ಯಾದಗಿರಿ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ/ಶೈಕ್ಷಣಿಕ ಸಮೀಕ್ಷೆ ಸೆ 22 ರಿಂದ ಅ 7 ರ ರವರೆಗೆ ನಡೆಯಲಿದೆ. ಈ ಸಮೀಕ್ಷೆಯ ವಿವರವಾದ ಮಾಹಿತಿ ಹಾಗೂ ಮುಸ್ಲಿಂ ಸಮೂದಾಯದವರಿಗೆ ಜಾಗೃತಿ ಮೂಡಿಸಲು ಸಚಿವ ಜಮೀರ ಅಹ್ಮದ ಖಾನ ಅವರ ಅಧ್ಯಕ್ಷತೆಯಲ್ಲಿ ಧರ್ಮ ಗುರುಗಳು, ಅನೇಕ ಮುಸ್ಲಿಂ ಸಮೂದಾಯದ ಮುಖಂಡರು ಹಾಗೂ ಅಲ್ಪಸಂಖ್ಯಾತರ ಆಯೋಗ ಅಧ್ಯಕ್ಷರಾದ ಯು. ನಿಸ್ಸಾರ ಅಹ್ಮದ ರವರು ಕೂಡ ಭಾಗಿಯಾಗಿದ್ದರು. ಈ ಸಭೆಯಲ್ಲಿ ಕೈಕೊಂಡ ನಿರ್ಣಯ ಹಾಗೂ ಸಲಹೆಯಂತೆ ಯಾದಗಿರಿಯಲ್ಲಿ ತಂಜಿಮುಲ್ ಮುಸ್ಲಿಮೀನ ಮತ್ತು ಬೈತುಲ್ ಮಾಲ ಯಾದಗಿರಿ ವತಿಯಿಂದ ನಗರದ ಬೈತುಲ್ ಮಾಲ ಫಂಕ್ಷನ ಹಾಲನಲ್ಲಿ ಧಾರ್ಮಿಕ ಮುಖಂಡರು ಹಾಗೂ ನಗರದ ಗಣ್ಯರ ಸಭೆ ಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಪ್ರೊಜೆಕ್ಟರ ಮುಖಾಂತರ ಪ್ರಶ್ನಾವಳಿ ಸಂಖ್ಯೆ 1 ರಿಂದ 60 ರ ವರೆಗೆ ವಿವರವಾದ ಮಾಹಿತಿ ನೀಡಲಾಯಿತು. ಮುಸ್ಲಿಂಮರ ಜಾಗೃತಿ ಮೂಡಿಸಲು ಮಸೀದಿಗಳಲ್ಲಿ ಶುಕ್ರವಾರ ನಮಾಜಿನ ನಂತರ ಸಮೀಕ್ಷೆಯ ಬಗ್ಗೆ ಮಾಹಿತಿ ನೀಡಲು ತಿಳಿಸಲಾಯಿತು. ಯಾದಗಿರಿ ನಗರದ ವಿದ್ಯಾವಂತ ಯುವಕರು ವಿಶೇಷವಾಗಿ ಗ್ರಾಮಾಂತರ ಪ್ರದೇಶದ ಯುವಕರ ತಂಡ ರಚಿಸಿ ಮುಸ್ಲಿಂ ಸಮೂದಾಯದ ಜನತೆಗೆ ಸಹಾಯ ಮಾಡಲು ತಿಳಿಸಲಾಯಿತು.
ಈ ಸಮೀಕ್ಷೆ ಯಲ್ಲಿ ಮುಸ್ಲಿಂ ಸಮೂದಾಯದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮೀಕ್ಷೆ ಯಶಸ್ವಿಗೊಳಿಸಲು
ಉಪಾಧ್ಯಕ್ಷರು ತಂಜಿಮುಲ್ ಮುಸ್ಲಿಮೀನ , ಬೈತುಲಮಾಲ್ ಯಾದಗಿರಿ,ವಹೀದ ಮಿಯಾ
ಹಾಗು ಸದಸ್ಯರು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗ ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.