ಹಾಲುಮತ ಗುರು ಪಿಠದ ಶಾಂತಮಯ ಶ್ರೀಗಳ 33ನೇ ಹುಟ್ಟು ಹಬ್ಬ ಆಚರಣೆ

ಯಾದಗಿರಿ: ಮನುಷ್ಯ ಜೀವಿತಾವಧಿಯಲ್ಲಿ ಸಮಾಜಮುಖಿ ಹಾಗೂ ಪರೋಪಕಾರಿ ಕೆಲಸಗಳನ್ನು ಮಾಡಿದಾಗ ಮಾತ್ರ ಜಿವನ ಸಾರ್ಥಕವಾಗುತ್ತದೆ ಎಂದು ಸಿರುಗುಪ್ಪದ ಪರಮಪೂಜ್ಯ ಶ್ರೀ ಕೈವಲ್ಯಾನಂದ ಮಹಾಸ್ವಾಮಿಗಳು ನುಡಿದರು. ಹುಣಸಗಿ ತಾಲೂಕಿನ ಅಗತಿರ್ಥ ಗ್ರಾಮದಲ್ಲಿ ಶ್ರೀ ಮಠದ ಭಕ್ತರಿಂದ ಹಮ್ಮಿಕೊಂಡಿದ್ದ ಶ್ರೀ ಮದ್ ಜಗದ್ಗುರು ರೇವಣಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ರೇವಣಸಿದ್ದೇಶ್ವರ ಶಾಂತಮಯ ಮಹಾಸ್ವಾಮಿಗಳ 33ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಶಾಂತಮಯ ಶ್ರೀಗಳು ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಆಧ್ಯಾತ್ಮದಲ್ಲಿ ಹೆಚ್ಚಿನ ಪರಿಣಿತಿ ಪಡೆದು ಗ್ರಾಮೀಣ ಭಾಗದಲ್ಲಿ ಹಲವಾರು ಜಾಗೃತಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದಲ್ಲಿ ಉತ್ತಮ ಸಂದೇಶ ನೀಡುತ್ತಿರುವ ಅವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.ಮಾಲಹಳ್ಳಿಯ ಮಾಳಿಂಗರಾಯ ದೇವಸ್ಥಾನ ಪಟ್ಟದ ಪೂಜಾರಿಗಳಾದ ಕೆಂಚರಾಯ ಪೂಜಾರಿ ಮಾತನಾಡಿ. ಶಾಂತಮಯ ಶ್ರೀಗಳು ಅಗತೀರ್ಥ ಮಠದ ಜವಾಬ್ದಾರಿ ವಹಿಸಿಕೊಂಡ ನಂತರ ಮಠವು ಅಭಿವೃದ್ಧಿಗೆ ಹಗಲು ಇರುಳು ಎನ್ನದೆ ಶ್ರಮಿಸಿದ್ದಾರೆ.ಅವರ ಪರಿಶ್ರಮದಿಂದಲೆ ಇಂದು ಮಠವು ಅಭಿವೃದ್ಧಿ ಹೊಂದಿದೆ ಅವರ ಜೊತೆ ನಾವೆಲ್ಲರೂ ಸದಾ ಕಾಲ ಅವರಿಗೆ ಬೆಂಬಲವಾಗಿರಬೇಕು ಎಂದರು.ಪ್ರತಿ ವರ್ಷವೂ ಮಠದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಂಡು ಎಲ್ಲಾ ಸಮಾಜವನ್ನು ಅತ್ಯಂತ ಪ್ರೀತಿ ವಿಶ್ವಾಸದಿಂದ ಕಂಡು ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಅವರಿಗೆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಶುಭ ಹಾರೈಸಿದರು ಇದೇ ಸಮಯದಲ್ಲಿ ಭಕ್ತರು ಶ್ರೀಗಳ ಪಾದಪೂಜೆ ನೆರವೇರಿಸಿದ ನಂತರ ಭಕ್ತರು ಅವರಿಗೆ ಹುಟ್ಟು ಹಬ್ಬದ ಶುಭ ಕೋರಿ ಸಿಹಿ ಹಂಚಲಾಯಿತು.ಈ ಸಂದರ್ಭದಲ್ಲಿ ಹಾಲುಮತ ಗುರು ಪೀಠ ಸರೂರ ಅಗತೀರ್ಥದ ಶ್ರೀ ರೇವಣಸಿದ್ದೇಶ್ವರ ಶಾಂತಮಯ ಮಹಾಸ್ವಾಮಿಗಳು, ಪರಮ ಪೂಜ್ಯಶ್ರೀ ಮಾಳಿಂಗರಾಯ ಕೇರೂಟಗಿ,ಹಾಗೂ ಪಟ್ಟದ ಪೂಜಾರಿಗಳು,ರಾಜಕೀಯ ಹಾಗೂ ವಿವಿಧ ಸಂಘಟನೆಯ ಮುಖಂಡರು ಭಕ್ತಾದಿಗಳು ಇನ್ನಿತರರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!