ಯಾದಗಿರಿ: ಇತ್ತಿಚಿಗೆ ಕನಸು ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವಾ ಟ್ರಸ್ಟ್ ಹುಲಕಲ್(ಜೆ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ ಸಾಂಸ್ಕೃತಿಕ ಹಾಗೂ ವ್ಯಕ್ತಿತ್ವ ವಿಕಾಸನ ಕಾರ್ಯಕ್ರಮವನ್ನು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಯಾದಗಿರಿಯಲ್ಲಿ ಏರ್ಪಡಿಸಲಾಗಿತ್ತು. ಕಾಲೇಜು ಆವರಣದಲ್ಲಿ ಗಣ್ಯರಿಂದ ಸಸಿ ನೆಡುವುಡುದರ ಮೂಲಕ ಕನಸು ಟ್ರಸ್ಟ್ ಉದ್ಘಾಟನೆಯನ್ನು ಮಾಡಲಾಯಿತು.
ದಕ್ಷ ಹಾಗೂ ಪ್ರಾಮಾಣಿಕ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಶೀಬಾ ಜಿಲಿಯನ್ ರವರು ಜ್ಯೋತಿ ಬೆಳಗುವುದರ ಮೂಲಕ ಸಾಂಸ್ಕೃತಿಕ ಹಾಗೂ ವ್ಯಕ್ತಿತ್ವ ವಿಕಾಸನ ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಿ ಮಾತಾನಾಡಿದ ಅವರು ಕಲಿಕೆಗೆ ಒತ್ತು ಕೊಟ್ಟಷ್ಟು ಸಾಧನೆಯ ಹಾದಿಯು ಸುಗಮವಾಗುತ್ತದೆ, ಹೆಣ್ಮಕ್ಕಳಿಗಾಗಿ ಸರಕಾರದಿಂದ ಹಲವಾರು ಯೋಜನೆಗಳು, ಸಂಘ-ಸOಸ್ಥೆಗಳು ಸಾಕಷ್ಟು ಪ್ರಮಾಣದಲ್ಲಿ ಶಿಕ್ಷಣಕ್ಕೆ ಸಂಬAಧಿಸಿದAತೆ ಕೆಲಸ ಮಾಡ್ತಾ ಇವೆ. ನೀವು ನಿರಂತರವಾದ ಕಲಿಕೆಗೆ ಒತ್ತು ಕೊಟ್ಟು ದೊಡ್ಡ ದೊಡ್ಡ ಅಧಿಕಾರಿಗಳಾಗುವ ಕಡೆಗೆ ಗಮನ ಕೊಡಿ ಎಂದರು, ಕನಸು ಟ್ರಸ್ಟ್ ನ ಧ್ಯೇಯ ಉದ್ದೇಶಗಳು ಶೈಕ್ಷಣಿಕ ಮತ್ತು ಸಾಂಸ್ಕೃತಿಕವಾಗಿ ಹಾಗೂ ಸಾಮಾಜಿಕ ಕಳಕಳಿಯ ಆಲೋಚನೆಗಳು ಸುಂದರವಾಗಿವೆ ಟ್ರಸ್ಟ್ ನ ಮುಂದಿನ ಸಾಮಾಜಿಕ ಕಾರ್ಯಗಳಿಗೆ ಯಶಸ್ಸು ಲಭಿಸಲಿ ಎಂದು ಶುಭಹಾರೈಸಿದರು.
ಕನಸು ಟ್ರಸ್ಟ್ ನ ಅಧ್ಯಕ್ಷರಾದ ದೇವಿಂದ್ರ ಹುಲ್ಕಲ್ (ಜೆ) ರವರು ತಮ್ಮ ಟ್ರಸ್ಟ್ ನ ಧ್ಯೇಯ ಉದ್ದೇಶಗಳಾದ ಗ್ರಾಮೀಣ ಭಾಗದ ಜಾನಪದ ಹಾಗೂ ಹಿರಿಯ ಕಲಾವಿದರಿಗೆ ಕಾರ್ಯಕ್ರಮಗಳಲ್ಲಿ ಅವಕಾಶ ನೀಡಿ ಅವರಿಗೆ ಮುಖ್ಯವಾಹಿನಿಗೆ ತರುವುದು, ಸರಕಾರಿ ಶಾಲಾ ಕಾಲೇಜುಗಲ್ಲಿನ ಪ್ರಸ್ತುತ ಪದವಿ ಓದುತ್ತಿರುವ ಮಕ್ಕಳಲ್ಲಿ ಒತ್ತಡ ನಿವಾರಣೆ. ಬದುಕಿನ ಕನಸುಗಳನ್ನು ಕಟ್ಟಿಕೊಡುವುದು ಅತ್ಯಂತ ಪ್ರಮುಖವಾಗಿದೆ. ಇಂದಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿಗೆ ತಮ್ಮನ್ನು ತಾವು ತಯಾರಿ ಮಾಡಿಕೊಳ್ಳಲು ಇದು ಅತ್ಯಂತ ಸೂಕ್ತವಾದ ಕಾಲವಾಗಿದೆ. ವಿದ್ಯಾರ್ಥಿಗಳನ್ನು ಅವರ ಬದುಕಿನ ಕನಸುಗಳನ್ನು ಪ್ರೋತ್ಸಾಹಿಸುವುದು ಅವಶ್ಯಕತೆ ಇದೆ ಅದಕ್ಕಾಗಿ ಕನಸು ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವಾ ಟ್ರಸ್ಟ್ನ್ನು ಪ್ರಾರಂಭಿಸಿದ್ದೇನೆ ಎಂದು ಮಾತನಾಡಿದರು.
ಶಿಕ್ಷಣ ತಜ್ಞ, ಲೇಖಕರಾದ ಕೆ.ಎಂ. ವಿಶ್ವನಾಥ ಮರತೂರ ಮಾತನಾಡಿ, ಸಂವಹನವು ಬಹು ಮುಖ್ಯವಾದದ್ದು, ಯಾವುದೇ ಅನುಮಾನ ಅಥವಾ ಅರ್ಥವಾಗದ ವಿಷಯಗಳಿದ್ದರೆ ಸಂಕೋಚಪಟ್ಟುಕೊAಡು ಮನದಲ್ಲೇ ಇಟ್ಟುಕೊಂಡರೆ ಮುಂದೆ ಭವಿಷ್ಯದಲ್ಲಿ ಭಾರಿ ನಷ್ಟ ಅನುಭವಿಸಬೇಕಾಗುತ್ತದೆ, ಪ್ರಕೃತಿ ಬಡವ ಶ್ರೀಮಂತ ಎಂದು ತಾರತಮ್ಯ ಮಾಡುವುದಿಲ್ಲ ಹಾಗಾಗಿ ನಾವು ಗ್ರಾಮೀಣ ಭಾಗದವರು ನಗರದ ಪ್ರತಿಷ್ಠಿತ ಕಾಲೇಜಗಳ ವಿದ್ಯಾರ್ಥಿಗಳೊಂದಿಗೆ ನಾವು ಯಾವ ಲೆಕ್ಕ ನಮಗೆಲ್ಲಿ ಯಶಸ್ಸು ದೊರೆಯುತ್ತದೆ ಎಂದು ನಕಾರಾತ್ಮಕ ವಿಚಾರಗಳಿಂದ ಹೇಗೆ ಹೊರಬಂದು ಸಾಧನೆಗಳ ಬೆನ್ನು ಹತ್ತಿ ಸಾಧಕರಾಗುವುದು ಹೇಗೆ ಎಂದು ಉತ್ತರ ಕರ್ನಾಟಕದ ಶೈಲಿಯಲ್ಲಿ ಬೌದ್ಧಿಕ, ಭಾವನಾತ್ಮಕ ಮತ್ತು ಸೃಜನಾತ್ಮಕ ಬೆಳವಣಿಗೆಯ ಪ್ರಮುಖ ಅಂಶಗಳನ್ನು ತಿಳಿಸಿದರು.
ಇನ್ನೊರ್ವ ಸಂಪನ್ಮೂಲ ವ್ಯಕ್ತಿ ಸಲೀಂ ಭಾಷಾ ಮಾತನಾಡಿ ಅರುಣಿಮಾ ಸಿನ್ಹಾ, ಹುಸೇನ್ ಬೋಲ್ಟ್, ಭಾರತದ ಮಹಿಳಾ ಕ್ರಿಟೆಕ್ ವನಿತೆಯರ ಹಾಗೂ ಹಲವು ಸಾಧಕರ ಕುರಿತು ಸ್ಫೂರ್ತಿದಾಯಕ ವಿಷಯಗಳನ್ನು ಹೇಳುತ್ತಾ, ಮುಕ್ತವಾಗಿ ಮಾತನಾಡುವುದು ಹೇಗೆ ? ವೇದಿಕೆಯ ಭಯ ಹೋಗಲಾಡಿಸುವುದು ಹೇಗೆ ? ತಮ್ಮಲ್ಲಿರುವ ವಿಶೇಷವಾದ ಆಲೋಚನೆ ಹಾಗೂ ಚಿಂತನೆಗಳನ್ನು ಸರಳವಾಗಿ ಜನಸಾಮಾನ್ಯರಿಗೆ ತಲುಪುವಂತೆ ಮಾತನಾಡಿದಾಗ ಮಾತ್ರ ಸಮಗ್ರವಾದ ವ್ಯಕ್ತಿತ್ವ ಬೆಳವಣಿಗೆ ಯಾಗುತ್ತದೆ. ಮಕ್ಕಳಿಗೆ ಪಠ್ಯದ ಜೊತೆಗೆ ಇತರೆ ಬದುಕಿನ ಕೌಶಲ್ಯಗಳನ್ನು ಕಲಿಸುವುದು ಅವಶ್ಯಕತೆಯಿದೆ. ಶಿಕ್ಷಣದ ಮೂಲ ಉದ್ದೇಶ ಉತ್ತಮ ವ್ಯಕ್ತಿತ್ವ ರೂಪಿಸುವುದಾಗಿದೆ ಎಂದು ಹೇಳುತ್ತಾ ವಿದ್ಯಾರ್ಥಿನಿಯರಲ್ಲಿ ಪ್ರೇರಣೆ ತುಂಬಿದರು.
ಹಿರಿಯರ ಜಾನಪದ ಕಲಾವಿದರಾದ ಮೋನಪ್ಪ ನಾಟೆಕಾರ್ ರವರ ಜಾನಪದ ಸಂಗೀತ ಹಾಗೂ ಕು. ಶಾರದಾ ಗೋಗಿರವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ರಸದೌತಣವನ್ನು ನೀಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಹರೀಶ್ ರಾಥೋಡ್, ಭೂಮಾಪನ ಇಲಾಖೆಯ ಅಧಿಕಾರಿ ವೆಂಕಟೇಶ್ ಕಣಜಿಕರ್‌ರವರು ಮಾತನಾಡಿದರು. ವೇದಿಕೆ ಮೇಲೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಮೀನಾಕ್ಷಿ ಆರ್. ಹೊಸಮನಿ, ಸ.ಪ್ರ.ದ.ಮ.ಕಾ.ಯಾ.ಯ ಸಹಾಯಕ ಪ್ರಾಧ್ಯಾಪಕರಾದ ಉದಯಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು ಐದನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರು, ಪ್ರಾಧ್ಯಾಪಕರು, ಶಿಕ್ಷಕರು ಮತ್ತು ಸಾರ್ವಜನಿಕರು ಆಗಮಿಸಿ ಆಲಿಸಿದರು.
ಅಚ್ಚುಕಟ್ಟಾಗಿ ಕಾರ್ಯಕ್ರಮದ ನಿರೂಪಣೆಯನ್ನು ಕು. ಸಂಗೀತ ನಾಟೇಕಾರ್ ನಿರ್ವಹಿಸಿದರು, ಸ್ವಾಗತವನ್ನು ಮಲ್ಲಿಕಾರ್ಜುನ ಅರಬೋಳ, ವಂದನಾರ್ಪಣೆಯನ್ನು ಯುವ ಕ್ರೀಡಾಪಟು ಮಲ್ಲು ಅಭಿನವ ನಡೆಸಿಕೊಟ್ಟರು.


