ಶಿಕ್ಷಕರು ವಿಧ್ಯಾರ್ಥಿಗಳಿಗೆ ಬೋಧನೆ ಜೊತೆಗೆ ಸಂಸ್ಕಾರ ಮೂಡಿಸಿ : ಸಚಿವ ಡಾ. ಪಾಟೀಲ್

ಯಾದಗಿರಿ : ಪ್ರಸಕ್ತ ದಿನಗಳಲ್ಲಿ ಯಾವುದೇ ಶಿಕ್ಷಣ ಸಂಸ್ಥೆಗಳಾಗಲಿ, ಅಲ್ಲಿನ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಮೊದಲು ಶಿಸ್ತು, ಸಮಯ ಪ್ರಜ್ಞೆ, ಗುಣಮಟ್ಟದ ಬೋಧನೆ ಜೊತೆಗೆ ಅವರಲ್ಲಿ ಉತ್ತಮ ಸಂಸ್ಕಾರ ಮೂಡಿಸಿದಲ್ಲಿ ಮಾತ್ರ ಅವರು ಭವಿಷ್ಯದಲ್ಲಿ ಒಳ್ಳೇಯ ನಾಗರೀಕರಾಗಿ ಬದುಕು ರೂಪಿಸಿಕೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಾರೆ ಎಂದು ರಾಜ್ಯ ವೈಧ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.

ನಗರದ ಹೊರ ವಲಯದಲ್ಲಿರುವ ಆರ್ಯಭಟ್ಟ ಅಂತರರಾಷ್ಟಿçÃಯ ಶಾಲಾ ಅಕಾಡೆಮಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಶಾಲೆಯ ೮ನೇ ವರ್ಷದ ಸಂಸ್ಥಾಪನಾ ಉದ್ಘಾಟಿಸಿ ಮಾತನಾಡಿದರು. ಇಂದು ನಾವೂ ದೇಶದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿ, ವಿಶ್ವದ ಗಮನ ಸೆಳೆಯುತ್ತಿದ್ದರೆ, ಇನ್ನೊಂದು ಕಡೆ ಸಮಾಜದಲ್ಲಿ ಮಾನವೀಯ ಮೌಲ್ಯಗಳ ಕುಸಿತವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ, ನಮ್ಮ ಪ್ರತಿಭಾವಂತ ವಿಧ್ಯಾರ್ಥಿಗಳು ಬದುಕಿನಲ್ಲಿ ಹಣ ಗಳಿಸಬೇಕು, ಇನ್ನೂ ಹೆಚ್ಚು ಸಾಧನೆ ಮಾಡಬೇಕೆಂಬ ಉದ್ದೇಶದಿಂದ ಅಮೇರಿಕಾ ಇನ್ನೀತರ ವಿಶ್ವದ ದೇಶಗಳಿಗೆ ತೆರಳುತ್ತಿದ್ದಾರೆ, ಅವರಿಗೆ ಉತ್ತಮ ಶಿಕ್ಷಣ ಒದಗಿಸಿದ ತಂದೆ-ತಾಯಿ, ಬಂಧುಗಳು ಮಾನವೀಯ ಸಂಬAಧಗಳ ಕೊರತೆ ಎದುರಿಸಿ, ಬೃಹತ್ ನಗರಗಳಲ್ಲಿ ಅನಿವಾರ್ಯವಾಗಿ ಅನಾಥ ಆಶ್ರಮಗಳಲ್ಲಿ ಜೀವನ ಕಳೆಯುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು,
ದೇಶದ ಪ್ರಗತಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ, ಅವರು ವಿದ್ಯಾರ್ಥಿಗಳಿಗೆ ಕೌಶಲ್ಯ ಶಿಕ್ಷಣ ನೀಡುವ ಜೊತೆಗೆ ಅವರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು, ಇದನ್ನೆ ಈ ಹಿಂದೆ ಬಸವಾದಿ ಶರಣರು ತಮ್ಮ ವಚನ ಸಾಹಿತ್ಯದಲ್ಲಿ ಪ್ರಸ್ತಾಪಿಸಿ, ಕಾಯಕದ ಜೊತೆಗೆ ದಾಸೋಹದ ಮಹತ್ವ ತಿಳಿಸಿ, ಸಮ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದರು ಎಂದು ಹೇಳಿದರು.
ಯಾವುದೇ ಶಿಕ್ಷಣ ಸಂಸ್ಥೆಯಾಗಲಿ ತನ್ನದೇ ಆದ ಕೆಲವು ಮಹತ್ವದ ಉದ್ದೇಶಗಳೊಂದಿಗೆ ಸಾಕಾರಕ್ಕಾಗಿ ಶ್ರಮಿಸಬೇಕು, ಅಂದಾಗ ಮಾತ್ರ ಎಲ್ಲರ ಗೌರವ ಸಂಪಾದಿಸುವ ಜೊತೆಗೆ ಶೈಕ್ಷಣಿಕ ಪ್ರಗತಿಗೆ ಮಾದರಿಯಾಗಲು ಸಾಧ್ಯ ಎಂದರು. ಇAದು ನಾವೂ ಮಕ್ಕಳಿಗೆ ಏನು ಅವಶ್ಯಕತೆ ಇದೆ ಅದನ್ನು ಮಾತ್ರ ನೀಡಬೇಕು, ಅವರ ಶಾಲಾ-ಕಾಲೇಜು ಅಭ್ಯಾಸ ಹಾಗೂ ಇತರ ಚಟುವಟಿಕೆಗಳ ಸಕಾಲಕ್ಕೆ ಸೂಕ್ತ ಸಲಹೆ, ಬೆಂಬಲ ನೀಡಬೇಕು, ನಮ್ಮ ಕೌಟುಂಬಿಕ ಜೀವನ ಗಮನಿಸುವ ಮಕ್ಕಳು ಮುಂದೆ ಅದೇ ದಾರಿಯಲ್ಲಿ ಜೀವನ ಸಾಗಿಸುತ್ತಾರೆ, ಪೋಷಕರು ಸೂಕ್ಷö್ಮತೆ ಹಾಗೂ ಜವಾಬ್ದಾರಿಯುತವಾಗಿ ಅವರೊಂದಿಗೆ ವರ್ತಿಸಬೇಕೆಂದು ಸಲಹೆ ನೀಡಿದರು. ದೇಶದಲ್ಲಿ ಇಂದು ಜನಸಂಖ್ಯೆ ಹೆಚ್ಚಳದಿಂದ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿರುವುದನ್ನು ಕಾಣುತ್ತೇವೆ, ವಾಸ್ತವಿಕತೆ ಅರಿತು ಸರ್ಕಾರಗಳು ಎಲ್ಲಾ ಭಾಗದಲ್ಲಿ ಕೌಶಲ್ಯ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದೆ, ಅದರ ಲಾಭ ವಿದ್ಯಾರ್ಥಿಗಳು ಪಡೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಹಾಗೂ ಏಷ್ಯಾದ ಅತ್ಯುನ್ನತ ಗೌರವವಾದ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಸಂದೀಪ್ ಪಾಂಡೆ ಮಾತನಾಡಿ, ಈ ಭಾಗದಲ್ಲಿ ರಡ್ಡಿಯವರು ವಿದ್ಯಾರ್ಥಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಜೊತೆಗೆ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಬದಲಾವಣೆಗೆ ನಿರಂತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರಯತ್ನಿಸುವ ಕಾರ್ಯ ಶ್ಲಾಘನೀಯ ಎಂದರು.ನನ್ನ ಅಭಿಪ್ರಾಯದ ಪ್ರಕಾರ ಯಾವುದೇ ಸರ್ಕಾರಿ-ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲಾ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು, ಶಿಕ್ಷಕರು ಮಕ್ಕಳ ಮನೋಸ್ಥಿತಿ ಅರಿತು ಬೋಧನೆ ಮಾಡಬೇಕು, ನೀವೇ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಗಮನಿಸುತ್ತೀರಿ, ಎಲ್ಲದಕ್ಕೂ ಪರೀಕ್ಷೆಗಳ ಅವಶ್ಯಕತೆ ಇಲ್ಲ ಎಂಬುದು ನನ್ನ ವಾದ, ವಿದ್ಯಾರ್ಥಿಗಳಿಗೆ ಯಾವುದೇ ಕ್ಷೇತ್ರದಲ್ಲಾಗಲಿ ಉದ್ಯೋಗಳನ್ನು ನೀಡುವಾಗ ಮಾತ್ರ ಪರೀಕ್ಷೆ ನಡೆಸಬೇಕು ಎಂದು ಪ್ರತಿಪಾದಿಸಿದರು.
ಶಾಲೆಗಳಲ್ಲಿ ನಾವೂ ಯಾವುದೇ ಸ್ಪರ್ಧೆಗಳನ್ನು ನಡೆಸಿದರು ಕೇವಲ ೩ ಜನ ವಿದ್ಯಾರ್ಥಿಗಳಿಗೆ ಮಾತ್ರ ಬಹುಮಾನಗಳನ್ನು ನೀಡಬಾರದು, ಅದರಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಬಹುಮಾನವನ್ನು ನೀಡಬೇಕು, ಅದು ಅವರ ಮನಸ್ಸಿನ ಮೇಲೆ ಸಕರಾತ್ಮಕ ಪರಿಣಾಮ ಬೀರಿ, ಇತರರಂತೆ ಸಾಧನೆ ಮಾಡಬೇಕೆಂಬ ಛಲ ಮೂಡುತ್ತದೆ ಎಂದು ತಿಳಿಸಿದರು,
ಪೋಷಕರು ದಯವಿಟ್ಟು ತಮ್ಮ ಮಕ್ಕಳ ಮೇಲೆ ಅತಿಯಾದ ಒತ್ತಡ ಹಾಕಬೇಡಿ, ಇದರಿಂದ ಅವರಲ್ಲಿ ಭವಿಷ್ಯದ ಬಗ್ಗೆ ಗೊಂದಲ ಮೂಡುತ್ತದೆ, ಅವರ ಆಸಕ್ತಿಯಂತೆ ಮುಕ್ತವಾಗಿ ಬೆಳೆಯಬೇಕು, ಅಂದಾಗ ಮಾತ್ರ ಅವರು ತಮ್ಮ ಗುರಿ ತಲುಪಿ, ಸ್ವಾವಲಂಭನೆ ಬದುಕು ಸಾಗಿಸುತ್ತಾರೆ, ಈ ದಿಶೆಯಲ್ಲಿ ಎಲ್ಲರೂ ಎಚ್ಚರಿಕೆ ವಹಿಸುವುದು ಅವಶ್ಯಕವಾಗಿದೆ ಎಂದರು.
ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಮಾತನಾಡಿ, ಶಿಕ್ಷಣ ಸಂಸ್ಥೆ ಆವರಣದಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡಿರುವುದರಿಂದ ಇದು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಅಕಾಡೆಮಿಯ ಅಧ್ಯಕ್ಷ ಸುಧಾಕರಡ್ಡಿ ಮಾಲಿ ಪಾಟೀಲ್ ಅನಪೂರ ಮಾತನಾಡಿ, ಶಿಕ್ಷಣ ಸಂಸ್ಥೆಯ ಉದ್ದೇಶಗಳನ್ನು ವಿವರಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ, ಗೌರವಿಸಿದರು,
ವೇದಿಕೆ ಮೇಲೆ ಶಿಕ್ಷಣ ಸಂಸ್ಥೆಯ ನಿರ್ದೇಶಕ ಪಿ. ಅರವಿಂಧಾಕ್ಷಣ, ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ, ಪ್ರಾಂಶುಪಾಲರಾದ ಡಿ. ವೆಂಕಟೇಶ್ವರ, ಹರಿನಾಥರೆಡ್ಡಿ, ವೆಂಕಟರಡ್ಡಿ ಪಾಟೀಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರಡ್ಡಿ ಪಾಟೀಲ್ ಅನಪೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಶಾಲೆಯಲ್ಲಿ ವಿಧ್ಯಾರ್ಥಿಗಳು ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ಗಣ್ಯರು ಹಾಗೂ ಪೋಷಕರು ವಿಕ್ಷೀಸಿದರು.
ನಂತರ ನಡೆದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಅಲ್ಲಿ ನೆರೆದಿದ್ದ ಎಲ್ಲರ ಗಮನ ಸೆಳೆಯಿತು,

 

 

Leave a Reply

Your email address will not be published. Required fields are marked *

error: Content is protected !!