮ ಕ್ಕೆ ಮುಖ್ಯ ಅಥಿತಿಗಳಾಗಿ ಗುಲ್ಬರ್ಗಾ ವಿಶ್ವ ವಿಧ್ಯಾಲಯದ ಕುಲಸಚಿವರಾದ Dr. ರಮೇಶ. ಲಂಡನ್ಕರ್ ರವರು ಕಾರ್ಯ ಕ್ರಮ ವನ್ನು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ದ ಚಾಲನೆ ನೀಡಿದರು.N S S .ಶಿಬಿರಾರ್ಥಿಗಳು ದೇಶದ ಆಸ್ತಿ ಮತ್ತು ನವ ಭಾರತ ನಿರ್ಮಾಣ ಮಾಡುವ…

Read More

ಜಿನೋ-ಸೆಲ್ ಗ್ಯಾಲಕ್ಸಿ -2025 ಪ್ರದರ್ಶನ

ಕಲಬುರಗಿ: ಶ್ರೀಮತಿ ವೀರಮ್ಮ ಗಂಗಾಸಿರಿ ಮಹಿಳಾ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗವು “ಜಿನೋ-ಸೆಲ್ ಗ್ಯಾಲಕ್ಸಿ 2025″ ಎಂಬ ಭವ್ಯ ವಿಜ್ಞಾನ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಿತು. ಈ ಕಾರ್ಯಕ್ರಮವನ್ನು ಡಾ. ಚಂದ್ರಕಲಾ ಪಾಟೀಲ್ ನಿವೃತ್ತ ಪ್ರಾಧ್ಯಾಪಕರು ಇವರು ಉದ್ಘಾಟಿಸಿ ಮಾತನಾಡುತ್ತಾ ಇಂತಹ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರೊಂದಿಗೆ ಮಕ್ಕಳಿಗೆ ಕಲಿಕೆಯ ಜೊತೆಗೆ ಅವರಲ್ಲಿನ ಸೂಪ್ತ ಪ್ರತಿಭೆ ಹೊರಬರಲು ವೇದಿಕೆ ಕಲ್ಪಿಸಿದಂತಾಗುತ್ತದೆ ಎಂದು ನುಡಿದರು ಈ ಕಾರ್ಯಕ್ರಮವು ಎರಡು ಪ್ರಮುಖ ಮುಖ್ಯಾಂಶಗಳನ್ನು ಒಳಗೊಂಡಿತ್ತು – ವಿದ್ಯಾರ್ಥಿಗಳು ನವೀನ ಮಾದರಿಗಳು ಮತ್ತು ಪ್ರದರ್ಶನಗಳನ್ನು…

Read More

ಪ್ರವಾಹ ಪೀಡಿತ ಗ್ರಾಮಗಳ ಜನರಿಗೆ ಸುಮಾರು 2,500 ಆಹಾರ ಸಾಮಗ್ರಿಗಳ‌  ವಿತರಣೆ- ಸಂಸದ ರಾಧಾಕೃಷ್ಣ ದೊಡ್ಡಮನಿ.

ಕಲಬುರಗಿ ಜಿಲ್ಲೆಯ ಅತೀವೃಷ್ಠಿ ಹಾಗೂ ಪ್ರವಾಹ ಪರಿಸ್ಥಿತಿ‌ ಎದುರಿಸುತ್ತಿರುವ ಗ್ರಾಮಗಳ ಜನರಿಗೆ ಆಹಾರ ಸಾಮಗ್ರಿಗಳ ಪೊಟ್ಟಣಗಳನ್ನು ನಾಳೆ ( ಶುಕ್ರವಾರ) ಜಿಲ್ಲಾಡಳಿತ ಮೂಲಕ ನೀಡಲಾಗುವುದು ಎಂದು ಕಲಬುರಗಿ ಲೋಕಸಭಾ ಸದಸ್ಯರಾದ ರಾಧಾಕೃಷ್ಣ ದೊಡ್ಡಮನಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ‌‌ ನೀಡಿರುವ ಅವರು, ಅತೀವೃಷ್ಠಿ ಹಾಗೂ ಪ್ರವಾಹ ಎದುರಿಸುತ್ತಿರುವ ಗ್ರಾಮಗಳ‌ ಜನರಿಗೆ ವೈಯಕ್ತಿಕವಾಗಿ ಸುಮಾರು 2,500 ಆಹಾರ ಸಾಮಗ್ರಿಗಳ ಪೊಟ್ಟಣಗಳನ್ನು ಜಿಲ್ಲಾಡಳಿತದ ಮೂಲಕ ನೀಡಲಾಗುವುದು ಎಂದು ಸಂಸದರು ತಿಳಿಸಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರ…

Read More

ಕಲಬುರಗಿ ಮಣ್ಣಿಗೆ ಅತಿ ನೀರು ಅಪಾಯಕಾರಿ | ಸಮದ್ ಪಟೇಲ್

ಕಲಬುರಗಿ, ಪ್ರಾಕೃತಿಕವಾಗಿ ಕಲಬುರಗಿ ಜಿಲ್ಲೆಯ ಬಹುತೇಕ ನೆಲದ ಒಳ ಪದರದಲ್ಲಿ ಸುಣ್ಣದ ಕಲ್ಲು ಒಳಗೊಂಡಿರುವ ಹಿನ್ನಲೆಯಲ್ಲಿ ಇಲ್ಲಿನ ಮಣ್ಣಿಗೆ ಅತಿ ನೀರು ಅಪಾಯಕಾರಿ ಎಂದು ಕೃಷಿ ಜಂಟಿ ನಿರ್ದೇಶಕ ಸಮದ್ ಪಟೇಲ್ ಅವರು ತಿಳಿಸಿದರು. ಜಿಲ್ಲೆಯಲ್ಲಿ ಪ್ರಸ್ತುತ ಅತಿವೃಷ್ಠಿಯಿಂದ ತೊಗರಿ, ಹತ್ತಿ ಹಾಗೂ ಇತರೆ ಬೆಳೆಗೆ ಬರಬಹುದಾದ ಕೀಟ ರೋಗ ಬಾಧೆ ಹಾಗೂ ಅದರ ನಿರ್ವಹಣೆಯ ಕುರಿತು ವಿವರಿಸಲು ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ಈ ನೆಲದ ಮಣ್ಣು…

Read More

ದಸರಾ ಹಬ್ಬದ ಪ್ರಯುಕ್ತ ಕೆ.ಕೆ.ಆರ್.ಟಿ.ಸಿ ಸಂಸ್ಥೆಯಿಂದ 500 ಹೆಚ್ಚುವರಿ ಬಸ್ ಕಾರ್ಯಾಚರಣೆ : ಡಾ.ಬಿ.ಸುಶೀಲ

ಕಲಬುರಗಿ,ದಸರಾ ಹಬ್ಬ, ವಾರಾಂತ್ಯ ಹಾಗೂ ಸಾಲು ರಜೆ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಪ್ರದೇಶದ ಜಿಲ್ಲಾ ಮತ್ತು ತಾಲೂಕು ಕೇಂದ್ರದಿಂದ ಬೆಂಗಳೂರು ಮತ್ತು ಸೋಲಾಪೂರದ ತುಳಜಾಪುರಕ್ಕೆ ಹೋಗಿ ಬರಲು ಪ್ರಯಾಣಿಕರ ಅನುಕೂಲಕ್ಕಾಗಿ 500 ಹೆಚ್ಚುವರಿ ಬಸ್ ಕಾರ್ಯಾಚರಣೆ ಮಾಡಲಾಗುತ್ತಿದ್ದು, ಸಾರ್ವಜನಿಕರು ಮತ್ತು ಪ್ರಯಾಣಿಕರು ಇದರ ಸೌಲಭ್ಯ ಪಡೆಯಬೇಕು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಡಾ.ಬಿ.ಸುಶೀಲಾ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸೆಪ್ಟೆಂಬರ್ 25, 26 ಹಾಗೂ 29 ರಂದು…

Read More
error: Content is protected !!