ಎಲ್ಹೇರಿ ಮತ್ತು ಚಿನ್ನಕಾರ ಗ್ರಾಮ ಪಂಚಾಯಿತಿಗೆ ಸಿಇಒ ಭೇಟಿ
ಗುರುಮಠಕಲ್: ತಾಲೂಕಿನ ಏಲೇರಿ ಮತ್ತು ಚಿನ್ನಕಾರ ಗ್ರಾಮ ಪಂಚಾಯಿತಿಗೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಓರಾಡಿಯಾ ಮತ್ತು ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕ ಸಿ ಬಿ ದೇವರಮನಿ ಭೇಟಿ ನೀಡಿದರು. ಎಲ್ಹೇರಿ ಗ್ರಾಮದಲ್ಲಿ ಸಂಚರಿಸಿ ಇಂಗು ಗುಂಡಿ ಕಾಮಗಾರಿಗಳು, ಶೌಚಾಲಯ, ಜೆಜೆಎಮ್ ಕಾಮಗಾರಿ, ಅಂಗನವಾಡಿ ಕೇಂದ್ರ ವೀಕ್ಷಿಸಿದರು. ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲು ಪಿಡಿಒ ಅವರಿಗೆ ಸೂಚಿಸಿದರು. ನಂತರ 12ನೇ ಶತಮಾನದ ಪುರಾತನ ಎಲೆಕೇತೇಶ್ವರ ದೇವಾಲಯ ವೀಕ್ಷಿಸಿದರು. ಚಿನ್ನಕಾರ ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ಸರ್ಕಾರಿ ಹಿರಿಯ…


