gulbargametro

ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಬಡವರಿಗೆ ವರದಾನ: ಲಕ್ಷ್ಮಿಕಾಂತ ರೆಡ್ಡಿ

ಗುರುಮಠಕಲ್: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರ್ಕಾರವು ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಬಡ, ಮಧ್ಯಮ ವರ್ಗದ ಕುಟುಂಬಗಳಿಗೆ ವರದಾನವಾಗಿವೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಗುರುಮಠಕಲ್ ತಾಲ್ಲೂಕು ಅಧ್ಯಕ್ಷ ಲಕ್ಷ್ಮಿಕಾಂತ್ ರೆಡ್ಡಿ ಪಲ್ಲ ತಿಳಿಸಿದರು.  ತಾಲ್ಲೂಕಿನ ಪುಟಪಾಕ್ ಗ್ರಾಮ ಪಂಚಾಯತಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತಿ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತಿ ಸಹಯೋಗದಲ್ಲಿ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆಗಳ ನಡೆ ಗ್ರಾಮ ಪಂಚಾಯತಿಗಳ ಕಡೆ  ಕಾರ್ಯಕ್ರಮದ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪರಿಶೀಲನೆ ಮತ್ತು ಫಲಾನುಭವಿಗಳೊಂದಿಗೆ…

Read More

ಮಹಾನಗರ ಪಾಲಿಕೆ ಸ್ಥಾಯಿಸಮಿತಿ ಅಧ್ಯಕ್ಷರ ಆಯ್ಕೆ

ಕಲಬುರಗಿ: ನಗರದ ಇಂದಿರಾ ಸ್ಮಾರಕಭವನದಲ್ಲಿ (ಟೌನ್ ಹಾಲ್) ಇ ಮಹಾನಗರ ಪಾಲಿಕೆಯ ವಿವಿಧ ಸ್ಥಾಯಿ ಸಮಿತಿಗೆ ಅಧ್ಯಕ್ಷರ ಆಯ್ಕೆ ನಡೆಯಿತು. ಕಲಬುರಗಿ ಮಹಾನಗರಪಾಲಿಕೆ ಕರ,ಹಣಕಾಸು ಹಾಗೂ ಮೇಲ್ಮನವಿ ಸ್ಥಾಯಿಸಮಿತಿ ಅಧ್ಯಕ್ಷರಾಗಿ ಅನುಪಮಾ ರಮೇಶ ಕಮಕನೂರ, ಸಾರ್ವಜನಿಕ ಹಾಗೂ ಆರೋಗ್ಯ,ಶಿಕ್ಷಣ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಮೊಹಮ್ಮದ ಅಯಜಖಾನ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿಸಮಿತಿ ಅಧ್ಯಕ್ಷರಾಗಿ ಶೇಖ ಹುಸೇನ್ ಮತ್ತು ಲೆಕ್ಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಪುತಲಿಬೇಗಂ ಅವರು ಆಯ್ಕೆಯಾದರು. ಆಯ್ಕೆಯಾದ ವಿವಿಧ ಸ್ಥಾಯಿಸಮಿತಿಯ ಅಧ್ಯಕ್ಷರನ್ನು…

Read More

ಭುವನೇಶ್ವರಿ ಮೂರ್ತಿಗೆ ಪೂಜೆ ಸಲ್ಲಿಸಿ ನಾಡ ಹಬ್ಬಕ್ಕೆ ಚಾಲನೆ

ಸುರಪುರ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತವಾದ ರಂಗAಪೇಟಿಯ ಕನ್ನಡ ಸಾಹಿತ್ಯ ಸಂಘದ ೮೩ ನೇ ವರ್ಷದ ನಾಡ ಹಬ್ಬಕ್ಕೆ ಮಂಗಳವಾರ ಬೆಳಿಗ್ಗೆ ೮ ಗಂಟೆಗೆ ಭುವನೇಶ್ವರಿ ದೇವಿ ಮೂರ್ತಿಗೆ ಯಜ್ಙೇಶ್ವರ ಭಟ್ ಅವರು ನಾಡದೇವಿಗೆ ಪೂಜೆ ಸಲ್ಲಿಸಿದ ನಂತರ ಪ್ರಸಾದ ವಿತರಿಸಿದರು. ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಸೂಗೂರೇಶ್ವರ ವಾರದ್, ಕಾರ್ಯಾಧ್ಯಕ್ಷ ಶ್ರೀರಂಗಯ್ಯ ಮಿರಿಯಾಲ,ಉಪಾಧ್ಯಕ್ಷರಾದ ಯಂಕಣ್ಣ ಗದ್ವಾಲ್,ಸೋಮರಾಯ ಶಖಾಪುರ,ಶರಣಗೌಡ ಎಂ.ಪಾಟೀಲ್ ಜೈನಾಪುರ, ಪ್ರಧಾನ ಕಾರ್ಯದರ್ಶಿ ಮುದ್ದಪ್ಪ ಅಪ್ಪಾಗೋಳ,ಸಹ ಕಾರ್ಯದರ್ಶಿಗಳಾದ ಸಿದ್ದಯ್ಯ ಮಠ, ಪ್ರಕಾಶ ಆಲಬನೂರ, ಸಂಘಟನಾ ಕಾರ್ಯದರ್ಶಿ…

Read More

ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲು ಪೌರ ಕಾರ್ಮಿಕರಿಗೆ ಕಮಿಷನರ್ ಬಸವರಾಜ ಸಲಹೆ

ಸುರಪುರ: ನಗರಸಭೆ ಸಭಾಂಗಣದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಸುರಪುರ:ಪೌರ ಕಾರ್ಮಿಕರು ತಮ್ಮ ಮಕ್ಕಳನ್ನು ಪೌರ ಕಾರ್ಮಿಕರನ್ನು ಮಾಡದೇ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಅವರನ್ನು ಜಿಲ್ಲಾಧಿಕಾರಿ ಸೇರಿದಂತೆ ಉನ್ನತ ಅಧಿಕಾರಿಗಳನ್ನು ಮಾಡಬೇಕು ಎಂದು ಪೌರಾಯುಕ್ತ ಬಸವರಾಜ ಟಣಕೆದಾರ ಅವರು ಕಿವಿಮಾತು ಹೇಳಿದರು. ಇಲ್ಲಿಯ ನಗರಸಭೆಯ ಸಭಾಂಗಣದಲ್ಲಿ ಬೆಂಗಳೂರು ಪೌರಾಡಳಿತ ನಿರ್ದೇಶನಾಲಯ, ನಗರಾಭಿವೃದ್ಧಿ ಇಲಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶ, ಕರ್ನಾಟಕ ರಾಜ್ಯ ನೌಕರರ ಸೇವಾ ಸಂಘ ಹಾಗೂ ಸುರಪುರ ನಗರಸಭೆ ಕಾರ್ಯಾಲಯದಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದಪೌರಕಾರ್ಮಿಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ…

Read More

ಕಲಬುರಗಿ ಸಾಹಿತಿ ಪ್ರಮೋದ ಕರಣಂ ಇವರ ಮೂರನೇ ಕಾದಂಬರಿ “ಹುಟ್ಟು ಸಾವು ಎರಡರ ನಡುವೆ’ ಕನ್ನಡ ಪುಸ್ತಕ ಲೋಕಾರ್ಪಣೆ

ಕಲಬುರಗಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಮೈಸೂರು ದಸರಾ ಮಹೋತ್ಸವ ಸಮಿತಿ-೨೦೨೫ ರಂದು ಮೈಸೂರು ದಸರಾ ಇವರುಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ:೨೮.೦೯.೨೦೨೫ ಮಹೋತ್ಸವ-೨೦೨೫ ರಲ್ಲಿ ಕಲಬುರಗಿಯ ಸಾಹಿತಿಯಾಗಿರುವ ಶ್ರೀ ಪ್ರಮೋದ ಕರಣಂ ಇವರ ಮೂರನೇ ಕಾದಂಬರಿ “ಹುಟ್ಟು ಸಾವು ಎರಡರ ನಡುವೆ” ಯನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿರುವ ಡಾ. ಮಾನಸ ಇವರ ಅಧ್ಯಕ್ಷತೆಯಲ್ಲಿ ನಾಡಿನ ಖ್ಯಾತ ಸಾಹಿತಿಯಾಗಿರುವ ಶ್ರೀ ಎಂ. ಕೆ. ಹರಿಚರಣ ತಿಲಕ್ ಇವರು ಲೋಕಾರ್ಪಣೆಗೊಳಿಸುತ್ತಿದ್ದು, ಇದು ಕಲಬುರಗಿಯ ಯುವ ಬರಹಗಾರರಾಗಿರುವ…

Read More

ಕೋಲಿ/ಕಬ್ಬಲಿಗ ಸಮಾಜದ ಅಭಿವೃದ್ಧಿಗೆ ವಿವಿಧ ಕಾಮಗಾರಿಗಳಿಗೆ ರೂ೧.೨೦ ಕೋಟಿ ಅನುದಾನ ಬಿಡುಗಡೆ: ಡಾ.ಸಾಬಣ್ಣ ತಳವಾರ

ಕಲಬುರಗಿ: ಮಹರ್ಷಿ ವೇದವ್ಯಾಸ ಮಂಥನ ಮತ್ತು ಪ್ರೇರಣಾ ಟ್ರಸ್ಟಿನ ಅಡಿಯಲ್ಲಿ ನಡೆಯಲಿರುವ ಸ್ವಾಭಿಮಾನಿ ಶ್ರೀ ವಿಠ್ಠಲ್ ಹೇರೂರ ಮೆಟ್ರಿಕ್ ನಂತರದ ಉಚಿತ ವಸತಿ ನಿಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ. ಸಾಬಣ್ಣ ತಳವಾರ್ ಅವರು ಭೂಮಿ ಪೂಜೆ ನೆರವೇರಿಸಿ, ಕಟ್ಟಡ ನಿರ್ಮಾಣಕ್ಕಾಗಿ ರೂ.೩೦ ಲಕ್ಷ ಅನುದಾನ ಮಂಜೂರು ಮಾಡಿರುವುದಾಗಿ ಘೋಷಿಸಿದರು. “ಕೋಲಿ/ಕಬ್ಬಲಿಗ ಸಮಾಜ ಕಲಬುರಗಿ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಹಿಂದುಳಿದ ಸ್ಥಿತಿಗತಿಗಳಲ್ಲಿದೆ. ಈ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತ…

Read More

ಸರ್ಕಾರ ಕೂಡಲೇ ಹೆಚ್ಚಿನ ಪರಿಹಾರ ಘೋಷಿಸಲಿ

ವಡಗೇರಾ ತಾಲೂಕಿನ ವಿವಿಧೆಡೆ ಬೆಳೆನಷ್ಟ ವೀಕ್ಷಣೆ ಬಿಜೆಪಿ ಯುವ ನಾಯಕ ಮಹೇಶರಡ್ಡಿ ಮುದ್ನಾಳ್ ಆಗ್ರಹ ಯಾದಗಿರಿ: ಮಹಾರಾಷ್ಟ್ರದಿಂದ ಭೀಮಾ‌ನದಿಗೆ ಅಧಿಕ ಪ್ರಮಾಣದ ನೀರು ಹರಿ ಬಿಟ್ಟಿರುವುದು ಮತ್ತು ಭಾರಿ ಮಳೆಯಿಂದ ಬೆಳೆನಷ್ಟವಾದ ಹಿನ್ನಲೆಯಲ್ಲಿ ಬಿಜೆಪಿ ಯುವ ನಾಯಕ ಮಹೇಶರಡ್ಡಿ ಮುದ್ನಾಳ್ ಶುಕ್ರವಾರ ವಡಗೇರಾ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಭೇಟಿ ನೀಡಿ, ರೈತರ ಅಳಲು ಆಲಿಸಿದರು. ಮೊದಲು ಹಾಲಗೇರಾ, ಗೋಡಿಹಾಳ, ಕುಮನೂರು ಗ್ರಾಮಗಳಿಗೆ ಭೇಟಿ ನೀಡಿ ರೈತರು ಬೆಳೆದ ಹತ್ತಿ ಬೆಳೆ ಹಾಳಾಗಿದ್ದನ್ನು ವೀಕ್ಷಿಸಿದರು. ಈ ವೇಳೆ ರೈತರು…

Read More

ಪ್ರವಾಹ ಪೀಡಿತ ಪ್ರದೇಶ ಮತ್ತು ಬೆಳೆ ಹಾನಿ ವೀಕ್ಷಣೆ

ಗಾಣಗಾಪೂರ,‌ಸೊನ್ನಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ: ಕಲಬುರಗಿ,ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ.-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಗುರುವಾರ ಮಹಾರಾಷ್ಟ್ರದ ವೀರ್, ಉಜನಿ, ಸಿನಾ ಜಲಾಶಯ ಮತ್ತು ಬೋರಿ ನದಿಯಿಂದ ಅಪಾರ ಪ್ರಮಾಣದ ನೀರು ಭೀಮಾ ನದಿಗೆ ಹರಿಬಿಟ್ಟ ಕಾರಣ ಪ್ರವಾಹದ ಬೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಗಾಣಗಾಪುರ, ಸೊನ್ನ ಬ್ರಿಡ್ಜ್ ಕಂ ಬ್ಯಾರೇಜ್ ವೀಕ್ಷಣೆ ಮಾಡಿ ಸಂತ್ರಸ್ತರ ಅಹವಾಲು ಆಲಿಸಿದರು. ಮೊದಲಿಗೆ ದೇವಲ ಗಾಣಗಾಪೂರಕ್ಕೆ ಭೇಟಿ ನೀಡಿದ‌ ಸಚಿವರು,…

Read More

ಕಾಳಜಿ ಕೇಂದ್ರಕ್ಕೆ | ಬೆಳೆ ಹಾನಿ ಪ್ರದೇಶಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ಪರಿಶೀಲನೆ

ಅಫಜಲಪುರ : ತಾಲೂಕಿನ ದೇವಲ್ ಗಾಣಗಾಪುರ ಗ್ರಾಮದ ಬಳಿ ತಾತ್ಕಾಲಿಕವಾಗಿ ಸ್ಥಾಪಿಸಲಾಗಿರುವ ಕಾಳಜಿ ಕೇಂದ್ರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳೊಂದಿಗೆ ಮಾತನಾಡಿ, ಸೌಲಭ್ಯ ಒದಗಿಸಿರುವುದರ ಕುರಿತು ಮಾಹಿತಿ ಪಡೆದುಕೊಂಡರು. ತಾಲೂಕಿನ ಮಳೆಯಿಂದ ಹಾನಿಗೊಳಗಾದ ಬೆಳೆಗಳನ್ನು ಕೂಡಾ ಸಚಿವರ ಪರಿಶೀಲಿಸಿ ರೈತರೊಂದಿಗೆ ಮಾತನಾಡಿದರು.ತೊಗರಿ ಸೇರಿದಂತೆ ಇತರೆ ಬೆಳೆ ಹಾನಿಗೀಡಾಗಿರುವುದನ್ನು ಪರಿಶೀಲಿಸಿದ ಸಚಿವರು ಸ್ಥಳದಲ್ಲಿದ್ದ ಕೃಷಿ ಹಾಗೂ ಇತರೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಬೆಳೆ ಹಾನಿಯಾದ ಕುರಿತು ಸಮರ್ಪಕ ಹಾಗೂ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದರು.

Read More

ಶಾಲಾ ಮಕ್ಕಳ ಕಲಾ ಪ್ರದರ್ಶನ

ಚಿತ್ತಾಪುರ ತಾಲೂಕಿನ ಸ್ಟೇಷನ್ ತಾಂಡಾದ ತುಕಾರಾಮ ಖೀರು ನಾಯಕ್ ಏರಿಯಾದಲ್ಲಿ ಮೂರನೇ ವರ್ಷದ ನವರಾತ್ರಿ ಕಾರ್ಯಕ್ರಮದ ನಿಮಿತ್ಯ ಶಾಲೆಗಳ ಮಕ್ಕಳ ಕಲಾ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಪ್ರಾರ್ಥನಾ ಶಾಲೆಯ ವಿದ್ಯಾರ್ಥಿಗಳು ಹಾಗೂ ಎಕ್ಸಲೆಂಟ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದರು ಕಾರ್ಯಕ್ರಮದ ನಿರ್ಣಾಯಕರಾಗಿ ಶಂಕರ್ ಚೋಕ್ಲಾ ಚೌಹಾನ್ ರವಿ ಜಯರಾಮ್ ರಾಠೋಡ್ ಹಾಗೂ ವೆಂಕಿ ಜಾದವ್ ವಿನೋದ್ ಚೋಕ್ಲಾ ಚೌಹಾನ್ ರಮೇಶ್ ಹನುಮ ಪವಾರ ಆಗಿದ್ದರು . ಈ ಒಂದು ಕಲಾ ಸ್ಪರ್ಧೆಯಲ್ಲಿ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಒಳ್ಳೆಯ…

Read More
error: Content is protected !!